Richest CM Of India : ದೇಶದ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿ ರಿಲೀಸ್! ಸಿಎಂ ಬೊಮ್ಮಾಯಿ ಎಷ್ಟು ಸಿರಿವಂತರು ಗೊತ್ತಾ?
Richest CM of India : ದೇಶದ ಶ್ರೀಮಂತ ಮುಖ್ಯಮಂತ್ರಿಗಳು (CM) ಯಾರೆಂಬುದರ ಬಗ್ಗೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ದೊಡ್ಡ ರೀತಿಯ ಸಮೀಕ್ಷೆ ಮಾಡಿದೆ. ಇವರು ಸಮೀಕ್ಷೆ ಮಾಡಿದ ವರದಿಯ ಪ್ರಕಾರ ಯಾರು ಅತ್ಯಂತ ಶ್ರೀಮಂತ ವ್ಯಕ್ತಿ (rich person) ಇರಬಹುದು ಎಂಬುದನ್ನು ನೀವು ಯವಾಗದ್ರು ಯೋಚಿಸಿದ್ದೀರಾ? ಇಲ್ಲಿದೆ ನೋಡಿ ಅದರ ಪ್ರಮುಖ ಮಾಹಿತಿ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ (Richest CM of India )ಯಾರೆಂದರೆ ಆಂಧ್ರಪ್ರದೇಶದ (andhrapradesha) ವೈ.ಎಸ್ ಜಗನ್ ಮೋಹನ್ ರೆಡ್ಡಿ(jagan mohan Reddy) 510 ಕೋಟಿ ರೂಪಾಯಿಗಳೊಂದಿಗೆ ಇವರು ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಯಾಗಿದ್ದಾರೆ.
ಹಾಗೆಯೇ ಇದರ ಬೆನ್ನಲ್ಲೇ ಅರುಣಾಚಲ ಪ್ರದೇಶದ(arunaachala) ಮುಖ್ಯಮಂತ್ರಿ ಪೆಮಾ ಖಂಡು (prema khandu)ಎರಡನೇ ಶ್ರೀಮಂತ ಮುಖ್ಯಮಂತ್ರಿ (richest CM) ಆಗಿದ್ದಾರೆ. ಹಾಗೆಯೇ ಇವರು 163 ಕೋಟಿ ರೂಪಾಯಿಯ ಆಸ್ತಿಯನ್ನು ಹೊಂದಿದ್ದಾರೆ. ಅದೇ ರೀತಿ 63 ಕೋಟಿ ಮೌಲ್ಯದ ಚರಾಸ್ತಿ ಮತ್ತು ಸ್ಥಿರಾಸ್ತಿ ಹೊಂದಿರುವ ನವೀನ್ ಪಟ್ನಾಯಕ್ (Naveen patnayak) ದೇಶದ 30 ಮುಖ್ಯಮಂತ್ರಿಗಳಲ್ಲಿ ಅತೀ ಮೂರನೇ ಶ್ರೀಮಂತ ಎಂದು ಎಲ್ಲರು ಗುರುತಿಸಿಕೊಳ್ಳುವಂತಹ ವ್ಯಕ್ತಿ ಆಗಿದ್ದಾರೆ.
ನ್ಯಾಷನಲ್ ಎಲೆಕ್ಷನ್ ವಾಚ್ (election watch) ಸಹಯೋಗದೊಂದಿಗೆ ಸ್ವತಂತ್ರ ಗುಂಪು ದೇಶದ ರಾಜ್ಯ ವಿಧಾನಸಭೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ 30 ಪ್ರಸ್ತುತ ಮುಖ್ಯಮಂತ್ರಿಗಳ ಸ್ವಯಂ ಪ್ರಮಾಣ ಪತ್ರಗಳನ್ನು ಹಂಚಿದೆ. ಭಾರತದ 28 ರಾಜ್ಯ ವಿಧಾನಸಭೆಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ಮುಖ್ಯಮಂತ್ರಿಗಳ ವಿಶ್ಲೇಷಣೆ 2023 ಎಂಬ ಮಹತ್ತರವಾದ ವರದಿಯನ್ನು ದೇಶದಲ್ಲಿ ಪ್ರಜಾಪ್ರಭುತ್ವದ ಸುಧಾರಣೆಗಳನ್ನು ಪ್ರತಿಪಾದಿಸುವ ಗುಂಪು ಬುಧವಾರ ಈ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಕಳೆದ ಕೆಲವು ವರ್ಷಗಳಿಂದ ಅದೇ ವರದಿಯನ್ನು ಮುಂದುವರಿಸುತ್ತಾ ಹೋಗುತ್ತಿದೆ.
ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ(basavaraj bommayi) ಒಟ್ಟು ಆಸ್ತಿ 8.92 ಕೋಟಿಯಾಗಿದ್ರೆ, ಮಹಾರಾಷ್ಟ್ರದ ಶಿವಸೇನೆಯ ಏಕನಾಥ್ ಸಂಭಾಜಿ ಶಿಂಧೆ 3.75 ಕೋಟಿ ರೂ. ಅವರ ಘೋಷಿತ ಆಸ್ತಿಯ ಮೌಲ್ಯ 11.6 ಕೋಟಿ ರೂಪಾಯಿ ಆಗಿದೆ. ಇನ್ನು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಮುಖ್ಯಸ್ಥ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್(KCR) ತಮ್ಮ ಅಫಿಡವಿಟ್ನಲ್ಲಿ ಒಟ್ಟು 23.5 ಕೋಟಿ ರೂಪಾಯಿಗಳ ಆಸ್ತಿಗೆ ಬದಲಾಗಿ 8.88 ಕೋಟಿ ರೂಪಾಯಿಗಳ ಹೊಣೆಗಾರಿಕೆಗಳನ್ನು ಇವರು ಘೋಷಿಸಿದ್ದಾರೆ.
ಎಡಿಆರ್ (ADR)ನೀಡಿರುವ ವರದಿಯ ಪ್ರಕಾರ, ಒಟ್ಟು 30 ಮುಖ್ಯಮಂತ್ರಿಗಳಲ್ಲಿ 29 ಮಂದಿ ಕೋಟ್ಯಾಧಿಪತಿಗಳು. ಅದೇ ರೀತಿ ಒಂಬತ್ತು ಮುಖ್ಯಮಂತ್ರಿಗಳು 1 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಸಾಲವನ್ನು ಅವರು ತೆಗೆದುಕೊಂಡಿದ್ದಾರೆ. ಮುಖ್ಯಮಂತ್ರಿಯೊಬ್ಬರ ಸರಾಸರಿ ಆಸ್ತಿ ಮೌಲ್ಯ 33.96 ಕೋಟಿ ರೂಪಾಯಿ ಆಗಿದೆ ಇದನ್ನು ಕೇಳಿದಾಗ ಎಲ್ಲರಿಗೂ ಮೈ ರೋಮಾಂಚನಕಾರಿಯಾಗುತ್ತದೆ.
2022 ರ ಮಾಹಿತಿಯನ್ನು ಹೋಲಿಸಿದ್ರೆ 2023ರ ಎಡಿಆರ್ ವರದಿಯ ನಡುವೆ ಇರುವ ಮಾಹಿತಿ ಹೆಚ್ಚೇನೂ ವ್ಯತ್ಯಾಸ ಇಲ್ಲ. ವೈ.ಎಸ್.ಜಗನ್(jagan), ಪೆಮಾ ಖಂಡು ಮತ್ತು ನವೀನ್ ಪಟ್ನಾಯಕ್ ಶ್ರೀಮಂತ ಮುಖ್ಯಮಂತ್ರಿಗಳಲ್ಲಿ ಮೊದಲ ಮೂರು ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ.
ತುಂಬಾನೇ ಬಡತನದಲ್ಲಿ ಮಮತಾ ಬ್ಯಾನರ್ಜಿ (Mamatha Banerjee)ಇದರೆ ಎಂದು ಕಳೆದ ವರ್ಷದ ವರದಿಯ ಪ್ರಕಾರ ತಿಳಿದು ಬಂದಿದೆ ಅದರಲ್ಲಿ ಇವಾಗಲು ಇವರು ತಮ್ಮ ಮೊದಲ ಸ್ಥಾನವನ್ನ ಉಳಿಸಿಕೊಂಡಿದ್ದಾರೆ. ಜೆಡಿಯುನ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್(nitheesh Kumar) ಅವರು ಕಳೆದ ವರ್ಷ 56 ಲಕ್ಷ ರೂಪಾಯಿಗಳನ್ನು ಹೊಂದಿದ್ದಾರೆ ತದ ನಂತರ ಮಮತಾ ಬ್ಯಾನರ್ಜಿ ನಂತರದ ಸ್ಥಾನದಲ್ಲಿದ್ದರು. ಆದರೆ ಎಡಿಆರ್(ADR) ನ ಇತ್ತೀಚಿನ ವರದಿಯ ಪ್ರಕಾರ ಅವತ್ತು ಇದ್ದ ಆಸ್ತಿಗಿಂತ 3.09 ಕೋಟಿ ರೂಪಾಯಿಗೆ ಹೆಚ್ಚಿಗೆಯಾಗಿದೆ.
ಇದನ್ನು ಓದಿ : EMI facility on UPI : ಈಗ UPI ನಲ್ಲಿ EMI ಸೌಲಭ್ಯ! ICICI ಬ್ಯಾಂಕ್ ನ ಸೂಪರ್ ಘೋಷಣೆ!