Lakshmana Savadi ಗೆ ಕಾಂಗ್ರೆಸ್’ನಲ್ಲಿ ಯಾವ ಸ್ಥಿತಿ ಬರುತ್ತೆ ಅಂತ ಕಾದು ನೋಡಿ – ನಳಿನ್ ಕುಮಾರ್ ಕಟೀಲ್

Lakshmana Savadi : ಈಗಾಗಲೇ ಚುನಾವಣೆಯ (Election 2023) ಕಾವು ಎಲ್ಲೆಡೆ ಗರಿಗೆದರಿದ್ದು, ಚುನಾವಣೆಗೆ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲುವಿನ ಜಯಭೇರಿ ಸಾಧಿಸಲು ರಾಜಕೀಯ ಪಕ್ಷಗಳು ಭರದ ಸಿದ್ಧತೆ ನಡೆಸುತ್ತಿದೆ. ಮೇ 10ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಗೆ( Election 2023) ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಬಿಜೆಪಿ (BJP) ಪಾಳಯದಲ್ಲಿ ಎಲ್ಲರ ನಿರೀಕ್ಷೆ ತಲೆ ಕೆಳಗಾಗುವ ಹಾಗೆ ಈ ಬಾರಿ ಹಳೆಯ ಮುತ್ಸದ್ದಿ ನಾಯಕರನ್ನು ಬಿಟ್ಟು ಹೊಸ ಮುಖಗಳಿಗೆ ಅವಕಾಶ ನೀಡಿರುವುದು ಕಂಡುಬಂದಿದೆ. ಹೀಗಾಗಿ, ಟಿಕೇಟ್ ವಂಚಿತರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಸದ್ಯ, ಈ ಕುರಿತು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು(Nalin Kumar Kateel) ಅವರು ಪ್ರತಿಕ್ರಿಯೆ ನೀಡಿದ್ದಾರೆ.

 

ಬಿಜೆಪಿ ಚುನಾವಣಾ ಪಟ್ಟಿ ಬಿಡುಗಡೆ ಆಗುತ್ತಿದ್ದಂತೆ ಪಕ್ಷದ ಕೆಲ ನಾಯಕರಲ್ಲಿ ಅಸಮಾಧಾನ ವ್ಯಕ್ತವಾಗಿ, ಪಕ್ಷ ತೊರೆಯುವ ನಿರ್ಧಾರ ಕೂಡ ಮಾಡಿದ್ದುಂಟು. ಆದರೆ, ಮರುದಿನವೇ ಈ ನಿಲುವನ್ನು ಬದಲಿಸಿ ಪಕ್ಷಕ್ಕೆ ಬೆಂಬಲ ಸೂಚಿಸುವ ಮಾತನಾಡಿದ್ದು ಇದೆ. ಇದರ ನಡುವೆಯೂ ಕೆಲ ನಾಯಕರು ಮನವೊಲಿಸಲು ಯತ್ನಿಸಿದರು ತಮ್ಮ ನಿಲುವನ್ನು ಬಿಡದೆ ಟಿಕೇಟ್ ಗಾಗಿ ಪಟ್ಟು ಹಿಡಿದು ನಾನಾ ಕಸರತ್ತು ಮಾಡುತ್ತಿದ್ದಾರೆ.ಇದೀಗ, ಲಕ್ಷ್ಮಣ ಸವದಿ(Lakshmana Savadi)ಪಕ್ಷ ತೊರೆದಿರುವ ಹಿನ್ನೆಲೆ ಈ ಬಗ್ಗೆ. ನಳಿನ್ ಕುಮಾರ್ ಕಟೀಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಪಕ್ಷದಲ್ಲಿ ಸವದಿಯವರಿಗೆ ಎಲ್ಲ ಅವಕಾಶ ಒದಗಿಸಲಾಗಿತ್ತು. ಅಧಿಕಾರದ ವಿಚಾರಕ್ಕೆ ಬಂದಾಗ ಅತೀ ಹೆಚ್ಚು ಅವಕಾಶ(Opportunity) ಪಡೆದವರೇ ಸವದಿಯವರು. ಸವದಿಯವರು ಭವಿಷ್ಯದಲ್ಲಿ ಕಾಂಗ್ರೆಸ್‌ನಲ್ಲಿ ಯಾವ ಸ್ಥಿತಿ ತಲುಪುತ್ತಾರೆ ಎಂಬುದನ್ನು ಕಾದು ನೋಡಿ ಎಂದು ಪತ್ರಿಕಾಗೋಷ್ಠಿಯಲ್ಲಿ ನಳೀನ್ ಕುಮಾರ್ ಅವರು ಹೇಳಿದ್ದಾರೆ.ಯಡಿಯೂರಪ್ಪ ಮಾರ್ಗದರ್ಶನ ಮತ್ತು ಬೊಮ್ಮಾಯಿಯವರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದು, 12 ಉಳಿಕೆ ಅಭ್ಯರ್ಥಿಗಳ ಪಟ್ಟಿ ಶೀಘ್ರವೇ ಬಿಡುಗಡೆ ಮಾಡಲಾಗುತ್ತದೆ. ಜೆಡಿಎಸ್‌ ಕುಟುಂಬ ರಾಜಕಾರಣಕ್ಕೆ ಸೀಮಿತವಾಗಿದ್ದು, ಒಂದು ಮನೆಯ ಒಳಗಿನವರು ಪ್ರಧಾನಿ, ಮುಖ್ಯಮಂತ್ರಿ, ಸಂಸದ, ಶಾಸಕರಾಗಿದ್ದು, ಈ ರೀತಿಯ ರಾಜಕೀಯ ನಮ್ಮದಲ್ಲ ಎಂದು ನಳೀನ್ ಕುಮಾರ್ ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಚುನಾವಣ ಅಖಾಡದ ಬಿಸಿ ಹೆಚ್ಚಾಗುತ್ತಿದ್ದು,ಎಲ್ಲ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಣೆ ಮಾಡುವಲ್ಲಿ ನಿರತರಾಗಿದ್ದು, ಕಾಂಗ್ರೆಸ್‌ ಡಿಸೆಂಬರ್‌ ತಿಂಗಳಲ್ಲೇ ಅಭ್ಯರ್ಥಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು, ಕಷ್ಟದಿಂದ ಇವತ್ತು ಕೆಲವು ಅಭ್ಯರ್ಥಿಗಳನ್ನು ಪ್ರಕಟಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಇದೇ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ. ಬಿಜೆಪಿಯಲ್ಲಿ 10 ದಿನಗಳ ಪ್ರಕ್ರಿಯೆಯಲ್ಲಿ 212 ಅಭ್ಯರ್ಥಿಗಳ ಘೋಷಣೆ ಆಗಿದ್ದು, ಮತಗಟ್ಟೆ ಅಧ್ಯಕ್ಷರಿಂದ ರಾಷ್ಟ್ರೀಯ ಅಧ್ಯಕ್ಷರವರೆಗೆ ಅಭಿಪ್ರಾಯ ಸಂಗ್ರಹದ ಮೂಲಕ ಅಭ್ಯರ್ಥಿಗಳನ್ನು ಪ್ರಕಟಿಸಿದ್ದೇವೆ ಎಂದು ನಳೀನ್ ಕುಮಾರ್ ಕಟೀಲ್ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: C T Ravi Admitted to Hospital : ಚಿಕ್ಕಮಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾದ ಸಿ.ಟಿ.ರವಿ: ಕಿಡ್ನಿಯಲ್ಲಿ ಕಲ್ಲು – ವೈದ್ಯರ ಹೇಳಿಕೆ

Leave A Reply

Your email address will not be published.