Anand Asnotikar : ಉತ್ತರ ಕನ್ನಡ: ವಿಧಾನಸಭೆ ಚುನಾವಣೆ ಸ್ಪರ್ಧೆಯಿಂದ ಆನಂದ್ ಆಸ್ನೋಟಿಕರ್ ಹಿಂದೆ ಸರಿಯಲು ಇದೇ ಕಾರಣ !
Anand Asnotikar : ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್ (Anand Asnotikar)ಹೇಳಿದ್ದಾರೆ. ಆ ಮೂಲಕ ಚಾಲ್ತಿಯಲ್ಲಿದ್ದ ಎಲ್ಲಾ ಊಹಾಪೋಹಗಳಿಗೆ ಅವರು ತೆರೆ ಎಳೆದಿದ್ದಾರೆ. ಅಲ್ಲದೆ ಯಾವ ಕಾರಣಕ್ಕೆ ಟಾಕ್ ಸ್ಪರ್ಧಿಸುತ್ತಿಲ್ಲ ಎಂದೂ ಅವರು ವಿವರಿಸಿದ್ದಾರೆ.
ತನ್ನ ತಾಯಿಯ ಆರೋಗ್ಯವು ನಿರಂತರವಾಗಿ ಹದಗೆಡುತ್ತಿರುವ ಕಾರಣ, ನಾನು ರಾಷ್ಟ್ರೀಯ ಪಕ್ಷದಿಂದ ಅಥವಾ ಸ್ವತಂತ್ರವಾಗಿ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ಇತ್ತೀಚೆಗಷ್ಟೇ ಜೆಡಿಎಸ್ ಸೇರಿದ ಕಾಂಗ್ರೆಸ್ ನಾಯಕಿ ಚೈತ್ರಾ ಕೋಟಾರಕರ ಕಾರವಾರದಿಂದ ಸ್ಪರ್ಧಿಸುತ್ತಿದ್ದಾರೆ. ಚುನಾವಣೆಯಲ್ಲಿ ಚೈತ್ರಾ ಅವರ ಪರ ಪ್ರಚಾರ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಆಸ್ನೋಟಿಕರ್, ಅವರು ನನಗೆ ಆತ್ಮೀಯರಾಗಿದ್ದಾರೆ, ನನ್ನ ಜೊತೆ ಉತ್ತಮ ಸಂಬಂಧ ಹೊಂದಿರುವ ಅವರು ನನ್ನ ಹಿತೈಷಿ ಎಂದಿದ್ದಾರೆ.
ಚುನಾವಣೆಗೆ ಸಿದ್ಧರಾಗಲು ದೆಹಲಿಯ ಕೆಲ ನಾಯಕರು ನನಗೆ ಹೇಳಿದರು. ನಾನು ಇಲ್ಲಿ ಸಮೀಕ್ಷೆಯನ್ನು ಕೂಡಾ ನಡೆಸಿದ್ದೇನೆ. ಆದರೂ ತಾಯಿಯ ಆರೋಗ್ಯ ನೋಡಿಕೊಳ್ಳುವ ದೃಷ್ಟಿಯಿಂದ ಈ ಬಾರಿ ಸ್ಪರ್ಧಿಸುತ್ತಿಲ್ಲ.
ಚೈತ್ರಾ ಅವರು ನನ್ನ ಸಹಾಯಕ್ಕೆ ಮನವಿ ಮಾಡಿದರೆ ಖಂಡಿತವಾಗಿಯೂ ನಾನು ಅವರ ಪರ ಪ್ರಚಾರ ಮಾಡುವುದಾಗಿ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ. ಪಡ್ತಿ ಸಮುದಾಯಕ್ಕೆ ಸೇರಿದ ಚೈತ್ರಾ ಕೋಟಾರಕರ್ ಅವರು ಏಪ್ರಿಲ್ 18 ರಂದು ನಾಮಪತ್ರ ಸಲ್ಲಿಸುತ್ತಿದ್ದಾರೆ. ಗಣನೀಯ ಸಂಖ್ಯೆಯ ಮತದಾರರನ್ನು ಹೊಂದಿರುವ ಈ ಸಮುದಾಯದ ಓಟುಗಳು ಚೈತ್ರಾ ಕೋಟಾರಕರ್ ರಿಗೆ ಲಭ್ಯ ಆಗುವ ಸಂಭವ ಇದೆ ಎನ್ನಲಾಗಿದೆ.