Prashanth Sambargi : ನೇರ ನಡೆ ನುಡಿ ಮೂಲಕ ಜನರ ಮನ ಗೆದ್ದ ಪ್ರಶಾಂತ್ ಸಂಬರ್ಗಿ ಕಿರುತೆರೆಗೆ ಗ್ರ್ಯಾಂಡ್ ಎಂಟ್ರಿ!

Prashanth Sambargi : ಕನ್ನಡ ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಸಿ ಖ್ಯಾತಿ ಪಡೆದ ಪ್ರಶಾಂತ್ ಸಂಬರ್ಗಿ (Prashanth Sambargi) ಅಭಿಮಾನಿಗಳಿಗೆ ಇನ್ನೂ ಮರೆತಿರಲು ಸಾಧ್ಯವಿಲ್ಲ. ಯಾಕೆಂದರೆ ನೇರ ನಡೆ ನುಡಿ ಮೂಲಕವೇ ಸಂಬರ್ಗಿ ಎಲ್ಲರ ಮನಸು ಗೆದ್ದಿದ್ದರು.

 

ನಂತರ ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದಲ್ಲಿ ‘ಸೀನಿಯರ್’ ಆಗಿ ಮರು ಎಂಟ್ರಿ ಪಡೆದರು. ಪ್ರತಿ ಬಾರಿ ವಾದ, ವಿವಾದ, ವಾಕ್ ಸಮರಗಳಲ್ಲೇ ಸುದ್ದಿಯಾಗಿ ಯಾವುದೇ ವಿಷಯವಾದರೂ ಮೊದಲು ಪ್ರತಿಕ್ರಿಯಿಸುತ್ತಿದ್ದರು . ಆದರೆ ಇದೀಗ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆಂದು ಮಾಹಿತಿ ಸುದ್ದಿ ಹೊರ ಬಿದ್ದಿದೆ.

ಹೌದು, ಕೆಂಡಸಂಪಿಗೆ’ ಎಂಬ ಧಾರಾವಾಹಿ ಲೋಕದಲ್ಲಿ ಮಿಂಚಲು ಸಂಬರ್ಗಿ ಸಜ್ಜಾಗಿದ್ದಾರೆ. ಮುಖ್ಯವಾಗಿ ‘ಕೆಂಡಸಂಪಿಗೆ’ ರಾಜಕೀಯ ವಿಚಾರ ಆಧಾರಿತ ಧಾರಾವಾಹಿಯಾಗಿದ್ದು,
ಎಲೆಕ್ಷನ್ ಹತ್ತಿರ ಸಮಯದಲ್ಲಿ ‘ರಾಜಕೀಯ ಚಾಣಕ್ಯ’ನಾಗಿ ಪ್ರಶಾಂತ್ ಸಂಬರಗಿ ಕಾಣಿಸಿಕೊಂಡಿದ್ದಾರೆ.

ಜನಧ್ವನಿ ಪಕ್ಷದ ಸೆಂಟ್ರಲ್ ಮಿನಿಸ್ಟರ್ ಭೈರತಿ ಕುಣಿಗಲ್ ಪಾತ್ರದಲ್ಲಿ ಪ್ರಶಾಂತ್ ಸಂಬರ್ಗಿ ನಟಿಸುತ್ತಿದ್ದು, ಭೈರತಿ ಕುಣಿಗಲ್ ಅಂಶವನ್ನು ಆಧಾರಿಸಿ ಸಂಬರಗಿ ಬಣ್ಣ ಹಚ್ಚಿದ್ದಾರೆ. ಸದ್ಯ ಭೈರತಿ ಕುಣಿಗಲ್ ಪಾತ್ರ ಹೇಗೆಲ್ಲಾ ಮೂಡಿ ಬರಲಿದೆ ಅನ್ನೋದೆ ಅಭಿಮಾನಿಗಳಿಗೆ ಕುತೂಹಲವಾಗಿದೆ.

ಒಟ್ಟಿನಲ್ಲಿ ಸಮಾಜದಲ್ಲಿ ಸಣ್ಣ ಪುಟ್ಟ ಪ್ರತಿಭಟನೆ ಮೂಲಕ ಹೋರಾಟಗಾರರಾದ , ಬಿಗ್ ಬಾಸ್ ಖ್ಯಾತಿಯ ಸೀನಿಯರ್ ಪ್ರಶಾಂತ್ ಸಂಬರ್ಗಿ ಕಿರುತೆರೆಗೆ ಶೀಘ್ರದಲ್ಲಿ ಎಂಟ್ರಿ ಕೊಡಲು ಸಿದ್ದರಾಗಿದ್ದಾರೆ.

Leave A Reply

Your email address will not be published.