LPG Cylinder Price : ಎಲ್‌ಪಿಜಿ ಬಗ್ಗೆ ಬಿಗ್‌ ಅಪ್ಡೇಟ್‌ ! ಹೊಸ ಮಾನದಂಡ ಪರಿಚಯಿಸಲಿದೆ ಸರಕಾರ! ಜನಸಾಮಾನ್ಯರಿಗೆ ಲಾಭವೇ? ನಷ್ಟವೇ?

LPG Cylinder price : ಸಾಮಾನ್ಯ ಜನತೆಗೆ ದಿನಂಪ್ರತಿ ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಪ್ರತಿ ವಸ್ತುಗಳ ಬೆಲೆ ಗಗನಕ್ಕೆರುತ್ತಿದ್ದು, ಜನರ ಉಳಿತಾಯಕ್ಕಿಂತ ಹೆಚ್ಚು ವೆಚ್ಚ ಎದುರಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ ಜನರ ಪರಿಸ್ಥಿತಿ. ಇದರ ನಡುವೆ ದೇಶಾದ್ಯಂತ ದಿನಂಪ್ರತಿ ಏರಿಕೆಯಾಗುತ್ತಿರುವ ಗ್ಯಾಸ್ ಬೆಲೆಗೆ(LPG Cylinder price) ಬ್ರೇಕ್ ಹಾಕುವ ನಿಟ್ಟಿನಲ್ಲಿ ಸರ್ಕಾರವು ಮಹತ್ವದ ತೀರ್ಮಾನ ಕೈಗೊಳ್ಳಲು ಮುಂದಾಗಿದೆ.

 

ಸರ್ಕಾರಿ ತೈಲ ಕಂಪನಿಗಳು ದೇಶಾದ್ಯಂತ ಹೊಸ ಗ್ಯಾಸ್ ಬೆಲೆ(Gas Price) ವ್ಯವಸ್ಥೆಯನ್ನು ಪರಿಚಯಿಸಲು ಮುಂದಾಗಿದ್ದು, ಇದರಿಂದ ಸಾಮಾನ್ಯ ಜನರಿಗೆ ಪರಿಹಾರವನ್ನು ಒದಗಿಸಲಿದೆ. ಸರ್ಕಾರವು 6 ಏಪ್ರಿಲ್ 2023 ರಂದು ಈ ಕುರಿತಾದ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು. ಇದರ ಅಡಿಯಲ್ಲಿ, ಸರ್ಕಾರವು (Government)ದೇಶೀಯವಾಗಿ ಉತ್ಪಾದಿಸಲಾಗುವ ಅನಿಲದ ಬೆಲೆಗಳನ್ನು ಮಾಸಿಕ ಆಧಾರದ ಮೇಲೆ ನಿಗದಿ ಮಾಡಲಿದೆ ಎನ್ನಲಾಗಿದೆ. ಸರ್ಕಾರವು ಪ್ರತಿ ಮಿಲಿಯನ್ ಬ್ರಿಟಿಷ್ ಥರ್ಮಲ್ ಯೂನಿಟ್ (Unit) ಗೆ US$4 ಕಡಿಮೆ ಮಿತಿಯನ್ನು ಮತ್ತು ಗ್ಯಾಸ್ ಬೆಲೆಗೆ ಪ್ರತಿ ಯೂನಿಟ್‌ಗೆ $6.5 ರ ಮೇಲಿನ ಮಿತಿಯನ್ನು ನಿಗದಿಪಡಿಸಿದೆ.ಇದರ ಜೊತೆಗೆ ಗ್ಯಾಸ್ ಬೆಲೆಯಲ್ಲಿಯೂ ಕೂಡ ಇಳಿಕೆಯಾಗಲಿದೆ.

ದೇಶದ ಹೊಸ ಅನಿಲ ಬೆಲೆ ವ್ಯವಸ್ಥೆಯು ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ (ONGC) ಮತ್ತು ಆಯಿಲ್ ಇಂಡಿಯಾ ಲಿಮಿಟೆಡ್ (OIL) ನಂತಹ ಅನಿಲ ಕಂಪನಿಗಳ ಆದಾಯವನ್ನು ಕಡಿಮೆ ಮಾಡಲಿದೆ. ಹೊಸ ಅನಿಲ ಬೆಲೆ ನಿಯಮಗಳು ಹೆಚ್ಚು ತ್ವರಿತ ಬೆಲೆ ಪರಿಷ್ಕರಣೆಗಳಿಗೆ ಕಾರಣವಾಗುತ್ತವೆ ಎಂಬುದನ್ನು ನಾವು ನಿರೀಕ್ಷಿಸುತ್ತೇವೆ” ಎಂದು ಎಸ್ & ಪಿ ಗ್ಲೋಬಲ್ ರೇಟಿಂಗ್ಸ್‌ನ ಕ್ರೆಡಿಟ್ ವಿಶ್ಲೇಷಕರೊಬ್ಬರು ಮಾಹಿತಿ ನೀಡಿದ್ದಾರೆ. ಹೊಸ ಮಾನದಂಡಗಳು ಕ್ಲಿಷ್ಟಕರವಾದ ಕ್ಷೇತ್ರಗಳಿಂದ ಉತ್ಪಾದಿಸುವ ಅನಿಲದ ಬೆಲೆಗಳ ಮೇಲೆ ಪ್ರಭಾವ ಬೀರುವುದಿಲ್ಲ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಂತಹ (Relaince Industries Limited)ಕಂಪನಿಗಳು ಈ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತವೆ.

Leave A Reply

Your email address will not be published.