Vinod Raj: “ಒಬ್ಬರಿಗೆ ಉಪಕಾರ ಮಾಡಿ ಉಪದ್ರ ಕೊಡಬೇಡಿ” – ಟೀಕಿಸಿದವರ ವಿರುದ್ಧ ಕಿಡಿಕಾರಿದ ವಿನೋದ್ ರಾಜ್ !!

Vinod Raj Marriage : ನಟಿ ಲೀಲಾವತಿ (Actress Leelavathi) ಅವರ ಮಗನಾದ ವಿನೋದ್ ರಾಜ್ (Vinod Raj) ಈ ಮೊದಲು ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಚಿತ್ರರಂಗದಲ್ಲಿ ಹೆಸರು ಮಾಡಿ ಈಗ ಕೃಷಿಯತ್ತ ಗಮನ ಹರಿಸಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಈ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ವಿನೋದ್ ಅವರ ದಾಂಪತ್ಯ ಜೀವನದ (Vinod Raj Marriage) ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಇದೀಗ ವಿನೋದ್ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ.

 

ಈ ಹಿಂದೆ ಸೋಷಿಯಲ್‌ ಮೀಡಿಯಾದಲ್ಲಿ (Social Media) ನಿರ್ದೇಶಕ ಪ್ರಕಾಶ್‌ ರಾಜ್‌ ಮೆಹು ಅವರು ವಿನೋದ್ ರಾಜ್ ಅವರಿಗೆ ಈಗಾಗಲೇ ಮದುವೆಯಾಗಿದ್ದು, (Marriage) ಅಷ್ಟೆ ಅಲ್ಲದೇ, ಎದೆಯೆತ್ತರಕ್ಕೆ ಬೆಳೆದಿರುವ ಒಬ್ಬ ಮಗ ಕೂಡ ಇದ್ದಾನೆ ಎಂದು ಪೋಸ್ಟ್ ( The post Vinod Raj) ಮೂಲಕ ಹೇಳಿದ್ದರು. ಈ ಬಗ್ಗೆ ನಟಿ ಲೀಲಾವತಿಯವರು ಪ್ರತಿಕ್ರಿಯೆ ನೀಡಿದ್ದರು. ಇದೀಗ ಸಿನಿವುಡ್ ( Cinewood ) ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಾಜ್ ಕುಟುಂಬದ ಆಪ್ತ ಪ್ರಕಾಶ್ ರಾಜ್ ಮೇಹು ವಿರುದ್ಧ ವಿನೋದ್ ರಾಜ್ ಕಿಡಿಕಾರಿದ್ದಾರೆ. ಜೊತೆಗೆ ಟೀಕಿಸಿದವರಿಗೆ ಖಾರವಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

“ಒಬ್ಬರಿಗೆ ಉಪಕಾರ ಮಾಡಿ ಅದು ಬಿಟ್ಟು ಉಪದ್ರ ಕೊಡಬೇಡಿ.
ಮದುವೆ ವಿಚಾರವಾಗಿ ಇಷ್ಟೊಂದು ಚರ್ಚೆಯಾಗುತ್ತಿದೆ. ಭಯೋತ್ಪಾದನೆ ಆಗಿದೆಯೇ? ಭೂಮಿ ಅಲ್ಲೋಲ ಕಲ್ಲೋಲ ಆಗಿದೆಯಾ? ಇನ್ನೊಬ್ಬರನ್ನು ಬದುಕಲು ಬಿಡಿ. ಶ್ರೇಷ್ಠ ಮನಸ್ಸುಗಳಿಗೆ ನೋಯಿಸಬೇಡಿ. ಒಂದಿಷ್ಟು ಜನರಿಗೆ ಸಹಾಯ ಮಾಡು ನೋಡೋಣ. ಉದ್ಧಾರ ಮಾಡಿ, ಉಪದ್ರವ ಕೊಡಬೇಡಿ” ಎಂದು ಮನಮುಟ್ಟುವ ಮಾತುಗಳನ್ನು ಹೇಳಿದರು.

ನನಗೂ 55 ವರ್ಷ ಆಗಿದೆ, ನನ್ನ ತಾಯಿ ನಮ್ಮನ್ನು ಎಷ್ಟು ಕಷ್ಟಪಟ್ಟು ಬೆಳೆಸಿದ್ದಾರೆ ಅನ್ನೋದು ನನಿಗೆ ಗೊತ್ತಿದೆ. 60ರ ದಶಕದಲ್ಲಿ ಸಿನಿಮಾಕ್ಕೆ ಬಂದಿದ್ದಾರೆ. ಈಗ ಅವರೊಬ್ಬ ಹಿರಿಯ ಕಲಾವಿದೆ. 500, ಸಾವಿರ ಅಷ್ಟೋ ಇಷ್ಟೋ ಸಂಪಾದನೆ ಮಾಡಿದ್ದಾರೆ. ಸಿನಿಮಾ ಬಿಟ್ಟು ಎಷ್ಟೋ ವರ್ಷವಾಯ್ತು. ಆದರೂ ಇನ್ನೊಬ್ಬರಿಗೆ ಸಹಾಯ‌ ಮಾಡಿದ್ದಾರೆ. ಆಸ್ಪತ್ರೆ ಕಟ್ಟಿಸಿದ್ದಾರೆ, ಇನ್ನೊಂದು ಪಶು ಆಸ್ಪತ್ರೆ ಕಟ್ಟಿಸ್ತಿದ್ದಾರೆ, ಅಂಥದನ್ನು ಕೇಳೋಕೆ ಬರಲ್ವಾ? ಮದುವೆ ಎಲ್ಲರಿಗೂ ನಡೆಯುವಂತದ್ದೇ. ಅಗತ್ಯವಿಲ್ಲದ್ದನ್ನು ಚರ್ಚಿಸುತ್ತಾರೆ” ಎಂದು ತುಸು ಗರಂ ಆಗಿ ಹೇಳಿದರು.

