Puttur Election : ಪುತ್ತೂರು :ಶಕುಂತಳಾ ಶೆಟ್ಟಿ ಅವರಿಗೆ ಅವಕಾಶ ಸಿಗದಿದ್ದರೆ ಪ್ರಮುಖರಿಂದ ರಾಜೀನಾಮೆ : ಟಿಕೆಟ್ ಘೋಷಣೆಗೂ ಮುನ್ನವೇ ಅಸಮಾಧಾನದ ಹೊಗೆ

Share the Article

Puttur Election :  ಪುತ್ತೂರು : ಶಕುಂತಳಾ ಶೆಟ್ಟಿ ಅವರಿಗೆ ಅವಕಾಶ ಸಿಗದಿದ್ದರೆ ಪ್ರಮುಖರಿಂದ ರಾಜೀನಾಮೆ : ಟಿಕೆಟ್ ಘೋಷಣೆಗೂ ಮುನ್ನವೇ ಅಸಮಾಧಾನದ ಹೊಗೆ

ಪುತ್ತೂರು:ಮೇ 16 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಪುತ್ತೂರು (Puttur Election )ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕೋಡಿಂಬಾಡಿ ಅಶೋಕ್ ಕುಮಾರ್ ರೈಯವರಿಗೆ ಪಕ್ಷದ ಹೈಕಮಾಂಡ್ ಅವಕಾಶ ಕಲ್ಪಿಸಿದ್ದು ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿರುವ ಬಗ್ಗೆ ವ್ಯಾಪಕ ಪ್ರಚಾರವಾಗುತ್ತಿದೆ.

ಪುತ್ತೂರಿನ ಟಿಕೇಟ್ ಆಕಾಂಕ್ಷಿಯಾದ ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಟಿ.ಶೆಟ್ಟಿರವರೂ ಕೂಡ ರೇಸ್‌ನಲ್ಲಿದ್ದು ಒಂದು ವೇಳೆ ಶಕುಂತಳಾ ಟಿ.ಶೆಟ್ಟಿಯವರಿಗೆ ಟಿಕೇಟ್ ಕೈ ತಪ್ಪಿದ್ದಲ್ಲಿ ಪಕ್ಷದಲ್ಲಿ ಇದುವರೆಗೆ ದುಡಿದಂತಹ ಕಾರ್ಯಕರ್ತರಿಗೆ ಬೇಸರ ತರಲಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ವಿವಿಧ ಹುದ್ದೆಗಳಲ್ಲಿ ಜವಾಬ್ದಾರಿಯನ್ನು ಹೊಂದಿರುವ ಕೆಲವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಲು ಮುಂದಾಗಿರುವುದರಿಂದ ಪಕ್ಷದಲ್ಲಿ ಅಸಮಾಧಾನದ ಕಿಡಿ ಭುಗಿಲೆದ್ದಿರುವುದು ಬೆಳಕಿಗೆ ಬಂದಿರುತ್ತದೆ.

ಪಕ್ಷದ ವಿವಿಧ ಹುದ್ದೆಗಳ ಪ್ರಮುಖರಾದ ತಾಲೂಕು ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ಅಧ್ಯಕ್ಷ ಸನತ್ ರೈ ಏಳ್ಳಾಡುಗುತ್ತು, ಪುತ್ತೂರು ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ವಿಶ್ವಜಿತ್ ಅಮ್ಮುಂಜ, ಪುತ್ತೂರು ಕಾರ್ಮಿಕ ಘಟಕದ ಅಧ್ಯಕ್ಷ ಶರೂನ್ ಸಿಕ್ವೆರಾ, ಪುತ್ತೂರು ಎಸ್.ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಪೂರ್ಣೇಶ್ ಭಂಡಾರಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಛೇರಿ ಕಾರ್ಯದರ್ಶಿ ಜೋನ್ ಸಿರಿಲ್ ರೊಡ್ರಿಗಸ್, ಪುತ್ತೂರು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ಅರಸ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಪುತ್ತೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಸೀತಾ ಭಟ್, ಪಾಣಾಜೆ ವಲಯ ಅಧ್ಯಕ್ಷ ಬಾಬು ರೈ ಕೋಟೆ, ಪುತ್ತೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಕೋಶಾಧಿಕಾರಿ ಶುಭಮಾಲಿನಿ ಮಲ್ಲಿ ಪುತ್ತೂರು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ರಶೀದ್ ಅಮ್ಮಿನಡ್ಕ, ಪುತ್ತೂರು ವಿಧಾನಸಭಾ ಕ್ಷೇತ್ರದ ಎನ್‌ಎಸ್‌ಯುಐ ಅಧ್ಯಕ್ಷ ಚಿರಾಗ್ ರೈ ಮೇಗಿನಗುತ್ತು, ಪ್ರಧಾನ ಕಾರ್ಯದರ್ಶಿ ಹಾಗೂ ಜಿಡೆಕಲ್ಲು ಸರ್ಕಾರಿ ಕಾಲೇಜು ಎನ್‌ಎಸ್‌ಯುಐ ಘಟಕದ ಅಧ್ಯಕ್ಷ ಎಡ್ವರ್ಡ್‌ರವರುಗಳು ರಾಜೀನಾಮೆ ಸಲ್ಲಿಸಲು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ.

Leave A Reply