B. S. Yediyurappa: ಹಿಜಾಬ್ ಹಲಾಲ್ ವಿವಾದ ಬೇಕಿಲ್ಲ, ನಾನದನ್ನು ಬೆಂಬಲಿಸಲ್ಲ – Yediyurappa ಹೇಳಿಕೆ ವೈರಲ್ !!

B S Yediyurappa: ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರವರು “ ಹಿಜಾಬ್ ಹಲಾಲ್ ವಿವಾದ ಅನಗತ್ಯ, ನಾನದನ್ನು ಬೆಂಬಲಿಸಲ್ಲ” ಎಂದು ಹೇಳಿದ್ದಾರೆ. ಮೇ 10ರಂದು ಮತದಾನ (election) ನಡೆಯಲಿದ್ದು, ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ತಮ್ಮ ಪಕ್ಷದ ಗೆಲುವಿಗಾಗಿ ಭರದ ಸಿದ್ಧತೆಯಲ್ಲಿದ್ದಾರೆ. ಈ ಮಧ್ಯೆ ಯಡಿಯೂರಪ್ಪರವರ (B S Yediyurappa) ಈ ಹೇಳಿಕೆ ವೈರಲ್ ಆಗಿದೆ.

 

ಸಂದರ್ಶನವೊಂದರಲ್ಲಿ ಮಾತನಾಡಿದ ಯಡಿಯೂರಪ್ಪ “ ಹಿಂದೂಗಳು ಮತ್ತು ಮುಸಲ್ಮಾನರು ಸಹೋದರ, ಸಹೋದರಿಯರಂತೆ ಬಾಳಬೇಕು, ನನ್ನ ನಿಲುವು ಕೂಡ ಇದೇ ಆಗಿದೆ. ಇತ್ತೀಚೆಗೆ ರಾಜ್ಯದಲ್ಲಿ ಈ ಹಿಜಾಬ್, ಹಲಾಲ್ ಸಾಕಷ್ಟು ಕೋಲಾಹಲ ಸೃಷ್ಟಿಸಿದೆ. ಇದರ ವಿವಾದಗಳು ಬೇಕಿಲ್ಲ, ಅನಗತ್ಯ ನಾನದನ್ನು ಬೆಂಬಲಿಸುವುದಿಲ್ಲ” ಎಂದು ಬಿ ಎಸ್ ಯಡಿಯೂರಪ್ಪ ಹೇಳಿದರು.

ವಿದ್ಯಾರ್ಥಿಗಳು ಕಾಲೇಜಿಗೆ ಹಿಜಾಬ್ (hijab) ಧರಿಸಿ ಆಗಮಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಯಶಪಾಲ್ ಸುವರ್ಣ ಅವರಿಗೆ ಉಡುಪಿಯಲ್ಲಿ ಪಕ್ಷ ಟಿಕೆಟ್ ನೀಡಿದೆ. ಹಿಂದೂಗಳು ಹಲಾಲ್ ಮಾಂಸ ತಿನ್ನಬಾರದೆಂದು ಹಿಂದುತ್ವ ಸಂಘಟನೆಗಳು ನೀಡಿದ ಕರೆಗೆ ಹಲವು ಪಕ್ಷದ ನಾಯಕರು ಬೆಂಬಲ ವ್ಯಕ್ತಪಡಿಸಿದ್ದರು.

ತಾನು ಕೃಷ್ಣರ ಮತ್ತು ಮುಸಲ್ಮಾನರ ಕಾರ್ಯಕ್ರಮಗಳಿಗೆ ಹೋಗುತ್ತೇನೆ. ಬೊಮ್ಮಾಯಿ (Basavaraj Bommai) ಅವರು ಕೂಡ ಹೋಗುತ್ತಿದ್ದರು. ಆದರೆ, ಆಹ್ವಾನ ನೀಡಿದ್ದರೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಚರ್ಚ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿಲ್ಲ. ಅವರಿಗೆ ಆಹ್ವಾನ ನೀಡಲಾದ ಸ್ಥಳಗಳಿಗೆ ಅವರು ಹೋಗಬೇಕಿತ್ತು. ಇಂತಹ ಕಾರ್ಯಕ್ರಮಗಳಿಗೆ ಮಹತ್ವ ನೀಡಬೇಕು ಎಂದು ಯಡಿಯೂರಪ್ಪ ಹೇಳಿದ್ದಾರೆ ಎನ್ನಲಾಗಿದೆ.

ತಮ್ಮ ಪುತ್ರ ಬಿ ವೈ ವಿಜಯೇಂದ್ರ ಶಿಕಾರಿಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಬೇಕು ಎಂಬುದು ತಮ್ಮ ಇಚ್ಛೆಯಾಗಿತ್ತು ಎಂದು ಯಡಿಯೂರಪ್ಪ ಹೇಳಿದರು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿಯವರು (Narendra modi) ಪಡೆದಿರುವ ಜನಪ್ರಿಯತೆಯಿಂದ ಕೇಂದ್ರ ಕೈಗೊಂಡಿರುವ ಕಲ್ಯಾಣ ಕಾರ್ಯಕ್ರಮಗಳಿಂದ ಹಾಗೂ ಈಗ ಬೊಮ್ಮಾಯಿ ಸರ್ಕಾರ ಕೈಗೊಂಡ ಯೋಜನೆಗಳಿಂದಾಗಿ ಬಿಜೆಪಿ (bjp) ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಯಡಿಯೂರಪ್ಪ ಅವರು ಹೇಳಿದರು.

Leave A Reply

Your email address will not be published.