Karnataka Election: ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವುದು ಹೇಗೆ? ಸಂಪೂರ್ಣ ವಿವರ ಇಲ್ಲಿದೆ
Submission of Election Nomination: ಈಗಾಗಲೇ ರಾಜ್ಯ ವಿಧಾನಸಭಾ ಚುನಾವಣೆಯ (Karnataka Election) ಅಧಿಕೃತ ಪ್ರಕ್ರಿಯೆ ಶುರುವಾಗಿದೆ. ಮೇ 10ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ 13-04-2023 ರಂದು ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ನಾಮಪತ್ರ ಸಲ್ಲಿಸಲು ದಿನಾಂಕ 20 ಎಪ್ರಿಲ್ ರವರೆಗೆ ಅವಕಾಶವಿರಲಿದೆ ಎನ್ನಲಾಗಿದೆ. ಮೊದಲ ದಿನ 221 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಇನ್ನು, ನಾಮಪತ್ರ ಸಲ್ಲಿಸುವುದು (Submission of Election Nomination) ಹೇಗೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ನಾಮಪತ್ರ (candidate affidavit) ಸಲ್ಲಿಸಲು ಇರಬೇಕಾದ ಅರ್ಹತೆಗಳೇನು?
• ದೇಶದ ಚುನಾವಣೆಯಲ್ಲಿ ಸ್ಪರ್ಧಿಸಲು ವ್ಯಕ್ತಿಯು ಭಾರತದ ಪ್ರಜೆಯಾಗಿರಬೇಕು.
• ರಾಜ್ಯ ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸಲು ವಯಸ್ಸು 30 ಅಥವಾ ಅದಕ್ಕಿಂತ ಹೆಚ್ಚಿರಬೇಕು.
• ಸಂಸದೀಯ, ರಾಜ್ಯ ಅಸೆಂಬ್ಲಿ ಅಥವಾ ವಾರ್ಡ್ ಮಟ್ಟದ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇರಬೇಕು. ಒಬ್ಬರು ಸೇರ್ಪಡೆಗೊಳ್ಳಬೇಕಾಗುತ್ತದೆ.
ರಾಜ್ಯ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ, ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ಆಕಾಂಕ್ಷಿ ಅಭ್ಯರ್ಥಿಯು ಫಾರ್ಮ್ 2 ಬಿ, ಮತದಾರರ ಪಟ್ಟಿ ಪ್ರಮಾಣೀಕೃತ ಸಾರ, ಜಾತಿ ಪ್ರಮಾಣಪತ್ರ, ಫಾರ್ಮ್ ಎ ಮತ್ತು ಬಿ (ಅವರು ರಾಜಕೀಯ ಪಕ್ಷದಿಂದ ಸ್ಪರ್ಧಿಸಿದ್ದರೆ), ಮತ್ತು ಮುಖ್ಯವಾಗಿ, ನಮೂನೆ 26. ನಮೂನೆ 26 ಮುಂತಾದ ಆಯಾ ನಮೂನೆಗಳನ್ನು ಭರ್ತಿ ಮಾಡಬೇಕು. ಜತೆಗೆ, ಅಭ್ಯರ್ಥಿಯು ತನ್ನ ಹಿನ್ನೆಲೆ, ಆಸ್ತಿ-ಪಾಸ್ತಿ ವಿವರ, ಸಂಪತ್ತಿನ ವಿವರ, ಠೇವಣಿ ವಿವರ, ಚಿನ್ನಾಭರಣ ವಿವರ, ಆತನ ಮೇಲೆ ಕೇಸ್‌ಗಳಿದ್ದರೆ, ಕ್ರಿಮಿನಲ್ ಹಿನ್ನೆಲೆ ಇದ್ದರೆ ಅವುಗಳ ವಿವರ ಮತ್ತು ದಾಖಲೆಗಳನ್ನು ನಾಮಪತ್ರದ ಜೊತೆಗೆ ಕಡ್ಡಾಯವಾಗಿ ಒದಗಿಸಬೇಕು.
ನಾಮನಿರ್ದೇಶನ ಪ್ರಕ್ರಿಯೆಯ ಭಾಗವಾಗಿ ಅಭ್ಯರ್ಥಿಯು 10,000 ರೂಪಾಯಿ ಭದ್ರತಾ ಠೇವಣಿಯನ್ನು ಸಲ್ಲಿಸಬೇಕು. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ (SC/ST) ಅಭ್ಯರ್ಥಿಯು 5,000 ರೂ. ನೀಡಬೇಕು. ಅಭ್ಯರ್ಥಿಗಳಿಗೆ ಸುವಿಧಾ ತಂತ್ರಾಂಶದ ಮೂಲಕ ಆನ್‍ಲೈನ್‌ನಲ್ಲಿ ನಾಮಪತ್ರಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ವಿವಿಧ ಚುನಾವಣಾ ಪರವಾನಗಿ ಪಡೆಯಲೂ ಅವಕಾಶವಿದೆ.
ನಾಮನಿರ್ದೇಶನ ಪತ್ರಗಳನ್ನು ಸಲ್ಲಿಸಿದ ನಂತರ, ಚುನಾವಣಾ ಅಧಿಕಾರಿ (RO) ಅಥವಾ ಸಹಾಯಕ ಚುನಾವಣಾಧಿಕಾರಿ (ARO) ಮುಂದೆ ವ್ಯಕ್ತಿಯು ಪ್ರಮಾಣ ಮಾಡಬೇಕು. ಅಭ್ಯರ್ಥಿಯ ಚುನಾವಣಾ ಏಜೆಂಟ್, ಆತ/ಆಕೆ ಅಭ್ಯರ್ಥಿಯಾಗಿ ನಾಮನಿರ್ದೇಶಿತನಾದ ದಿನಾಂಕದಿಂದ ಚುನಾವಣಾ ಫಲಿತಾಂಶ ಘೋಷಣೆ ದಿನಾಂಕದವರೆಗೆ ಆತನಿಂದ ಅಥವಾ ಆತನ ಚುನಾವಣಾ ಏಜೆಂಟಿನಿಂದ ಮಾಡಲಾದ ಎಲ್ಲ ವೆಚ್ಚಗಳ ಪ್ರತ್ಯೇಕ ಮತ್ತು ಸರಿಯಾದ ಲೆಕ್ಕವನ್ನು ಆಯೋಗ ನಿಗದಿಪಡಿಸಿದ ರಿಜಿಸ್ಟರ್‌ಗಳಲ್ಲಿ ಕಡ್ಡಾಯವಾಗಿ ನಿರ್ವಹಿಸಬೇಕು.
ಇದನ್ನು ಓದಿ : Dummy School : ಈ ನಗರದಲ್ಲಿ ಶಾಲೆಗೆ ಹೋಗದಿರಲು ವಿದ್ಯಾರ್ಥಿಗಳು ಶುಲ್ಕ ಪಾವತಿಸುತ್ತಿದ್ದಾರೆ, ಇದೇನು ವಿಚಿತ್ರ ಪ್ರಕರಣ