Kissan GPT : ರೈತರಿಗೆ ಇನ್ಮುಂದೆ ಇಳುವರಿ ಪಡೆಯೋದು ಬಹಳ ಸುಲಭ! ಹೇಗೆ? ಇಲ್ಲಿದೆ ಮಾಹಿತಿ!
Kissan GPT : ಚಾಟ್‌ಜಿಪಿಟಿ (ChatGPT) ಎಲ್ಲಾ ರೀತಿಯಲ್ಲಿ ಜನರಿಗೆ ಬಹಳಷ್ಟು ಉಪಯುಕ್ತವಾಗುತ್ತಿದೆ. ಹಾಗೆಯೇ ಎಐ (AI)ತಂತ್ರಜ್ಞಾನ ನಾವು ಅಂದುಕೊಂಡದಕ್ಕಿಂತ ಜಾಸ್ತಿಯೇ ವಿಷಯಗಳನ್ನು ನಮಗೆ ನೀಡುತ್ತಿದೆ. ಇದರ ಎಲ್ಲಾ ವಿಷಯಗಳ ನಡುವೆ ಭಾರತದಲ್ಲಿ ಚಾಟ್ ಜಿಪಿಟಿ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿದ್ದು. ಹಾಗೆಯೇ ಎಐ ತಂತ್ರಜ್ಞಾನವು ಇನ್ನು ಮುಂದೆ ರೈತರಿಗೂ ತುಂಬಾನೇ ಪ್ರಯೋಜನಕಾರಿ ಆಗಲಿದೆ.
ಹೌದು, ರೈತರಿಗೆ ಇದರಿಂದ ಹೆಚ್ಚಿನ ಉಪಯುಕ್ತ ಆಗಲಿದೆ. ಕೃತಕ ಬುದ್ಧಿಮತ್ತೆ (AI) ಚಾಲಿತ ಉಪಕರಣಗಳು ತುಂಬಾನೇ ವೇಗವಾಗಿ ಬೆಳೆಯುತ್ತಿವೆ. ಈ ಮೂಲಕ ಬಳಕೆದಾರರು ಸಂಭಾಷಣೆಯ ರೀತಿಯಲ್ಲಿ ಉತ್ತರಗಳನ್ನು ಪಡೆದುಕೊಳ್ಳುವ ಅವಕಾಶವನ್ನು ನೀಡಲಾಗುತ್ತಿದೆ. ಅದರಲ್ಲೂ ಚಾಟ್ ಜಿಪಿಟಿ(chat GPT) ಆರಂಭವಾದ ನಂತರ ಟೆಕ್ ವಲಯದಲ್ಲಿ ದೊಡ್ಡ ಮಟ್ಟದ ಸಂಚಲನ ಉಂಟಾಗಿದೆ. ಇನ್ಮುಂದೆ ಕೇವಲ ಟೆಕ್(tech) ವಲಯದಲ್ಲಿ ಮಾತ್ರ ಅಲ್ಲದೆ ರೈತರ ಜೀವನದಲ್ಲೂ(life) ಬೆಳಕಾಗಲಿದೆ. ಹಾಗಿದ್ರೆ, ಏನಿದು ಹೊಸ ತಂತ್ರಜ್ಞಾನ? ಇದರಿಂದ ರೈತರಿಗೆ ಏನು ಪ್ರಯೋಜನ ಅನ್ನೋ ಪ್ರಶ್ನೆ ನಿಮ್ಮನ್ನು ಕಾಡಬಹುದು. ಇಲ್ಲಿದೆ ನೋಡಿ ಅದರ ಸಂಪೂರ್ಣ ಮಾಹಿತಿ
ಕಿಸ್ಸಾನ್ ಜಿಪಿಟಿ:
ಈ ಕಿಸ್ಸಾನ್ ಜಿಪಿಟಿ (Kissan GPT) ಎಂಬುದು ಚಾಟ್‌ಜಿಪಿಟಿ ಮತ್ತು ವಿಸ್ಪರ್ ಅನ್ನು ಆಧರಿಸಿದ ಎಐ ಚಾಟ್‌ಬಾಟ್ (chatbot)ಆಗಿದೆ. ಭಾರತದಲ್ಲಿ ಕಡಿಮೆ ಕೃಷಿ ಡೊಮೇನ್ ಆಗಿ ಇದು ಗುರುತಿಸಿಕೊಳ್ಳಲಿದೆ. ಈ ವರ್ಷ ಬೆಳೆ ಕೃಷಿ, ನೀರಾವರಿ, ಕೀಟ ನಿಯಂತ್ರಣ ಮತ್ತು ಇತರ ಕೃಷಿ-ಸಂಬಂಧಿತ ವಿಷಯಗಳ ಕುರಿತು ನೈಜ-ಸಮಯದ ಸಲಹೆಯನ್ನು ನೀಡುವ ಸಲುವಾಗಿ ಇದನ್ನು ಮಾರ್ಚ್ 15 ರಂದು ಪ್ರತೀಕ್ ದೇಸಾಯಿ(pratheek desayi) ಪರಿಚಯಿಸಿದ್ದರು.
