Aishwarya Rai- Salman Khan: ಸಲ್ಮಾನ್ ಖಾನ್ ಸೆಕ್ಸಿಯೆಸ್ಟ್ ಮತ್ತು ಸೌಂದರ್ಯವುಳ್ಳ ವ್ಯಕ್ತಿ – ಐಶ್ವರ್ಯಾ ರೈ ; ವಿಡಿಯೋ ಸಖತ್ ವೈರಲ್!!

Aishwarya Rai- Salman Khan: 90ರ ದಶಕದಲ್ಲಿ ಬಾಲಿವುಡ್ ನಲ್ಲಿ (Bollywood) ಭಾರೀ ಸದ್ಧು ಮಾಡಿದ್ದ ಪ್ರೇಮಿಗಳ ಜೋಡಿ ಅಂದ್ರೆ ಅದು ಸಲ್ಮಾನ್‌ ಖಾನ್‌ (Salman Khan) ಮತ್ತು ಐಶ್ವರ್ಯಾ ರೈ (Aishwarya Rai) ಅವರದ್ದು. ಹೌದು, ಇವರಿಬ್ಬರ ನಡುವೆ ಪ್ರೀತಿ ಚಿಗುರೊಡೆದಿತ್ತೆಂಬುದು ಇಡೀ ಜಗತ್ತಿಗೇ ಗೊತ್ತಿರುವ ವಿಚಾರ. ಅದೇ ಸಮಯದಲ್ಲಿ ಅವರ ಸಂಬಂಧ ಬ್ರೇಕಪ್‌ ಆಗಿ, ಹೆಚ್ಚು ಚರ್ಚೆಯಾಗಿತ್ತು. ಇದೀಗ ಮತ್ತೆ ಇವರಿಬ್ಬರ ಹಿಂದಿನ ಪ್ರೇಮಕಾವ್ಯ ವೈರಲ್ ಆಗಿದೆ. ಐಶ್ವರ್ಯಾ ರೈ ಖಾನ್ (Aishwarya Rai- Salman Khan) ಬಗ್ಗೆ ಹೇಳಿದ್ದ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿವೆ.

 

ಸದ್ಯ ಐಶ್ವರ್ಯಾ ರೈ ಬಚ್ಚನ್ ಫ್ಯಾಮಿಲಿಯ ಸೊಸೆ. ಆದರೂ ತಮ್ಮ ಹಿಂದಿನ ಪ್ರೇಮಪುಟಗಳು ಇದೀಗ ತೆರೆದುಕೊಳ್ಳುತ್ತಿವೆ. ಹೌದು, ಐಶ್ವರ್ಯಾ ರೈ ಹಾಗೂ ಖಾನ್ ಬ್ರೇಕಪ್ ಆರಂಭದ ದಿನಗಳಲ್ಲಿ ಇವರಿಬ್ಬರ ಫೋಟೋಗಳು ಹರಿದಾಡಿದ್ದವು. ಇದೀಗ ಐಶ್ವರ್ಯಾ ರೈ ಖಾನ್ ಬಗ್ಗೆ ನುಡಿದಿರುವ ಮಾತುಗಳು ವೈರಲ್ ಆಗುತ್ತಿವೆ.

