8th Pay Commission: ಮೋದಿ ಸರಕಾರದಿಂದ ಕೇಂದ್ರ ನೌಕರರಿಗೆ ಭರ್ಜರಿ ಸಿಹಿ ಸುದ್ದಿ!

8th Pay Commission: 8ನೇ ವೇತನ ಆಯೋಗದ (8th Pay Commission)ಕುರಿತು ಕೇಂದ್ರ ನೌಕರರಿಗೆ ಭರ್ಜರಿ ಸಿಹಿ ಸುದ್ದಿ ನೀಡಲು ಮುಂದಾಗಿದೆ.

 

7ನೇ ವೇತನ ಆಯೋಗದ (7th Pay Commission)ಅಡಿಯಲ್ಲಿ ಕೇಂದ್ರ ನೌಕರರ ಮುಂದಿನ ತುಟ್ಟಿಭತ್ಯೆ ಜುಲೈ 1ರಿಂದ ಅನ್ವಯವಾಗಲಿದೆ. ಆದರೆ ಇದಕ್ಕೂ ಮೊದಲು ಕೇಂದ್ರ ಉದ್ಯೋಗಿಗಳಿಗೆ ಗುಡ್ ನ್ಯೂಸ್ (Good News) ಹೊರಬಿದ್ದಿದೆ. ನೌಕರರ ಕನಿಷ್ಠ ವೇತನದಲ್ಲಿ ಭಾರೀ ಹೆಚ್ಚಳವಾಗುವ ಕುರಿತು ಮೂಲಗಳು ಮಾಹಿತಿ ನೀಡಿವೆ.

8ನೇ ವೇತನ ಆಯೋಗದ ಅವಧಿಯಲ್ಲಿ ನೌಕರರ ವೇತನದಲ್ಲಿ ಭಾರೀ ಹೆಚ್ಚಳವಾಗಲಿದ್ದು, ಲೋಕಸಭೆ ಚುನಾವಣೆಯ(Election) ಬಳಿಕ ವೇತನ ಆಯೋಗದ ಸಂವಿಧಾನದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತು ಮಾತುಕತೆ ಪ್ರಗತಿಯಲ್ಲಿದೆ ಎಂದು ಮೂಲಗಳು ಮಾಹಿತಿ ನೀಡಿದ್ದು, 8ನೇ ವೇತನ ಆಯೋಗದ ಬಗ್ಗೆ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕರದ್ ಅವರು ಸಂಸತ್ತಿನಲ್ಲಿ ಈ ವಿಚಾರದ ಕುರಿತು ಪ್ರಸ್ತಾಪಿಸಿದ್ದಾರೆ.

8ನೇ ವೇತನ ಆಯೋಗದಲ್ಲಿ (8th Pay Commission) ಫಿಟ್‌ಮೆಂಟ್ ಅಂಶವನ್ನು(Fittment Factor) ಆಧಾರವಾಗಿ ಇರಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇದರ ಆಧಾರದ ಮೇಲೆ ಉದ್ಯೋಗಿಗಳ ಫಿಟ್‌ಮೆಂಟ್ ಅಂಶವನ್ನು 3.68 ಪಟ್ಟು ಹೆಚ್ಚಳ ಮಾಡುವ ಸಾಧ್ಯತೆಗಳಿವೆ. ಇಂತಹ ಪರಿಸ್ಥಿತಿಯಲ್ಲಿ ನೌಕರರ ಕನಿಷ್ಠ ವೇತನದಲ್ಲಿ ಶೇ.44.44ರಷ್ಟು ಏರಿಕೆಯಾಗುವ ಸಂಭವವಿದೆ. ಉದ್ಯೋಗಿಗಳ ಕನಿಷ್ಠ ವೇತನವು 26,000 ಅಥವಾ ಅದಕ್ಕಿಂತ ಹೆಚ್ಚಾಗುವ ಸಾಧ್ಯತೆಗಳಿವೆ.