ಹಾಗಾದರೆ ಈ ಕಿಸ್ಸಾನ್ ಜಿಪಿಟಿ (Kisan GPT) ಹೇಗೆ ಕೆಲಸ ಮಾಡುತ್ತದೆ ನೋಡಿ :
ಈ ಕಿಸ್ಸಾನ್ ಜಿಪಿಟಿ ಇಂಟರ್ಫೇಸ್(interface) ತುಂಬಾನೇ ಸುಲಭವಾಗಿದೆ. ಇದಕ್ಕೆ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಇದು ಬಳಕೆದಾರರ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಮೈಕ್ರೋಫೋನ್ ಅನ್ನೇ ಇನ್‌ಪುಟ್ ಆಗಿ ಬಳಕೆ ಮಾಡಿಕೊಳ್ಳಲಿದೆ. ಈ ಮೂಲಕ ಕನ್ನಡ ಹಿಂದಿ, ಇಂಗ್ಲಿಷ್, ಮರಾಠಿ, ಬೆಂಗಾಲಿ ಸೇರಿದಂತೆ 10 ಭಾರತೀಯ ಭಾಷೆಗಳನ್ನು ಇದು ಸಪೋರ್ಟ್(support) ಮಾಡುತ್ತದೆ. ಈ ಎಲ್ಲಾ ಭಾಷೆಯಲ್ಲಿ (language)ವೇಗವಾಗಿ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲದೆ ಸ್ಪ್ಯಾನಿಷ್, ಜಪಾನೀಸ್, ಪೋರ್ಚುಗೀಸ್ ಮತ್ತು ಇಂಡೋನೇಷಿಯನ್ ಭಾಷೆಯಲ್ಲೂ ಇದು ಕೆಲಸ ಮಾಡುತ್ತದೆ. ಇನ್ನೂ ಕೆಲವು ದಿನಗಳಲ್ಲಿ ಈ ಜಿಪಿಟಿಯಲ್ಲಿ ಮತ್ತೆರಡು ಭಾಷೆಗಳು ಸೇರಿಕೊಳ್ಳುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಇದನ್ನು ಬಳಕೆ ಮಾಡುವುದು ಹೇಗೆ?:
ಎಲ್ಲಾ ಭಾಷೆಗಳಲ್ಲಿ(language) ಲಭ್ಯ ಇರುವುದರಿಂದ ಹಾಗೂ ಇದು ಮೈಕ್ರೋಫೋನ್ ಮೂಲಕ ಕೆಲಸ ಮಾಡುವುದರಿಂದ ಬಳಕೆದಾರರು ಅಥವಾ ರೈತರು ಸುಲಭವಾಗಿ ಕಿಸ್ಸಾನ್ ಜಿಪಿಟಿ(kissan GPT) ಬಳಿ ತಮಗೆ ಯಾವುದೇ ರೀತಿ ಬೇಕಾದ ಪ್ರಶ್ನೆಗಳನ್ನು ಕೇಳಬಹುದಾಗಿದೆ. ಇದಕ್ಕೆ ನೀವು ಕಷ್ಟ ಪಟ್ಟು ಬರೆಯಲೇಬೇಕು ಅಂತ ಏನಿಲ್ಲ. ಹೀಗಾಗಿ ಕೆಲವೇ ಸೆಕೆಂಡುಗಳಲ್ಲಿ ನಿಮ್ಮ ಪ್ರಶ್ನೆಗೆ ಉತ್ತರಿಸುತ್ತದೆ.ಇದರಿಂದ ನೀವು ಸುಲಭವಾಗಿ ಕೆಲಸ ಮಾಡಬಹುದು
