Radhika Apte: ಖ್ಯಾತ ನಟಿ ರಾಧಿಕಾ ಆಪ್ಟೆ ಎದುರಿಸಿದ ಬಾಡಿ ಷೇಮಿಂಗ್ : ನಿನ್ನ ಸ್ತನಗಳು ಯಾಕೆ ಚಿಕ್ಕ, ದಪ್ಪ ಮಾಡಿಸು ಎಂದರಂತೆ!

Radhika Apte: ಸಿನಿಮಾ ಎಂಬ ಬಣ್ಣದ ಲೋಕದ ಒಳಗೆ ಹೊರ ಹೊಕ್ಕ ಬಳಿಕ ವಾಸ್ತವ ಸತ್ಯದ ಅನಾವರಣವಾಗುತ್ತದೆ. ಸಿನಿಮಾರಂಗವನ್ನು ವೃತ್ತಿ ಜೀವನವಾಗಿ ಆಯ್ದುಕೊಂಡಾಗ ಸಾಕಷ್ಟು ಅಡೆತಡೆಗಳನ್ನು ದಾಟಿ ಮುಂದೆ ಸಾಗಬೇಕಾಗುತ್ತದೆ. ಅದರಲ್ಲಿಯೂ ಸಿನಿಮಾ ರಂಗದಲ್ಲಿ ಮಹಿಳೆಯರು ಎದುರಿಸುವ ಸವಾಲು ಅಷ್ಟಿಷ್ಟಲ್ಲ. ಬಾಲಿವುಡ್( Bollywood) ನಲ್ಲಿ ನಟನೆಯ ಮೂಲಕ ಗುರುತಿಸಿಕೊಂಡಿರುವ ರಾಧಿಕಾ ಆಪ್ಟೆ ಆಯ್ಕೆ ಮಾಡುವ ಸಿನಿಮಾಗಳಲ್ಲಿ ಇವರ ಪಾತ್ರ ನೋಡುಗರಿಗೆ ಮೆಚ್ಚುಗೆಗೆ ಪಾತ್ರವಾಗುತ್ತದೆ. ತಮ್ಮ ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ ರಾಧಿಕಾ ಆಪ್ಟೆ ಅವರು ಎದುರಿಸಿದ ಬಾಡಿ ಶೇಮಿಂಗ್ ಬಗ್ಗೆ(Body Shaming in Bollywood) ಮಾಹಿತಿ ನೀಡಿದ್ದಾರೆ.

 

ದೂರದ ಬೆಟ್ಟಗೆ ನುಣ್ಣಗೆ ಎಂಬಂತೆ ದೂರದಿಂದ ನೋಡಿದಾಗ ಎಲ್ಲವೂ ಸುಂದರ.ಆದರೆ ಒಮ್ಮೆ ಸಿನಿಮಾ ರಂಗದ ಒಳಹೊಕ್ಕರೆ ಅಲ್ಲಿನ ಒಳಗಿನ ಗುಟ್ಟು ರಟ್ಟಾಗುತ್ತದೆ. ಬಣ್ಣದ ಲೋಕದಲ್ಲಿ ನೆಲೆ ಕಂಡ ಬಳಿಕ ಯಶಸ್ಸು ಅರಸಿಕೊಂಡು ಬರುವುದು ಗೊತ್ತೇ ಇದೆ. ಆದರೆ, ಈ ನಡುವೆ ಸಿನಿ ಲೋಕದಲ್ಲಿ ಮಹಿಳೆಯರು ಅನುಭವಿಸುವ ಕಷ್ಟ ವಿವರಿಸ ಲಾಗದಂತದ್ದು ಎಂಬುದನ್ನು ಈಗಾಗಲೇ ಅನೇಕ ನಟಿಯರು ತಮ್ಮ ಹೇಳಿಕೆಗಳ ಮೂಲಕ ಬಹಿರಂಗಪಡಿಸಿದ್ದಾರೆ. ಈಗ ಬಾಲಿವುಡ್’ನ ಖ್ಯಾತ ನಟಿ ರಾಧಿಕಾ ಆಪ್ಟೆ (Radhika Apte) ತಾವು ಕೇಳಿದ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ರಾಧಿಕಾ ಆಪ್ಟೆ ಅವರು ತಾನು ಎದುರಿಸಿದ ವಿಚಿತ್ರ ಮತ್ತು ಅಸಹ್ಯಕರ ರೀತಿಯ ಕಾಮೆಂಟ್‌’ಗಳ ಕುರಿತು ತಿಳಿಸಿದ್ದಾರೆ.

