Cyber ​​harassment: ಮಹಿಳೆಯರೇ, ಈ ಮಾಹಿತಿ ತಿಳಿಯಿರಿ ಸೈಬರ್​ ಕಿರುಕುಳದಿಂದ ತಪ್ಪಿಸಿಕೊಳ್ಳಿ!!

Cyber ​​harassment : ಇತ್ತೀಚೆಗೆ ಸೈಬರ್ ಕಿರುಕುಳ (Cyber ​​harassment) ಹೆಚ್ಚಾಗಿದೆ. ವಂಚಕರು (hackers) ತಮ್ಮ ಕೈಚಳಕದಿಂದ ಅಮಾಯಕರ ಬ್ಯಾಂಕ್ ಖಾತೆ ಇನ್ನಿತರೆ ಮಾಹಿತಿ ಪಡೆದು ಹ್ಯಾಕ್ (hack) ಮಾಡುತ್ತಾರೆ. ಇತ್ತೀಚೆಗಂತೂ ಈ ಪ್ರಕರಣ ಹೆಚ್ಚೇ ಇದೆ. ಫೇಕ್ ಮೆಸೇಜ್ (fake messag), ಕಾಲ್ (call) ಮೂಲಕ ವಂಚನೆ ಮಾಡುತ್ತಾರೆ. ಮಹಿಳೆಯರು ಇಂತಹ ಸಮಸ್ಯೆ ಎದುರಿಸುತ್ತಿದ್ದು, ಡಿಜಿಟಲ್​ ಮಾಹಿತಿ ಲೀಕ್ ಆಗಬಾರದೆಂದರೆ ಈ ತಂತ್ರಜ್ಞಾನ ಬಳಸಿ.

ಎನ್​ಕ್ರಿಪ್ಟೆಡ್​ ಫೈಲ್​ ಟ್ರಾನ್ಸ್​ವರ್​: ಮಹಿಳೆಯರು (women) ವೈಯಕ್ತಿಕ ಮತ್ತು ಸೂಕ್ಷ್ಮ ದತ್ತಾಂಶಗಳನ್ನು ಮೇಲ್​ ಅಥವಾ ಇನ್ನಿತರೆ ವರ್ಚುಯಲ್​ ಫ್ಲಾಟ್​ಫಾರಂ ನಿಂದ ಹಂಚಿಕೊಳ್ಳಬೇಕಾದರೆ ಅವರು ಎನ್​ಕ್ರಿಪ್ಟೆಡ್​ ಫೈಲ್​ ಟ್ರಾನ್ಸ್​ವರ್​ ಫ್ಲಾಟ್​ಫಾರ್ಮ್​ ಬಳಸುವುದು ಒಳಿತು. ಇದು ಅವರ ಮಾಹಿತಿ ರಕ್ಷಣೆ ಮಾಡುತ್ತದೆ. ಜೊತೆಗೆ ಅಂತರ್ಜಾಲದಿಂದ ಮಾಹಿತಿ ರಕ್ಷಣೆಯೂ ಮಾಡುತ್ತದೆ.

ಕಾಲರ್​ ಐಡೆಂಟಿಫಿಕೇಷನ್​​ ಆ್ಯಪ್​ (caller identificatin app): ಮಹಿಳೆಯರು ಅನಗತ್ಯ ಸಂದೇಶ, ಬೆದರಿಕೆ ಕರೆಗಳಿಂದ ತಪ್ಪಿಸಿಕೋಳ್ಳಲು ಕಾಲರ್​ ಐಡೆಂಟಿಫಿಕೇಷನ್​ ಬಳಸಬಹುದು. ಈ ಆ್ಯಪ್​ಗಳು ಮಹಿಳೆಯರ ಖಾಸಗಿತನವನ್ನು ಗುರುತಿಸುತ್ತದೆ. ಸ್ಪ್ಯಾಮ್​ ಕಾಲ್​ ಮತ್ತು ಸಂದೇಶಗಳನ್ನು ಬ್ಲಾಕ್​ ಮಾಡಲು ಸಹಕಾರಿಯಾಗಿದೆ.

