Government Employees : ಸರ್ಕಾರಿ ನೌಕರರೇ ಎಚ್ಚರ : ಚುನಾವಣಾ ಕರ್ತವ್ಯಕ್ಕೆ ಹಾಜರಾಗದಿದ್ದರೆ ತಕ್ಷಣ ಅರೆಸ್ಟ್ !

Government Employees : ಚುನಾವಣೆ ಘೋಷಣೆ ಆದ ನಂತರ ಎಲ್ಲಾ ರೀತಿಯ ಅಧಿಕಾರ ನೇರವಾಗಿ ಆಯಾ ಪ್ರದೇಶದ ಚುನಾವಣಾ ಅಧಿಕಾರಿಯ ಕೈಗೆ ಹೋಗುತ್ತದೆ. ಇದು ನ್ಯಾಯಸಮ್ಮತ ಚುನಾವಣೆ ನಡೆಸಲು ನಮ್ಮ ಸಂವಿಧಾನ ನಮಗೆ ನೀಡಿದ ಅದ್ಭುತ ಕೊಡುಗೆ. ಅದರಲ್ಲಿ ಒಂದು :ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಸರ್ಕಾರಿ ನೌಕರರನ್ನು (Government employees)ಅವಕಾಶ.

ಚುನಾವಣಾ ಆಯೋಗ ಇದೀಗ ಸರ್ಕಾರಿ ಅಧಿಕಾರಿಗಳಿಗೆ ನೌಕರರಿಗೆ ಬಿಗ್ ಶಾಕ್ ನೀಡಿದ್ದು, ಚುನಾವಣಾ ಕರ್ತವ್ಯಕ್ಕೆ ಬಾರದಿದ್ರೆ ಪೊಲೀಸರು ಮನೆಗೇ ಬಂದು ಅರೆಸ್ಟ್ ಮಾದಿಕೊಂಡು ಹೋಗುತ್ತಾರೆ. ಹೌದು, ಆ ಅಧಿಕಾರ ಚುನಾವಣಾ ಅಧಿಕಾರಿಗೆ ಇದೆ.

ಈಗ ಕರ್ನಾಟಕ ವಿಧಾನಸಭೆ ಚುನಾವಣೆ ಘೋಷಣೆಯಾಗಿ ನಾಮಪತ್ರ ಸಲ್ಲಿಕೆಯ ಕಾರ್ಯ ನಡೆಯುತ್ತಿದೆ. ಪಾರದರ್ಶಕ ಹಾಗೂ ಶಾಂತಿಯುತ ಚುನಾವಣೆ ನಡೆಸಲು ಅಗತ್ಯ ಸಿಬ್ಬಂದಿಗಳೊಂದಿಗೆ ಚುನಾವಣಾ ಆಯೋಗ ಸಿದ್ಧವಾಗಿದೆ. ಆದರೆ ಅಗತ್ಯ ಕೆಲಸಕ್ಕೆ, ಸರಿಯಾದ ಸಮಯದಲ್ಲಿ ಸುಳ್ಳು ಹೇಳಿ ಚುನಾವಣಾ ಕರ್ತವ್ಯಕ್ಕೆ ತಪ್ಪಿಸಿಕೊಂಡರೆ ಎಫ್ ಐಆರ್ ದಾಖಲಿಸಿ ಅರೆಸ್ಟ್ ಮಾಡಲಾಗುವುದು ಎಂದು ಚುನಾವಣಾ ಆಯೋಗ ಇದೀಗ ಖಡಕ್ ಸಂದೇಶ ರವಾನಿಸಿದೆ.

ಈಗಾಗಲೇ ಎಲ್ಲಾ ಜಿಲ್ಲೆಗಳ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದು, ಹೆರಿಗೆ ಹಂತದಲ್ಲಿರುವ ಗರ್ಭಿಣಿಯರು, 3 ಅಥವಾ 4 ತಿಂಗಳಲ್ಲಿ ಇನ್ನೇನು ನಿವೃತ್ತಿ ಹೊಂದಲಿರುವವರಿಗೆ ಆಯೋಗವು ವಿನಾಯಿತಿಯನ್ನು ನೀಡಿದೆ. ಅಲ್ಲದೆ, ಗಂಭೀರವಾದ ಆರೋಗ್ಯ ಸಮಸ್ಯೆಯಿರುವವರಿಗೆ ಮಾತ್ರ ಚುನಾವಣಾ ಕರ್ತವ್ಯದಿಂದ ರಿಯಾಯಿತಿ ನೀಡಲಾಗಿದೆ.

ಯಾರೇ ಆಗಲಿ ತಮ್ಮ ಮೇಲಾಧಿಕಾರಿಗಳಿಗೆ ಹೇಳಿಸಿ ತವಾ ಪ್ರಭಾವಿಗಳ ಮೂಲಕ ಚುನಾವಣಾ ಕರ್ತವ್ಯದಿಂದ ದೂರ ಉಳಿಯಲು ಪ್ರಯತ್ನಿಸಿದರೆ ಅಂತಹವರ ವಿರುದ್ಧ ಕೂಡಾ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಚುನಾವಣಾ ಆಯೋಗ ಇದೀಗ ಎಚ್ಚರಿಕೆ ನೀಡಿದೆ.

 

ಇದನ್ನು ಓದಿ : Mango Peel Health Benefits : ಮಾವಿನ ಹಣ್ಣಿನ ಸಿಪ್ಪೆ ಕಸದ ಬುಟ್ಟಿಗೆ ಹಾಕ್ತೀರಾ? ಹಾಗಾದರೆ ಈ ಸುದ್ದಿ ನಿಮಗಾಗಿ!

Leave A Reply

Your email address will not be published.