ಇಲ್ಲಿವರೆಗೂ ನನ್ನ ತಾಯಿ ಯಾರನ್ನೂ ಬೈದಿಲ್ಲ. ಮದುವೆಯ ಬಗ್ಗೆ ಯಾಕೆ ಮಾತು? ಆರು ಕೋಟಿ ಅಭಿಮಾನಿಗಳಿಗೆ ಅರ್ಥ ಆಗಬೇಕು, ಅಣ್ಣಾವ್ರ ಅಭಿಮಾನಿಗಳಿಗೆ ಇಲ್ಲಿ ಚೆನ್ನಾಗಿ ಅರ್ಥವಾಗಿರುತ್ತದೆ. ಈ ವ್ಯಕ್ತಿ ನನಗೆ ಗೊತ್ತು. ಭಗವಂತನಿಗೆ ಗೊತ್ತು. ಇದು ಗೊತ್ತಾಗಿ ನೀನು ಏನು ಮಾಡೋಕೆ ಹೊರಟಿದ್ಯಾ ಇಲ್ಲಿ? ಯಾರ ಮರ್ಯಾದೆ ಕಳೆಯೋಕೆ ಹೋಗ್ತಿದ್ದೀಯಾ? ಯೋಚನೆ ಇದ್ಯಾ? ಹಿಂದೆ ಚಪ್ಪಲಿಯಲ್ಲಿ ಹೊಡೆದ್ರು, ಈಗ ಇದನ್ನು ಶುರು ಮಾಡಿದ್ದಾರೆ. ಇದನ್ನು ಬಿಟ್ಟು ಬೇರೆ ಏನೂ ಜೀವನದಲ್ಲಿ ಬರೋದಿಲ್ವಾ? ನಮ್ಮ ಪ್ರಾಣ ಹೋದರೂ ಸರಿ. ಕೆಲವು ತಪ್ಪಾದ ಪ್ರಶ್ನೆಗಳಿಗೆ ಉತ್ತರ ಕೊಡೋಕೆ ನಮಗೆ ಇಷ್ಟ ಇಲ್ಲ. 6 ಕೋಟಿ ಜನರು ಕನ್ನಡದ ಮೇಲೆ ಎಷ್ಟು ಅಭಿಮಾನ ಇಟ್ಟಿದ್ದಾರೋ ಅದೇ ಅಭಿಮಾನ ನಾನು, ನನ್ನ ತಾಯಿ ಅಂತರಾಳದಲ್ಲಿ ಇಟ್ಟಿದ್ದೀವಿ. ನನ್ನ ತಾಯಿಯವರಿಗೆ ನಾನು ಮಾತು ಕೊಟ್ಟಿದ್ದೀನಿ. ಅವರು ಏನು ಹೇಳುತ್ತಾರೋ, ಅದರಂತೆ ನಾನು ನಡೆದುಕೊಳ್ಳುವವನು.

“ಸಾಮರ್ಥ್ಯ ಇದ್ದರೆ ಉಲ್ಟಾ ಮಾತನಾಡಿ ನೋಡಲಿ. ಲೀಲಾವತಿ, ವಿನೋದ್ ರಾಜ್ ಬಗ್ಗೆ ಹೆಚ್ಚು ಕಮ್ಮಿ ಏನಾದರೂ ಮಾತನಾಡಿದರೆ ಅದರ ಪರಿಸ್ಥಿತಿ, ಪರಿಣಾಮ ಏನಾಗಬಹುದು ಅಂತ ಪ್ರತಿಯೊಬ್ಬರಿಗೂ ಅರ್ಥವಾಗಬೇಕು. ಯಾಕಂದ್ರೆ, ನಮಗೇನೂ ಬೇಕಾಗಿಲ್ಲ. ನಾವು ಸಿನಿಮಾ ಮಾಡೋದು ಇಲ್ಲ. ಈಗ ಮಾಡ್ತಾನೂ ಇಲ್ಲ. ನೆಮ್ಮದಿಯಾಗಿ ಜೀವನ ನಡೆಸುತ್ತಾ ಇದೀವಿ. ಇಷ್ಟ ಇದ್ರೆ ಹೊಗಳಿ, ಕಷ್ಟ ಇದ್ರೆ ತೆಗಿಲೇಬೇಡಿ. ಸುಮ್ಮನೆ ಸಮಯ ವ್ಯರ್ಥ ಅಷ್ಟೇ!!. ಎಂದು ವಿನೋದ್ ಅವರು ತಮ್ಮ ಮಾತುಗಳನ್ನು ಚೂಪಾದ ಬಾಣದಂತೆ ಎಸೆದರು.

3 Comments
  1. EmpapeCak says

    Richard JbteZEqYEUqI 6 17 2022 cialis from india

  2. coisabali says

    But while few court reports from murder trials mention that the accused is a scaffolder, fewer still fail to mention that the defendant was, at some point in his career, a bouncer cialis online without

  3. EmpapeCak says

    priligy medicine Data Collection and Instruments

Leave A Reply

Your email address will not be published.