Congress Candidate List : ವಿಧಾನಸಭಾ ಚುನಾವಣೆ; ಕಾಂಗ್ರೆಸ್ ಪಕ್ಷದಿಂದ 3 ನೇ ಪಟ್ಟಿ ಬಿಡುಗಡೆ!

Congress Party : ಈಗಾಗಲೇ ಕಾಂಗ್ರೆಸ್ ಪಕ್ಷದಿಂದ (Congress Party ) 124 ಕ್ಷೇತ್ರಗಳಿಗೆ ಮೊದಲ ಪಟ್ಟಿ ಪ್ರಕಟಿಸಿದ್ದು, 2ನೇ ಪಟ್ಟಿಯ ನಂತರ ಇಂದು 43 ಕ್ಷೇತ್ರಗಳಿಗೆ 3ನೇ ಪಟ್ಟಿಯನ್ನು ಪ್ರಕಟಿಸಲಾಗಿದೆ.

 

ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ನಿರೀಕ್ಷೆಯಂತೆಯೆ ಪ್ರತಿಷ್ಠಿತ ಕ್ಷೇತ್ರ ಪುತ್ತೂರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಶೋಕ್ ಕುಮಾರ್ ರೈ ಅವರಿಗೆ ಕಾಂಗ್ರೆಸ್ ಟಿಕೇಟ್ ಪಕ್ಕಾ ಆಗಿದೆ.

ಅಥಣಿ ಕ್ಷೇತ್ರಕ್ಕೆ ಲಕ್ಷ್ಮಣ ಸವದಿಗೆ ಸೀಟ್ ಬುಕ್ ಆಗಿದ್ದು ಅವರು ರಮೇಶ್ ಜಾರಕಿಹೊಳಿ ಅವರ ಶಿಷ್ಯ ಕುಮಟಲ್ಲಿ ಅವರನ್ನು ಎದುರಿಸಬೇಕಾಗಿದೆ.

ಆದರೆ ಮಂಗಳೂರು ಉತ್ತರ ಕ್ಷೇತ್ರಕ್ಕೆ. ಇನ್ನೂ ಸರಿಯಾದ ಉತ್ತರಾಧಿಕಾರಿ ಸಿಕ್ಕಿಲ್ಲ. ಅಲ್ಲಿ ಇನ್ನೂ ಅಭ್ಯರ್ಥಿ ನಿಗದಿಯಾಗಿಲ್ಲ. ಉಳಿದಂತೆ ಮೂರನೇ ಪಟ್ಟಿಯಲ್ಲಿರುವ ಎಲ್ಲಾ 43 ಕ್ಷೇತ್ರಗಳ ಪಟ್ಟಿ.ಇಲ್ಲಿ ನೀಡಿದ್ದೇವೆ.

ಇಂದು ಐಎಸಿಸಿಯ ಜನರಲ್ ಸೆಕ್ರೇಟರಿ ಅವರು ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ 43 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಮುಖ್ಯವಾಗಿ ನಿನ್ನೆಯಷ್ಟೇ ಕಾಂಗ್ರೆಸ್ ಸೇರ್ಪಡೆಗೊಂಡ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿಗೂ ಅಥಣಿ ಕ್ಷೇತ್ರದಿಂದ 3ನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡಲಾಗಿದೆ.

ಇನ್ನು ತುಮಕೂರು ಗ್ರಾಮಾಂತರಕ್ಕೆ ಜಿಹೆಚ್ ಶಣ್ಮಖಪ್ಪ ಯಾದವ್, ತೆರದಾಳ ಸಿದ್ದಪ್ಪ ರಮಪ್ಪ ಕೊನ್ನೂರ್, ಸಿಂದಗಿ ಅಶೋಕ್ ಎಂ ಮನಗುಳಿಗೆ ಟಿಕೆಟ್ ನೀಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಎಸ್ಸಿ ಮೀಸಲು ಕ್ಷೇತ್ರಕ್ಕೆ ಡಾ.ಶ್ರೀನಿವಾಸ್ ಕರಿಯನ್ನ, ಶಿವಮೊಗ್ಗ ನಗರ ಹೆಚ್ ಸಿ ಯೋಗೇಶ್, ಕಾರ್ಕಳ ಉದಯ್ ಶೆಟ್ಟಿ, ಶಿಕಾರಿಪುರ ಜಿ.ಬಿ ಮಾಲತೇಶ್ ಗೆ ಟಿಕೆಟ್ ನೀಡಲಾಗಿದೆ.

ಈಗಾಗಲೇ ಕುತೂಹಲ ಕೆರಳಿಸಿದ್ದಂತ ಕೋಲಾರ ಕ್ಷೇತ್ರಕ್ಕೆ ಕೊಟ್ಟೂರು ಎಂ ಮಂಜುನಾಥ್ ಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಅರಸೀಕೆರೆ ಕ್ಷೇತ್ರಕ್ಕೆ ಕೆಎಂ ಶಿವಲಿಂಗೇಗೌಡಗೆ ಟಿಕೆಟ್ ನೀಡಲಾಗಿದೆ. ಮದ್ದೂರಿಗೆ ಕೆ ಎಂ ಉದಯ್, ಹಾಸನಕ್ಕೆ ಬನವಾಸಿ ರಂಗಸ್ವಾಮಿಗೆ ಟಿಕೆಟ್ ನೀಡಲಾಗಿದೆ.

ಪ್ರಸ್ತುತ 43 ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷದ ಮೂರನೇ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿರುವ ಪಟ್ಟಿ ಈ ಕೆಳಗಿನಂತೆ ಇವೆ :

 

 

 

 

ಇದನ್ನು ಓದಿ : Kissan GPT : ರೈತರಿಗೆ ಇನ್ಮುಂದೆ ಇಳುವರಿ ಪಡೆಯೋದು ಬಹಳ ಸುಲಭ! ಹೇಗೆ? ಇಲ್ಲಿದೆ ಮಾಹಿತಿ! 

 

 

 

Leave A Reply

Your email address will not be published.