Karnataka Election: ಇಡಿ ಕೇಸ್ ಮುಚ್ಚಲು ಅಧಿಕಾರಿಯ ತಂದೆಗೇ ಕಾಂಗ್ರೆಸ್ ಟಿಕೆಟ್ ಕೊಟ್ಟ ಡಿಕೆ ಶಿವಕುಮಾರ್ !

Share the Article

E D Case : Karnataka Election 2023: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D. K. Shivakumar) ಮೇಲೆ ಜಾರಿ ನಿರ್ದೇಶನಾಲಯ (E D case) ಕೇಸ್ ಇದ್ದು, ಈ ಪ್ರಕರಣವನ್ನು ಮುಚ್ಚಲು ED ಅಧಿಕಾರಿಯ ತಂದೆಗೆ ಡಿ.ಕೆ.ಶಿ ಟಿಕೆಟ್ (Karnataka Election 2023) ನೀಡಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ. ಈ ಬಗ್ಗೆ ಸಾಕಷ್ಟು ಚರ್ಚೆಯೂ ನಡೆಯುತ್ತಿದೆ.

ವಿಜಯಕುಮಾರ್ ಬೆಂಗಳೂರಿನಲ್ಲಿ (Bengaluru) ಆದಾಯ ತೆರಿಗೆ ಇಲಾಖೆ ಜಿಲ್ಲಾಧಿಕಾರಿಯಾಗಿದ್ದಾರೆ. ಇವರು ತಂದೆ ಜಗಳೂರು ಕಾಂಗ್ರೆಸ್ ಅಭ್ಯರ್ಥಿ ಬಿ.ದೇವೇಂದ್ರಪ್ಪ (B. Devendrappa). ದಾವಣಗೆರೆ ಜಿಲ್ಲೆಯ ಜಗಳೂರು ಕ್ಷೇತ್ರದ ಕಾಂಗ್ರೆಸ್ (congress) ಟಿಕೆಟ್ ಬಿ.ದೇವೇಂದ್ರಪ್ಪ ಅವರ ಪಾಲಾಗಿದೆ. ಈ ಕಾರಣದಿಂದ ಜಗಳೂರು ಕಾಂಗ್ರೆಸ್ ಟಿಕೆಟ್ ಹಂಚಿಕೆಗೂ ಡಿಕೆಶಿ ಇಡಿ ಕೇಸ್‍ಗೂ ಸಂಬಂಧ ಇದೆ ಎನ್ನಲಾಗುತ್ತಿದೆ.

ಡಿ.ಕೆ.ಶಿವಕುಮಾರ್ ಫೈಲ್ ಗಳು ED ಅಧಿಕಾರಿ ವಿಜಯ ಕುಮಾರ್ ಬಳಿಯಿದ್ದು, ಡಿಕೆಶಿ, ಎಂ.ಬಿ.ಪಾಟೀಲ್ (M.B patil) ಸೇಫ್ ಆಗುವುದಕ್ಕೆ ವಿಜಯ ಕುಮಾರ್ ತಂದೆಗೆ ಟಿಕೆಟ್ ನೀಡಿದ್ದಾರೆ ಎಂದು ಜಗಳೂರಿನಲ್ಲಿ ಕಾಂಗ್ರೆಸ್ ಮಾಜಿ ಶಾಸಕ ಎಚ್.ಪಿ.ರಾಜೇಶ್ ಆರೋಪಿಸಿದ್ದಾರೆ.

ಎಚ್.ಪಿ.ರಾಜೇಶ್ ಜಗಳೂರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ 3 ಕೋಟಿ ರೂ.‌ ಪಾರ್ಟಿ ಫಂಡ್ ಅಂತಾ ಟಿಕೆಟ್ ಕೊಟ್ಟಿದ್ದಾರೆಂದು ರಾಜೇಶ್ ಆರೋಪ ಮಾಡಿದ್ದಾರೆ. ಇನ್ನು ಮಾಜಿ ಶಾಸಕ ಎಚ್‍.ಪಿ.ರಾಜೇಶ್ ‘ಕೈ’ ಬಿಟ್ಟು ಪಕ್ಷೇತರನಾಗಿ ನಿಲ್ಲಲು ನಿರ್ಧರಿಸಿದ್ದಾರೆ.

Leave A Reply

Your email address will not be published.