ಸೆಕ್ಯೂರಿಟಿ ಅನಾಲಿಟಿಕ್ಸ್​ ಫ್ಲಾಟ್​ಫಾರ್ಮ್​: ಈ ಸುಧಾರಿತ ಆಲ್ಗೊರಿದಮ್​ ಮತ್ತು ಮೆಷಿನ್​ ಲರ್ನಿಂಗ್​ ತಂತ್ರಂಶಾವನ್ನು ಬಳಸಿ ನೆಟ್​ವರ್ಕ್​ ಟ್ರಾಫಿಕ್​ ಮತ್ತು ಅನುಮಾನಸ್ಪದ ಚಟುವಟಿಕೆಗಳನ್ನು ಪತ್ತೆ ಹಚ್ಚಬಹುದು. ನಕಲಿ ಖಾತೆ ಅಥವಾ ಟ್ರೋಲ್​ಗಳ ಕಿರುಕುಳದಿಂದಲೂ ಮುಕ್ತಿ ಪಡೆಯಬಹುದು. ಈ ಆಪ್ ನಿಂದ ಮಹಿಳೆಯರು ತಮ್ಮ ವೈಯಕ್ತಿಕ ಮಾಹಿತಿ ಸೋರಿಕೆಯನ್ನು ತಡೆಗಟ್ಟಬಹುದು.

ಮಾಲ್​ವೇರ್​​​​ ರಿಮೂವಲ್​ : ವಂಚಕರು ಕೆಲವೊಮ್ಮೆ ಅಂತರ್ಗತ ಕ್ಯಾಮೆರಾಗಳು ಅಥವಾ ಮೈಕ್ರೊಫೋನ್‌ಗಳನ್ನು ಬಳಸಿ ಮಹಿಳೆಯರನ್ನು ಗುಪ್ತವಾಗಿ ವೀಕ್ಷಿಸಬಹುದು. ಈ ಮಾಲ್​​ವೇರ್​ ಸಾಧನಗಳ ಪತ್ತೆಗೆ ಟ್ರೋಜೊನ್​ ಮತ್ತು ರನ್​ಸೊಮ್​ವೇರ್​ಗಳು ವೈರಸ್​ ಬಳಸಬಹುದಾಗಿದೆ. ಮಾಲ್​ವೇರ್​ ಸಾಫ್ಟ್​​ವೇರ್ ಬಳಕೆಯನ್ನು ಪತ್ತೆ ಹಚ್ಚಲು ವಾರಕ್ಕೆ ಒಮ್ಮೆ ಸಾಧನಗಳನ್ನು ಸ್ಕಾನ್​ ಮಾಡಿ, ಈ ಮೂಲಕ ಸುರಕ್ಷತೆ ಕಾಪಾಡಬಹುದು.

ಆ್ಯಂಟಿ – ಸ್ಪೈವೆರ್​ ಸಾಫ್ಟ್​ವೇರ್​: ಇದು ನಿಮ್ಮ ಸಾಧನದಲ್ಲಿ ಅಳವಡಿಸಿರುವ ಸ್ಫೈವೆರ್​ ಅನ್ನು ಪತ್ತೆ ಮಾಡಿ ತೆಗೆದು ಹಾಕುತ್ತದೆ. ಮತ್ತು ನಿರಂತರ ಸ್ಯ್ಕಾನ್ ಮಾಡುವ ಮೂಲಕ ನಿಮ್ಮ ಮಾಹಿತಿಗಳನ್ನು ರಕ್ಷಿಸುತ್ತದೆ. ಆ್ಯಂಟಿ ಸ್ಪೈ ಸಾಫ್ಟ್​ವೇರ್​ ಜೊತೆಗೆ ಇನ್ನಿತರ ತಂತ್ರಜ್ಞಾನ ಸಾಧನಗಳು, ವರ್ಚುಯಲ್​ ಖಾಸಗಿ ನೆಟ್​ವರ್ಕ್ಸ್​​, ಎನ್​ಕ್ರಿಪ್ಟೆಡ್​ ಮೆಸೇಜಿಂಗ್​ ಆ್ಯಪ್​ ಮತ್ತು ಪಾಸ್​ವರ್ಡ್​ಗಳನ್ನು ಸುರಕ್ಷತೆಯನ್ನು ಕಾಪಾಡುವ ಮೂಲಕ ಸೈಬರ್​ ವಂಚನೆಯಿಂದ ತಪ್ಪಿಸಿಕೊಳ್ಳಬಹುದು.

 

ಇದನ್ನು ಓದಿ : Beer Bus: ಎಣ್ಣೆ ಪ್ರಿಯರಿಗೆ ಬಂಪರ್ ಸಿಹಿ ಸುದ್ದಿ! ಈ ಬಸ್ಸಿನಲ್ಲಿ ಪ್ರಯಾಣಿಸಿದರೆ ನಿಮಗೆ ಸಿಗಲಿದೆ 120 ನಿಮಿಷಗಳವರೆಗೆ ಫ್ರೀ ಬಿಯರ್! 

Leave A Reply

Your email address will not be published.