ಇತ್ತೀಚೆಗೆ ಐಶ್ವರ್ಯಾ ರೈ ಪುತ್ರಿಯ ಜೊತೆಗೆ ಅಂಬಾನಿ ಕುಟುಂಬದ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಹಲವು ಸೆಲೆಬ್ರಿಟಿಗಳ ಜೊತೆಗೆ ಸಲ್ಮಾನ್ ಖಾನ್ ಕೂಡ ಬಂದಿದ್ದರು. ಇವರಿಬ್ಬರ ಫೋಟೋಗಳು ವೈರಲ್ ಕೂಡ ಆಗಿತ್ತು. ಸದ್ಯ ಸದಾ ವೈರಲ್ ಸುದ್ದಿಯಾಗಿರುವ ರೈ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು, ಹಲವು ವರ್ಷಗಳ ಹಿಂದೆ ಸಿಮಿ ಗರೆವಾಲ್ ಅವರೊಂದಿಗಿನ ಸಂದರ್ಶನದಲ್ಲಿ ಭಾಗವಹಿಸಿದ್ದ ಐಶ್ವರ್ಯಾಗೆ ” ಬಾಲಿವುಡ್‌ನಲ್ಲಿರುವ ಸೆಕ್ಸಿಯೆಸ್ಟ್ (sexiest person) ಮತ್ತು ಸೌಂದರ್ಯವುಳ್ಳ ವ್ಯಕ್ತಿ ಯಾರು?” ಎಂದು ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೆ ಐಶ್ವರ್ಯಾ ರೈ ನಾಚಿ ನೀರಾಗಿದ್ದು, ” ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಪುರುಷರ ಪಟ್ಟಿಯನ್ನು ನೋಡುವುದಾದರೆ, ನಿಸ್ಸಂದೇಹವಾಗಿ ಆ ವ್ಯಕ್ತಿಯ ಹೆಸರನ್ನು ತೆಗೆದುಕೊಳ್ಳೋಣ- ಸಲ್ಮಾನ್” ಎಂದು ಐಶ್ವರ್ಯಾ ರೈ ಬಚ್ಚನ್ ಹೇಳುತ್ತಾರೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ.

ವಿಡಿಯೋ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬ ಕಾಮೆಂಟರ್ “ ನನಗೆ ಅನಿಸುತ್ತೆ ಸಲ್ಮಾನ್ ಖಾನ್ ಅನ್ನು ಡೇಟಿಂಗ್ ಮಾಡುತ್ತಿದ್ದ ವೇಳೆ ಹೇಳಿದ್ದು” ಎಂದು ಕಮೆಂಟ್ ಮಾಡಿದ್ದಾರೆ.

1999ರಲ್ಲಿ ತೆರೆಕಂಡ ‘ಹಮ್‌ ದಿಲ್‌ ದೇ ಚುಕೆ ಸನಮ್‌’ ಚಿತ್ರದಲ್ಲಿ ಮೊದಲ ಬಾರಿಗೆ ಸಲ್ಮಾನ್‌ ಖಾನ್‌ ಮತ್ತು ಐಶ್ವರ್ಯಾ ರೈ ಜೊತೆಯಾಗಿ ನಟಿಸಿದರು. ಬಣ್ಣದ ಲೋಕದಲ್ಲಿ ಐಶ್‌ ಆಗತಾನೇ ಪಯಣ ಆರಂಭಿಸಿದ್ದರು. ಅಷ್ಟರಲ್ಲಾಗಲೇ ಸಲ್ಮಾನ್‌ ಚಿತ್ರರಂಗಕ್ಕೆ ಕಾಲಿಟ್ಟ 10 ವರ್ಷ ಕಳೆದಿತ್ತು. ಅವರಿಗೆ ಸ್ಟಾರ್‌ ಪಟ್ಟವೂ ಸಿಕ್ಕಿತ್ತು. ಇಬ್ಬರ ನಡುವೆ ‘ಹಮ್‌ ದಿಲ್‌ ದೇ ಚುಕೆ ಸನಮ್‌’ ಶೂಟಿಂಗ್‌ ಸಮಯದಲ್ಲೇ ಆಪ್ತತೆ ಬೆಳೆಯಿತು. ಪ್ರೀತಿಯೂ ಆಯಿತು. ಆದರೆ ನಂತರ ಅದು ಕಳಚಿಕೊಂಡಿತು. ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಇಬ್ಬರೂ ಯಾಕೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ವಿಚಾರ ಇಬ್ಬರೂ ಇದೂವರೆಗೂ ಬಿಟ್ಟುಕೊಟ್ಟಿಲ್ಲ. ಸಲ್ಮಾನ್ ಖಾನ್ ಆಗಲಿ, ಐಶ್ವರ್ಯಾ ರೈ ಆಗಲಿ ಈ ಬಗ್ಗೆ ಎಲ್ಲೂ ಬಹಿರಂಗವಾಗಿ ಹೇಳಿಕೊಂಡಿಲ್ಲ.

ಇದನ್ನೂ ಓದಿ: Actress Samantha Health : ನಟಿ ಸಮಂತಾ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು!!! ಧ್ವನಿ ಕಳೆದುಕೊಂಡ ನಟಿ

Leave A Reply

Your email address will not be published.