2024ರ ಅಂತ್ಯದ ವೇಳೆಗೆ 8ನೇ ವೇತನ ಆಯೋಗ ರಚನೆಯಾಗುವ ಸಾಧ್ಯತೆಯಿದ್ದು, ಬಳಿಕ 1-2 ವರ್ಷಗಳೊಳಗೆ ಕಾರ್ಯಗತಗೊಳಿಸಲಾಗುತ್ತದೆ. ಇದು 2025ರ ಅಂತ್ಯದ ವೇಳೆಗೆ ಅಥವಾ 2026ರ ಆರಂಭದಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ. 7ನೇ ವೇತನ ಆಯೋಗಕ್ಕೆ( 7th Pay Commission)ಹೋಲಿಸಿದರೆ 8ನೇ ವೇತನ ಆಯೋಗದಲ್ಲಿ ಕೆಲವು ಬದಲಾವಣೆಗಳಿದ್ದು, ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ ವೇತನದಲ್ಲಿ ಯಾವುದೇ ಹೆಚ್ಚಳವಿರದು. ಇದರ ಬದಲಾಗಿ ಬೇರೆ ಯಾವುದಾದರೂ ಸೂತ್ರದ ಮೂಲಕ ವೇತನವನ್ನು ಹೆಚ್ಚಳ ಮಾಡಲಾಗುತ್ತದೆ.

ಸಂಬಳ ಯಾವಾಗ ಎಷ್ಟು ಹೆಚ್ಚಳವಾಗಿದೆ?
# 4ನೇ ವೇತನ ಆಯೋಗದ ಕೇಂದ್ರ ನೌಕರರ ವೇತನದಲ್ಲಿ ಶೇ.27.6ರಷ್ಟು ಏರಿಕೆ ಆಗಿದ್ದು, ಇದರಲ್ಲಿ ಕನಿಷ್ಠ ಕೂಲಿ 750 ರೂ. ಕೂಡ ಸೇರಿತ್ತು.
# 5ನೇ ವೇತನ ಆಯೋಗದಲ್ಲಿ ನೌಕರರ ವೇತನದಲ್ಲಿ ಶೇ.31ರಷ್ಟು ದೊಡ್ಡ ಏರಿಕೆ ಕಂಡುಬಂದಿದೆ. ಇದರಿಂದಾಗಿ ಅವರ ಕನಿಷ್ಠ ವೇತನ ಮಾಸಿಕ 2,550 ರೂ.ಗೆ ಹೆಚ್ಚಳವಾಗಿದೆ.
# 6ನೇ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಅಂಶವನ್ನು 1.86 ಪಟ್ಟು ಇರಿಸಲಾಗಿದ್ದು, ಹೀಗಾಗಿ, ನೌಕರರ ಕನಿಷ್ಠ ವೇತನ ಶೇ.54ರಷ್ಟು ಹೆಚ್ಚಳವಾಗಿದ್ದು, ಮೂಲ ವೇತನ 7000 ರೂ.ಗೆ ಏರಿಕೆಯಾಗಿದೆ.
# 7ನೇ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಅಂಶವನ್ನು ಆಧಾರವಾಗಿ ಪರಿಗಣಿಸಿ 2.57 ಪಟ್ಟು ಏರಿಕೆಯಾಗಿದೆ. ಕನಿಷ್ಠ ಮೂಲ ವೇತನ 18,000 ರೂ.ಗೆ ಹೆಚ್ಚಾಗಿದೆ. ಈಗ ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸುವಂತೆ ನೌಕರರು ಒತ್ತಾಯ ಮಾಡುತ್ತಿದ್ದು, ಆದರೆ ಅದು 2.57 ಪಟ್ಟು ಉಳಿದುಕೊಂಡಿದೆ.

 

ಇದನ್ನು ಓದಿ : Laxman Savadi Quits BJP: ಬಿಜೆಪಿಗೆ ಗುಡ್‌ಬೈ ಹೇಳಿ ‘ಕೈ’ ಹಿಡಿಯಲಿರುವ ಲಕ್ಷ್ಮಣ ಸವದಿ!!

Leave A Reply

Your email address will not be published.