Dharmasthala: ಧರ್ಮಸ್ಥಳದ ವಿಷು ಹಬ್ಬದ ಪೂಜಾ ಕಾರ್ಯದ ಮಾಹಿತಿ ವೈರಲ್! ನಿಜಾಂಶ ಏನು?
Dharmasthala Darshan :ಧರ್ಮಸ್ಥಳದ (Dharmsthala)ಕುರಿತು ಫೋಟೋವೊಂದು (Photo)ವೈರಲ್ (Viral) ಆಗುತ್ತಿದ್ದು, ಇದನ್ನು ಗಮನಿಸಿದ ಭಕ್ತಾದಿಗಳಲ್ಲಿ ಗೊಂದಲ ಮನೆ ಮಾಡಿದೆ. ಕಾಲಾವಧಿ ವಿಷು ಜಾತ್ರೆಯ ಪ್ರಯುಕ್ತ ಧರ್ಮಸ್ಥಳ (Dharmasthala Darshan) ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳ ಬಗ್ಗೆ ನೀಡಲಾಗಿರುವ ಸೂಚನೆಯನ್ನು ಒಳಗೊಂಡ ಫೋಟೋವೊಂದು ವಾಟ್ಸಾಪ್ ಗ್ರೂಪ್ಗಳಲ್ಲಿ (WhatsApp Group)ಸ್ಟೇಟಸ್ಗಳಲ್ಲಿ ಶೇರ್ ಆಗುತ್ತಿದೆ.
ಧರ್ಮಸ್ಥಳ ದೇವಸ್ಥಾನದಲ್ಲಿ(Dharmsthala Temple) ಕಾಲಾವಧಿ ವಿಷು ಜಾತ್ರೆಯ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿದೆ. ದಿನಾಂಕ 17-04-2023ರ ಸೋಮವಾರದಿಂದ 22/04/2023ರ ಶನಿವಾರದವರೆಗೆ ಬೆಳಗ್ಗೆ 8:30 ಗಂಟೆಯವರೆಗೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಅವಕಾಶವಿರುವುದಿಲ್ಲ ಎಂಬ ಮಾಹಿತಿಯನ್ನು ಫೋಟೋದಲ್ಲಿ ನಮೂದಿಸಲಾಗಿದೆ ಎಂದು ತಿಳಿದುಬಂದಿದೆ.
ವಿಷು ಜಾತ್ರೆಯ ಕುರಿತು ಧರ್ಮಸ್ಥಳ ಭಕ್ತಾದಿಗಳಿಗೆ ಹಂಚಿಕೊಂಡಿರುವ ಮಾಹಿತಿಯಲ್ಲಿ ಸಾಯಂಕಾಲ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ಗರ್ಭಗುಡಿಯ ಆವರಣಕ್ಕೆ ಬಿಡಲಾಗುವುದು ಎಂಬ ಮಾಹಿತಿ ಕೂಡ ವೈರಲ್ ಆಗುತ್ತಿರುವ ಫೋಟೋದಲ್ಲಿದೆ. ಹೀಗಾಗಿ, ಭಕ್ತಾದಿಗಳು ಸಹಕರಿಸುವಂತೆ ಮನವಿ ಸಲ್ಲಿಸುವ ವೈರಲ್ ಆದ ಪೋಸ್ಟ್ನಲ್ಲಿ ನಮೂದಿಸಲಾಗಿದೆ. ಸದ್ಯ, ವಿಷು ಜಾತ್ರೆಯ ಕುರಿತು ಧರ್ಮಸ್ಥಳ ಭಕ್ತಾದಿಗಳಿಗೆ ಮಾಡಲಾಗಿರುವ ಈ ಮನವಿ ಭಾರೀ ವೈರಲ್ ಆಗುತ್ತಿದೆ. ಧರ್ಮಸ್ಥಳ ದೇಗುಲದ ಆಡಳಿತ ಮಂಡಳಿಯು ಈ ಕುರಿತು ಅಧಿಕೃತ ಮಾಹಿತಿಯ ಮೂಲಕ ಸ್ಪಷ್ಟನೆ ನೀಡಬೇಕಾಗಿದ್ದು ಗೊಂದಲಗಳಿಗೆ ತೆರೆ ಎಳೆಯಬೇಕಾಗಿದೆ.
ಆದರೆ ಈ ಕುರಿತು ಧರ್ಮಸ್ಥಳ ಕ್ಷೇತ್ರದ ದೇಗುಲದ ಆಡಳಿತ ಮಂಡಳಿ ಯಾವುದೇ ಸೊಷಿಯಲ್ ಮೀಡಿಯಾ ಖಾತೆಯಲ್ಲಿ(Social Media) ಏಪ್ರಿಲ್ 13ರ ಮಧ್ಯಾಹ್ನದವರೆಗೂ ಈ ಕುರಿತು ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ, ವೈರಲ್ ಆಗುತ್ತಿರುವ ಸುದ್ದಿ ಎಷ್ಟರಮಟ್ಟಿಗೆ ನಿಜ ಎಂಬ ಪ್ರಶ್ನೆ ಜನವಲಯದಲ್ಲಿ ಕಾಡಿದ್ದು, ಇದಕ್ಕೆ ಧರ್ಮಸ್ಥಳ ದೇಗುಲದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ ಬಳಿಕವೇ ಸತ್ಯಾಸತ್ಯತೆ ತಿಳಿಯಬೇಕಾಗಿದೆ.