Home Interesting Nita Ambani : 50ನೇ ವರ್ಷದ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ನೀತಾ ಅಂಬಾನಿ! ಇದಕ್ಕೆ...

Nita Ambani : 50ನೇ ವರ್ಷದ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ನೀತಾ ಅಂಬಾನಿ! ಇದಕ್ಕೆ ಆದ ಖರ್ಚಿನಲ್ಲಿ ಒಂದು ಜಿಲ್ಲೆಯ ಜನ ನೆಮ್ಮದಿಯ ಜೀವನ ಮಾಡಬಹುದು!

Nita Ambani

Hindu neighbor gifts plot of land

Hindu neighbour gifts land to Muslim journalist

Nita Ambani : ಮುಕೇಶ್ ಅಂಬಾನಿ (Mukesh Ambani)ದೇಶದಾದ್ಯಂತ ಏಷ್ಯಾ ಖಂಡದಲ್ಲಿಯೂ ನಂ.1 ಶ್ರೀಮಂತ ಎಂಬ ಪಟ್ಟವನ್ನು ಪಡೆದುಕೊಂಡಿದ್ದಾರೆ. 6.83 ಲಕ್ಷ ಕೋಟಿ ರೂ. ಆಸ್ತಿಯ ಒಡೆಯರಾಗಿರಾಗಿದ್ದಾರೆ. ಆಯೋಜಿಸುವ ಎಲ್ಲಾ ಕಾರ್ಯಕ್ರಮಗಳು ಭರ್ಜರಿಯಾಗಿರುತ್ತದೆ. ಅಂಬಾನಿ ಕುಟುಂಬದ ಐಷಾರಾಮಿ ಜೀವನ ಶೈಲಿಯ ಜೊತೆಗೆ ತಮ್ಮ ಸಾಮಾಜಿಕ ಕಳಕಳಿಯ ಮೂಲಕ ಕೂಡ ಹೆಸರು ಪಡೆದಿದ್ದಾರೆ. ಅದರಲ್ಲಿಯೂ 2013ರಲ್ಲಿ ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿಯವರ 50ನೇ ಹುಟ್ಟುಹಬ್ಬದ ಸಮಾರಂಭ ಎಲ್ಲರ ಗಮನ ಸೆಳೆದಿತ್ತು.

ಅಂಬಾನಿ ಕುಟುಂಬದಲ್ಲಿ ಎಲ್ಲಾ ಸಮಾರಂಭಗಳು ಹೆಚ್ಚು ಅದ್ಧೂರಿಯಾಗಿ ನಡೆಯುವುದು ವಾಡಿಕೆ. ಇವರ ಮನೆಯಲ್ಲಿ ಸಣ್ಣ ಪುಟ್ಟ ಕಾರ್ಯಕ್ರಮ ಕೂಡ ಕೋಟಿಗಟ್ಟಲೇ ಖರ್ಚು ಮಾಡಿ ವೈಭವೋಪೇತವಾಗಿ ನಡೆಸುವುದು ಸಾಮಾನ್ಯ.ಹತ್ತು ವರ್ಷಗಳ ಹಿಂದೆ ನಡೆದಿರುವ ಈ ಸಂಭ್ರಮಾಚರಣೆಯಲ್ಲಿ ಕೇವಲ ಎರಡು ದಿನಗಳಿಗಾಗಿ ಭರ್ಜರಿ 220 ಕೋಟಿ ರೂಪಾಯಿಗೂ ಅಧಿಕ ಖರ್ಚು ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಂಬಾನಿ ಕುಟುಂಬದ(Ambani Family) ಸಂಭ್ರಮಾಚರಣೆಯ ಭಾಗವಾಗಿ ನೀತಾ ಅಂಬಾನಿಯವರ(Nita Ambani) 50ನೇ ಹುಟ್ಟುಹಬ್ಬದ ಕಾರ್ಯಕ್ರಮ ಕೂಡ ನೋಡುಗರ ಕಣ್ಮನ ಸೆಳೆಯುವ ರೀತಿ ಅದ್ದೂರಿಯಾಗಿತ್ತು ಆಕಾಶದಲ್ಲಿ ಧೀರೂಭಾಯಿ ಅಂಬಾನಿ ಅವರ ಮುಖವನ್ನು ರೂಪಿಸಲು ಬೆಳಕಿನ ಪ್ರದರ್ಶನವನ್ನು ಕೂಡ ಆಯೋಜನೆ ಮಾಡಲಾಗಿತ್ತು. ಅದ್ಧೂರಿ ಬೆಳಕಿನ ಉತ್ಸವ ಎಲ್ಲರನ್ನೂ ಮೂಕ ಪ್ರೇಕ್ಷಕರನ್ನಾಗಿಸಿತ್ತು.

