Summer Vacation: ತಾಪಮಾನ ಹೆಚ್ಚಳದ ಕಾರಣ ಮಕ್ಕಳ ಬೇಸಿಗೆ ರಜಾ ವಿಸ್ತರಣೆ!

Summer Vacation : ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಬಿಸಿಲಿನ ತಾಪಮಾನ ವಿಪರೀತವಾಗಿದ್ದು, ಈ ಹಿನ್ನೆಲೆಯಲ್ಲಿ ಈಗಾಗಲೇ ಶಾಲಾ ವಿದ್ಯಾರ್ಥಿಗಳಿಗೆ ನೀಡಿರುವ ಬೇಸಿಗೆ ರಜೆಯನ್ನು (Summer Vacation) ಇನ್ನಷ್ಟು ದಿನ ವಿಸ್ತರಣೆ ಮಾಡುವ ಸಾಧ್ಯತೆ ಇದೆ.

ಮುಖ್ಯವಾಗಿ ತಾಪಮಾನ ಏರಿಕೆಯ ಪರಿಣಾಮ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಕೂತು ಪಾಠ ಕೇಳಲು ತೊಂದರೆಯಾಗಬಾರದು ಎಂದು ಈ ರೀತಿ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ.

ಈ ಕುರಿತು ಮಮತಾ ಬ್ಯಾನರ್ಜಿ ಅವರೂ ಸಹ ತೀವ್ರ ಬಿಸಿಲಿರುವ ಕಾರಣ ಮಕ್ಕಳ ಬೆಸಿಗೆ ರಜವನ್ನು ಒಂದು ವಾರಗಳ ಕಾಲ ಮುಂದೂಡುವ ಆಲೋಚನೆಯಲ್ಲಿದ್ದಾರೆ. ಸ್ವತಃ ಅವರೇ ಈ ಕುರಿತು ಮಾತನಾಡಿದ್ದಾರೆ.

ಬೋರ್ಡ್‌ನ ಮುಖ್ಯ ಕಾರ್ಯನಿರ್ವಾಹಕ ಮತ್ತು ಕಾರ್ಯದರ್ಶಿ ಗೆರ್ರಿ ಅರಾಥೂನ್ ಸಹಿ ಮಾಡಿದ ಅಧಿಸೂಚನೆಯು ಎಲ್ಲಾ ಅಂಗಸಂಸ್ಥೆ ಶಾಲೆಗಳನ್ನು ತಲುಪಿದ್ದು, ಶಾಲೆಗಳು ಬೇಸಿಗೆ ರಜೆಯನ್ನು ಯಾವಾಗ ಪ್ರಾರಂಭಿಸಬೇಕು ಎಂದು ಯೋಚಿಸಲು ಪ್ರಾರಂಭಿಸುತ್ತಿವೆ.

ಇನ್ನು ರಾಮಮೋಹನ್ ಮಿಷನ್ ಶಾಲೆಯ ಪ್ರಾಂಶುಪಾಲ ಸುಜೋಯ್ ಬಿಸ್ವಾಸ್ ಮಾಧ್ಯಮಗಳಿಗೆ, ‘ನಮಗೆ ಪತ್ರ ಬಂದಿದೆ. ಸೋಮವಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

ಮೇ 15ರಿಂದ ಜೂನ್ 12ರವರೆಗೆ ಬೇಸಿಗೆ ರಜೆ ಇರಲಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಮೇ 12 ಕೊನೆಯ ಕೆಲಸದ ದಿನವಾಗಿದೆ. ಮಂಡಳಿಯಿಂದ ಅನುಮೋದಿಸಲ್ಪಟ್ಟ ಉಳಿದ ಶಾಲೆಗಳು ಮುಂದಿನ ವಾರದಲ್ಲಿ ನಿರ್ಧರಿಸುತ್ತವೆ.

ಇನ್ನು ಸೇಂಟ್ ಕ್ಸೇವಿಯರ್ಸ್ ಕಾಲೇಜಿಯೇಟ್ ಸ್ಕೂಲ್ ತಮ್ಮ ವೆಬ್‌ಸೈಟ್‌ನಲ್ಲಿ ಬೇಸಿಗೆ ರಜೆಯ ಬಗ್ಗೆ ಸೂಚನೆಯನ್ನು ನೀಡಿದ್ದಾರೆ.

ಅದಲ್ಲದೆ ಈ ಬೇಸಿಗೆ ರಜೆಯ ಬಗ್ಗೆಯೂ ಶೀಘ್ರ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಶ್ಯಾಮನಗರದ ಸೇಂಟ್ ಆಗಸ್ಟೀನ್ ಡೇ ಸ್ಕೂಲ್ ನ ಪ್ರಾಂಶುಪಾಲ ರಾಡ್ನಿ ಬೋರ್ನ್ ತಿಳಿಸಿದ್ದಾರೆ. ಇದರ ಜೊತೆಯಲ್ಲಿ ಪೋಷಕರ ಅಭಿಪ್ರಾಯ ಪಡೆಯುವ ಪ್ರಕ್ರಿಯೆ ಆರಂಭಿಸಲಾಗಿದೆ.

Leave A Reply

Your email address will not be published.