ರಾಧಿಕಾ ಅವರು ಮೂರ್ನಾಲ್ಕು ಕಿಲೋಗಳಷ್ಟು ತೂಕ ಹೊಂದಿದ್ದ ಪರಿಣಾಮ ಸಿನಿಮಾ ಆಫರ್ ಕಳೆದುಕೊಂಡರಂತೆ! ಸಹಜವಾಗಿ ನೀವು ಹೊಸಬರಾಗಿದ್ದಾಗ ಈ ರೀತಿ ಹೇಳುವುದೆಲ್ಲ ಸಾಮಾನ್ಯ. ‘ಏಕೆ ನಿಮ್ಮ ಮೂಗು ಚೆನ್ನಾಗಿಲ್ಲ. ನಿಮ್ಮ ಸ್ತನ ಏಕೆ ಹೀಗಿವೆ, ದೊಡ್ಡದಾಗಿ ಮಾಡಿಸಿಕೊ” ಎಂದೆಲ್ಲ ಹೇಳಿದ್ದರಂತೆ! ತಾನು ಎದುರಿಸಿದ ಬಾಡಿ ಶೇಮಿಂಗ್ ಬಗ್ಗೆ ಮಾತನಾಡುತ್ತಾ, ಕೆಲವು ವರ್ಷಗಳಲ್ಲಿ ಈ ವಿಚಾರದ ಬಗ್ಗೆ ಬಹಳ ಮುಕ್ತವಾಗಿ ಮಾತನಾಡಬಹುದು ಎಂದು ಕೂಡ ರಾಧಿಕಾ ಅವರು ಹೇಳಿದ್ದಾರೆ.

ತನ್ನ ವೃತ್ತಿಜೀವನದ ಪ್ರಾರಂಭಿಕ ವರ್ಷಗಳಲ್ಲಿ ಶಾರ್ಟ್ ಮೂವಿಗಳಲ್ಲಿ(Short Movie) ಬಣ್ಣ ಹಚ್ಚಿದ್ದಾರೆ. ಪರ್ಚ್ಡ್‌ ಸಿನಿಮಾದಿಂದ ಬದ್ಲಾಪುರ್‌’ವರೆಗೆ ಅನೇಕ ಸಿನಿಮಾಗಳಲ್ಲಿ ವೈವಿಧ್ಯಮಯ ಪಾತ್ರಗಳ ನಿರ್ವಹಣೆ ಮಾಡಿ ಜನ ಮನ ಸೆಳೆದಿದ್ದಾರೆ. ಫಿಲ್ಮ್ ಕಂಪ್ಯಾನಿಯನ್‌’ಗೆ ನೀಡಿದ ಹೊಸ ಸಂದರ್ಶನದಲ್ಲಿ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ, ಸಿನಿಮಾ ಇಂಡಸ್ಟ್ರೀಯಲ್ಲಿ ನೀವು ಯಶಸ್ಸು (Success) ಗಳಿಸಲು ಇಚ್ಛಿಸಿದರೆ ನಿಮ್ಮ ನೋಡುವ ದೃಷ್ಟಿಕೋನವನ್ನು ಇಲ್ಲವೇ ನೋಟವನ್ನು ಬದಲಾಯಿಸಬೇಕೆಂದು ಒಬ್ಬರು ಹೇಳಿದ್ದನ್ನು ನೆನಪಿಸಿಕೊಂಡಿದ್ದು, ವೃತ್ತಿ ಜೀವನದ ಬಗ್ಗೆ ಈಗ ಅರಿವು ಮೂಡಿಸಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.

“ವೈವಿಧ್ಯಮಯ ಪಾತ್ರಗಳಲ್ಲಿ ಬಣ್ಣ ಹಚ್ಚಿದರು ಕೂಡ ಅವರ ಗ್ರಹಿಕೆಗಳು ವಿಭಿನ್ನ ಹಾಗೂ ವಿಚಿತ್ರವಾಗಿತ್ತು. ರಾಧಿಕಾ ಅವರು ಬದ್ಲಾಪುರ ಮಾಡುವವರೆಗೂ ಹಳ್ಳಿ ಹುಡುಗಿಯ ಪಾತ್ರ ಮಾತ್ರ ಮಾಡಲು ಸಾಧ್ಯ ಎಂದು ಎಲ್ಲರೂ ಅಂದುಕೊಂಡಿದ್ದರಂತೆ! ಬದ್ಲಾಪುರ ಸಿನಿಮಾದ ಬಳಿಕ ಸೆಕ್ಸ್ ಕಾಮಿಡಿಗಳನ್ನು ಮಾತ್ರ ಮಾಡುವುದಕ್ಕೆ ಅರ್ಹ ಎಂಬ ಬೋರ್ಡ್ ಅಡಿ ಗುರುತಿಸುತ್ತಿದ್ದರು. ಇದರ ಬಳಿಕ ಎಂದಿಗೂ ಹೌದು(YES) ಎಂದು ಹೇಳಲಿಲ್ಲ ”ಎಂದು ರಾಧಿಕಾ ಅವರು ತಮ್ಮ ಮನದಾಳದ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ: Byjus Recruitment: ಬ್ಯುಸಿನೆಸ್ ಡೆವಲಪ್ಮೆಂಟ್ ಅಸೋಸಿಯೇಟ್‌ ಹುದ್ದೆಗೆ ಅರ್ಜಿ ಆಹ್ವಾನ!! ಭರ್ಜರಿ 8 ಲಕ್ಷ ಸಂಬಳ : ಇಂದೇ ಅಪ್ಲೈ ಮಾಡಿ!

Leave A Reply

Your email address will not be published.