ನವೆಂಬರ್ 1, 2013ರಂದು ಜೋಧ್ಪುರದಲ್ಲಿ ನಡೆದ ಬರ್ತ್ಡೇ ಕಾರ್ಯಕ್ರಮದಲ್ಲಿ ಸುಮಾರು 250 ಅತಿಥಿಗಳು ಹಾಜರಿ ಹಾಕಿದ್ದರು.ರಿಲಯನ್ಸ್ (Relaince)ಸಮೂಹದ ಒಡೆತನದ 32 ಚಾರ್ಟರ್ಡ್ ಫ್ಲೈಟ್ಗಳ ಮೂಲಕ ಅದ್ದೂರಿ ರೆಸಾರ್ಟ್ಗೆ ಜನರು ಬಂದಿಳಿದಿದ್ದರಂತೆ. ಚಾರ್ಟರ್ಡ್ ಫ್ಲೈಟ್ ಹೊರತಾಗಿಯು ನೀತಾ ಅಂಬಾನಿಯವರ 50 ನೇ ಹುಟ್ಟುಹಬ್ಬದ ಪಾರ್ಟಿಯು ನವೆಂಬರ್ 1ರಂದು ಧನ್ತೇರಸ್ ಪೂಜೆಯ ಮೂಲಕ ಪ್ರಾರಂಭ ವಾಗಿತ್ತಂತೆ. ಹುಟ್ಟುಹಬ್ಬದ ದಿನ ಹುಡುಗಿಯ ಹೆಸರನ್ನು ಉಚ್ಚರಿಸುವ ಬೆರಗುಗೊಳಿಸುವ ಸ್ಪಾರ್ಕ್ಲಿ ದೀಪಗಳು ಕೂಡ ನೋಡುಗರ ಕಣ್ಮನ ಸೆಳೆದಿತ್ತು.

ರಾಜಸ್ಥಾನದ( Rajasthan) ಜೋದ್ಪುರದ ಅರಮನೆಯಲ್ಲಿ ಎರಡು ದಿನಗಳ ಕಾಲ ಈ ಜನ್ಮ ದಿನಾಚರಣೆಯ( birthday celebration) ಸಂಭ್ರಮ ಭರ್ಜರಿ ತಯಾರಿಯ ಜೊತೆಗೆ ಅದ್ದೂರಿಯಾಗಿ ನಡೆದಿತ್ತು. ಮುಖೇಶ್ ಅಂಬಾನಿ ಅವರ ಮನೆಯ ಕಾರ್ಯಕ್ರಮ ಎಂದ ಮೇಲೆ ಹೇಗಿರುತ್ತದೆ ಎಂದು ಬಣ್ಣಿಸಬೇಕಾಗಿಲ್ಲ. ಐಪಿಎಲ್ (IPL)ತಂಡದ ಸದಸ್ಯರನ್ನೊಳಗೊಂಡಂತೆ ಭಾರತೀಯ ಚಿತ್ರರಂಗದ ಖ್ಯಾತ ಸೆಲೆಬ್ರಿಟಿಗಳು ಹಾಗೂ ಪ್ರಖ್ಯಾತ ಉದ್ಯಮಿಗಳು ಸಹ ಈ ವೈಭವ ಪೂರಿತ ಕಾರ್ಯಕ್ರಮಕ್ಕೆ ಹಾಜರಾಗಿದ್ದರು ಎನ್ನಲಾಗಿದೆ.240 ಹೆಚ್ಚು ಅತಿಥಿಗಳ ಪಟ್ಟಿಯಲ್ಲಿ ಮಿತ್ತಲ್ಸ್, ಮಹೀಂದ್ರಾ, ಬಿರ್ಲಾ, ಗೋದ್ರೇಜ್, ಶಾರುಖ್ ಖಾನ್, ಅಮೀರ್ ಖಾನ್, ಕರಿಷ್ಮಾ ಕಪೂರ್ ಮತ್ತು ರಾಣಿ ಮುಖರ್ಜಿ ಅವರಂತಹ ಅನೇಕ ಉದ್ಯಮಿಗಳು ಮತ್ತು ಸೆಲೆಬ್ರಿಟಿಗಳು ಭಾಗಿಯಾಗಿದ್ದಾರಂತೆ. ಸಂಪೂರ್ಣ ಮುಂಬೈ ಇಂಡಿಯನ್ಸ್ IPL ತಂಡ ಕೂಡ ಆಗಮಿಸಿತ್ತು. ಎರಡು ದಿನಗಳ ಸಂಭ್ರಮಾಚರಣೆಯಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಎಆರ್ ರೆಹಮಾನ್ ಅವರ ಪ್ರದರ್ಶನಗಳು ಕೂಡ ನೋಡುಗರ ಮೆಚ್ಚುಗೆಗೆ ಪಾತ್ರವಾಗಿತ್ತು.

 

ಇದನ್ನು ಓದಿ : Puttur assembly congress : ಅತೀ ಹೆಚ್ಚು ಮಹಿಳಾ ಮತದಾರರಿರುವ ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಮಹಿಳೆಗೆ ಅವಮಾನವೇ-ಪುತ್ತೂರು ಮಹಿಳಾ ಕಾಂಗ್ರೆಸ್