7th pay commission: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ; ಮತ್ತೊಮ್ಮೆ ಡಿಎ ಹೆಚ್ಚಳ!!

7th pay commission : ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ಇಲ್ಲಿದೆ. ಈ ಹಿಂದೆ ಡಿಎ ಹೆಚ್ಚಾಗಿದ್ದು, ಇದೀಗ ಮತ್ತೊಮ್ಮೆ ನೌಕರರಿಗೆ ಶೇ.4ರಷ್ಟು ಡಿಎ ಹೆಚ್ಚಾಗಲಿದೆ (DA hike) ಎಂದು ಹೇಳಲಾಗುತ್ತಿದೆ.

 

ಸದ್ಯದಲ್ಲಿಯೇ ಸರಕಾರದಿಂದ ವೇತನ ಹೆಚ್ಚಳದ ಬಗ್ಗೆ ಘೋಷಣೆ ಹೊರಬೀಳಬಹುದಾಗಿದ್ದು, ಏಳನೇ ವೇತನ ಆಯೋಗದ (7th pay commission) ವರದಿಯು ಹೊರ ಬೀಳುವುದರಿಂದ ಸರಕಾರಿ ನೌಕರರಿಗೆ (government employees) ಭಾರೀ ವೇತನ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಳೆದ 2 ಬಾರಿಯೂ ಸರಕಾರ ಶೇ. 4ರಷ್ಟು ಡಿಎ ಹೆಚ್ಚಿಸಿದ್ದು, ಈ ಬಾರಿಯೂ ಜುಲೈ ತಿಂಗಳಲ್ಲಿನಲ್ಲಿ ಮತ್ತೊಮ್ಮೆ ಶೇ 4ರಷ್ಟು ಡಿಎ ಹೆಚ್ಚಿಸಬಹುದು ಎಂಬ ನಿರೀಕ್ಷೆ ಇದೆ.

ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ) ವರದಿ
ಬಿಡುಗಡೆ ಮಾಡಿದ್ದು, ಅದರಲ್ಲಿ ಸರ್ಕಾರ ಜುಲೈ ತಿಂಗಳಲ್ಲಿ ಮತ್ತೊಮ್ಮೆ ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಬಹುದು ಎಂದು ಉಲ್ಲೇಖಿಸಲಾಗಿದೆ. ಆದರೆ, ನಿಖರ ಮಾಹಿತಿ ಇನ್ನೂ ದೊರಕಿಲ್ಲ.

ಡಿಎ ಮೂಲಕ ವೇತನ ಹೇಗೆ ಹೆಚ್ಚಾಗುತ್ತದೆ ಎಂದರೆ, ಕೇಂದ್ರ ಸರ್ಕಾರದ ನೌಕರನ ಮೂಲ ವೇತನವು 18,000 ರೂ ಆಗಿದ್ದರೆ, ತಿಂಗಳಿಗೆ 720 ರೂ ಡಿಎ ಸೇರಿದರೆ ಸಂಬಳವು ಹೆಚ್ಚಾಗುತ್ತದೆ.
ಇದನ್ನು ವಾರ್ಷಿಕ ಆಧಾರದ ಮೇಲೆ ಗಮನಿಸುವುದಾದರೆ ನೌಕರರ ವಾರ್ಷಿಕ ವೇತನದಲ್ಲಿ 8640 ರೂ ಗಳ ಡಿಎ ಸೇರುವುದರಿಂದ ವೇತನ ಹೆಚ್ಚಳವಾಗುತ್ತದೆ.

ನೌಕರರು 56900 ರೂ.ಗಳ ಮೂಲ ವೇತನವನ್ನು ಹೊಂದಿದ್ದರೆ, ಅವರಿಗೆ ತಿಂಗಳಿಗೆ 2276 ರೂ.ಗಳ ಡಿಎಯಿಂದ ವೇತನ ಹೆಚ್ಚಾಗುತ್ತದೆ. ವಾರ್ಷಿಕ ವೇತನದ ಜೊತೆಗೆ 27312 ರೂ.ಗಳಷ್ಟು ಡಿಎ ಹೆಚ್ಚಾಗುತ್ತದೆ ಎನ್ನಲಾಗಿದೆ.

Leave A Reply

Your email address will not be published.