ಹಾಗೆಯೇ ಈ ಕಿಸ್ಸಾನ್ ಜಿಪಿಟಿ ಓಪನ್‌ಎಐನ ಚಾಟ್‌ಜಿಪಿಟಿ ತಂತ್ರಜ್ಞಾನವನ್ನು ಕಂಟ್ರೋಲ್ (control)ಮಾಡುತ್ತದೆ. ನೀವು ಕೇಳಲಾದ ಉತ್ತರಗಳನ್ನು ನೀಡಲು ಪ್ಲಾಟ್‌ಫಾರ್ಮ್‌ನ ಸ್ವಂತ ಜ್ಞಾನದ ಮೂಲವನ್ನು ಇದು ಬಳಸುತ್ತದೆ. ಹಾಗೆಯೇ ಚಾಟ್‌ಬಾಟ್ ಚಾಟ್‌ಜಿಪಿಟಿ-3.5 ಟರ್ಬೊವನ್ನು ಇದು ಬಳಸುತ್ತದೆ. ಜೊತೆಗೆ ಜಿಪಿಟಿ-4 ನಂತರ ಫಲಿತಾಂಶಗಳನ್ನು ನೀದುತ್ತದೆ ಎಂದು ದೇಸಾಯಿ ಅವರು ಈ ರೀತಿಯ ಮಾಹಿತಿಯನ್ನು ವಿವರಿಸಿದ್ದಾರೆ.
ಇದರ ಬಳಕೆ ರೈತರಿಗೆ ಮಾತ್ರವಲ್ಲ:
ಈ ಕಿಸ್ಸಾನ್ ಜಿಪಿಟಿ ಕೇವಲ ರೈತರಿಗೆ ಮಾತ್ರ ಇರುವುದು ಎಂಬ ಮಾತು ನಿಜವಲ್ಲ. ಇದು ವಿದ್ಯಾರ್ಥಿಗಳಿಗೆ, ಸಂಶೋಧಕರು ಮತ್ತು ಹವ್ಯಾಸಿಗಳಂತಹ ಕೃಷಿಯಲ್ಲಿ ಆಸಕ್ತಿ ಹೊಂದಿರುವ ಯಾರೇ ಆದರೂ ಇದನ್ನು ಬಳಕೆ ಮಾಡಿಕೊಳ್ಳಬಹುದು. ಅದರಲ್ಲೂ ಕೆಲವರು ಐಟಿ ವಿಭಾಗದಲ್ಲಿ ಕೆಲಸ ಮಾಡಿ ಕೈತುಂಬಾ ಸಂಪಾದನೆ ಮಾಡುತ್ತಾರೆ ಆದರೆ ಅವರಿಗೆ ಕೃಷಿಯಲ್ಲಿ(agreeculture) ದುಡಿದು ತನ್ನ ಬದುಕನ್ನು ಕಟ್ಟಿಕೊಳ್ಳಬೇಕು ಎಂಬುದರ ಬಗ್ಗೆ ಬಹಳಷ್ಟು ಆಸೆ ಇರುತ್ತದೆ. ಅಂತವರು ಇದನ್ನು ಬಳಸಿಕೊಳ್ಳಬಹುದು.
ಅದರಂತೆ ಮುಂದಿನ ದಿನಗಳಲ್ಲಿ ಈ ಕಿಸ್ಸಾನ್ (kissan)ಸುಧಾರಿತ ತಂತ್ರಜ್ಞಾನವನ್ನು ಪಡೆದುಕೊಳ್ಳುವ ರೈತರಿಗೆ ಇನ್ನೂ ಹೆಚ್ಚಿನ ಅಗತ್ಯ ಮಾಹಿತಿಯನ್ನು ನೀಡುತ್ತದೆ ಎಂದು ದೇಸಾಯಿ ಅವರು ಹೇಳಿದ್ದಾರೆ.