SSLC Annual Exam : ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ದೊರೆಯಲಿದೆ 26 ಗ್ರೇಸ್‌ ಮಾರ್ಕ್‌! Second Puc ವಿದ್ಯಾರ್ಥಿಗಳಿಗೆಷ್ಟು ಗ್ರೇಸ್‌ ಮಾರ್ಕ್‌ ದೊರೆಯಲಿದೆ?

SSLC Annual Exam : 2022-23ನೇ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯು (SSLC Annual Exam 2023 ) ಈಗಾಗಲೇ ಆರಂಭವಾಗಿದ್ದು, ದಿನಾಂಕ 31-03-2023 ರಿಂದ 15-04-2023ರವರೆಗೆ ನಡೆಯುತ್ತಿದೆ.ಈ ಬಾರಿ ಕೂಡ ಎಸ್‌ಎಸ್‌ಎಲ್‌ಸಿ (SSLC)ಮತ್ತು ದ್ವಿತೀಯ ಪಿಯುಸಿ (2nd Puc)ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್(Grace Marks)ದೊರೆಯಲಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶೇಕಡ 10 ರಷ್ಟು ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶೇಕಡ 5 ರಷ್ಟು ಕೃಪಾಂಕ ದೊರೆಯಲಿದೆ.

2022-23ನೇ ಸಾಲಿನ ಎಸ್ ಎಸ್ ಎಲ್ ಸಿ (SSLC ) ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ (SSLC Students)ಈ ಬಾರಿ ಕೂಡ ಕೊರೊನಾ (COVID) ಬ್ಯಾಚ್ ಎಂದು ಪರಿಗಣಿಸಿ 26 ಗ್ರೇಸ್ ಅಂಕ ನೀಡಲಾಗುತ್ತದೆ. 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಒಟ್ಟಾರೆ ಕನಿಷ್ಠ ಅಂಕ ಗಳಿಸುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶೇಕಡ 10 ರಷ್ಟು ಕೃಪಾಂಕ ಸಿಗಲಿರುವ ಕುರಿತು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಲಿ(KARNATAKA SCHOOL EXAMINATION AND ASSESSMENT BOARD)ತೀರ್ಮಾನ ಕೈಗೊಳ್ಳಲಿದೆ.

ಈ ಶೈಕ್ಷಣಿಕ ವರ್ಷದಲ್ಲಿ ಕೊರೊನಾ ಪ್ರಭಾವ ಹೆಚ್ಚು ಇಲ್ಲದಿದ್ದರೂ ಕೂಡ ಕೊರೊನಾ ಪ್ರಭಾವದ ಶೈಕ್ಷಣಿಕ ವರ್ಷವೆಂದು ಪರಿಗಣಿಸಿ ಗ್ರೇಸ್ ಮಾರ್ಕ್ಸ್ ನೀಡಲು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಲಿ ನಿರ್ಣಯ ಕೈಗೊಂಡಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೂ ಕೂಡ ಕೃಪಾಂಕ ದೊರೆಯಲಿದ್ದು, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶೇಕಡ 5 ರಷ್ಟು ಗ್ರೇಸ್ ಮಾರ್ಕ್ಸ್ ಸಿಗಲಿದೆ. ದ್ವಿತೀಯ ಪಿಯು ಪರೀಕ್ಷೆಯಲ್ಲಿ 600 ಅಂಕಗಳಿಗೆ ಕನಿಷ್ಠ 210 ಅಂಕಗಳನ್ನು ಪಡೆದಿರುವ ವಿದ್ಯಾರ್ಥಿ ಎರಡು ವಿಷಯಗಳಲ್ಲಿ ಶೇಕಡ 5 ರಷ್ಟು ಅಂದರೆ ತಲಾ 5 ಅಂಕ ಸೇರಿ ಗರಿಷ್ಠ 10 ಅಂಕಗಳನ್ನು ಪಡೆಯಬಹುದಾಗಿದೆ.

ಕೊರೊನಾ ಹಾವಳಿಯಿಂದ ಮಕ್ಕಳ ಕಲಿಕೆಯ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಈಗಲೂ ಕೂಡ ಮಕ್ಕಳು ಸಂಪೂರ್ಣವಾಗಿ ಚೇತರಿಸಿಕೊಳ್ಳದ ಹಿನ್ನೆಲೆ ಗ್ರೇಸ್ ಮಾರ್ಕ್ಸ್ ನೀಡಲಾಗುತ್ತಿದೆ. ಒಟ್ಟಾರೆ ಕನಿಷ್ಠ ಅಂಕಗಳನ್ನು ಗಳಿಸುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶೇಕಡ 10 ರಷ್ಟು ಕೃಪಾಂಕ ನೀಡಿ ಉರ್ತೀಣಗೊಳಿಸುವ ಕುರಿತು ಮಂಡಲಿ ಯೋಜನೆ ಹಾಕಿದೆ.ಕಳೆದ ಎರಡು ವರ್ಷಗಳಲ್ಲಿ 8,9ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೆ ತೇರ್ಗಡೆ ಹೊಂದಿದ ಕಾರಣ ಈ ವರ್ಷವೂ ಶೇಕಡ 10 ರಷ್ಟು ಗ್ರೇಸ್ ಮಾರ್ಕ್ಸ್ ನೀಡಲು ಬೋರ್ಡ್‌ ನಿರ್ಧಾರ ತೆಗೆದುಕೊಂಡಿದೆ.

ಎಸ್‌ಎಸ್‌ಎಲ್‌ಸಿ 6 ವಿಷಯಗಳ ಪೈಕಿ ವಿದ್ಯಾರ್ಥಿಗಳು 3 ವಿಷಯಗಳಲ್ಲಿ ಉತ್ತೀರ್ಣರಾಗಿದ್ದರೆ ಮತ್ತು ತೇರ್ಗಡೆ ಕಡಿಮೆ ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಮಾತ್ರ ಇದು ಅನ್ವಯವಾಗಲಿದೆ. ಉಳಿದ 3 ವಿಷಯಗಳಿಗೆ ತಲಾ ಶೇಕಡ 10 ರಷ್ಟು ಆದರೆ ಒಟ್ಟು 26 ಅಂಕ ಮೀರದಂತೆ ಗ್ರೇಸ್ ಮಾರ್ಕ್ಸ್ ದೊರೆಯಲಿದೆ. ಪ್ರಥಮ ಭಾಷೆಯಲ್ಲಿ ಗರಿಷ್ಠ 10 ಅಂಕ ಮತ್ತು ಉಳಿದ ವಿಷಯಗಳಲ್ಲಿ ಗರಿಷ್ಠ 8 ಅಂಕವನ್ನು ಕೃಪಾಂಕದ ರೂಪದಲ್ಲಿ ನೀಡಲಾಗುತ್ತದೆ. ಕಳೆದ ವರ್ಷ ಶೇಕಡ 10 ರಷ್ಟು ಗ್ರೇಸ್ ಮಾರ್ಕ್ಸ್ ಗಳನ್ನು ನೀಡಲಾಗಿದ್ದು, ಈ ಕೃಪಾಂಕಗಳ ನೆರವಿನಿಂದ ಸುಮಾರು 40 ಸಾವಿರ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎನ್ನಲಾಗಿದೆ.

 

ಇದನ್ನು ಓದಿ : Women Suicide : ಪುತ್ತೂರು ವಿವಾಹಿತೆ ಬಾವಿಗೆ ಬಿದ್ದು ಆತ್ಮಹತ್ಯೆ! 

Leave A Reply

Your email address will not be published.