Lucky Ali Contraversy : ಬ್ರಾಹ್ಮಣ ಅನ್ನೋದು ಅಬ್ರಾಹಂ ಪದದಿಂದ ಬಂದದ್ದು ಎಂದು ವಿವಾದ ಹುಟ್ಟು ಹಾಕಿದ ಗಾಯಕ!

Share the Article

Lucky Ali Controversy : ಸಿನಿಮಾರಂಗದಲ್ಲಿ ನಟ, ಗಾಯಕನಾಗಿ ಗುರುತಿಸಿಕೊಂಡಿರುವ ಲಕ್ಕಿ ಅಲಿ ಇದೀಗ ವಿವಾದ (Lucky Ali Controversy) ಸೃಷ್ಟಿಸಿದ್ದಾರೆ. ಹೌದು, ಲಕ್ಕಿ ಅಲಿ, ‘ಬ್ರಾಹ್ಮಣ್ (Brahman)​ ಹೆಸರು ಅಬ್ರಾಹಂ ಶಬ್ದದಿಂದ ಹುಟ್ಟಿದೆ ಎಂದು ಹೇಳಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ.

ಲಕ್ಕಿ ಅಲಿ, ಬ್ರಾಹ್ಮಣ​ (Brahman) ಎಂಬ ಶಬ್ದ ಬ್ರಹ್ಮನಿಂದ (Brahma) ಹುಟ್ಟಿದೆ. ಬ್ರಹ್ಮ ಶಬ್ದ ಹುಟ್ಟಿದ್ದು ಅಬ್ರಾಮ್​ನಿಂದ​ (Abram). ಅಬ್ರಾಮ್ ಹುಟ್ಟಿದ್ದು ಅಬ್ರಾಹಂ (Abraham)​ ಅಥವಾ ಇಬ್ರಾಹಿಮ್​ನಿಂದ (Ibrahim). ಅಲ್ಲಾಹಿ ಸಲಾಂ, ಎಲ್ಲಾ ರಾಷ್ಟ್ರಗಳ ಪಿತಾಮಹ. ಎಲ್ಲರೂ ತಮ್ಮ ತಮ್ಮೊಳಗೆ ತರ್ಕಿಸದೆ ಸುಮ್ಮನೆ ಜಗಳವಾಡುತ್ತಿರುವುದೇಕೆ?’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಸದ್ಯ ಈ ಹೇಳಿಕೆ ಭಾರೀ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದ್ದು, ಗಾಯಕನ ವಿರುದ್ದ ಭಾರೀ ಆಕ್ರೋಶ ವ್ತಕ್ತವಾಗುತ್ತಿದೆ.

ಲಕ್ಕಿ ಅಲಿ (Lucky Ali) ಪೋಸ್ಟ್ ಸಖತ್ ವೈರಲ್ ಆಗಿದ್ದು, ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿ, ಗಾಯಕ ತಮ್ಮ ಹೇಳಿಕೆಯ ಬಗ್ಗೆ ಕ್ಷಮೆ ಕೇಳಬೇಕು, ಪೋಸ್ಟ್​ ಡಿಲೀಟ್ ಮಾಡಬೇಕು ಎನ್ನುವ ಒತ್ತಾಯ ಜೋರಾಯಿತು. ಈ ಹಿನ್ನೆಲೆಯಲ್ಲಿ ಗಾಯಕ ಕ್ಷಮೆ ಕೇಳಿದ್ದು,

“ನನ್ನ ಪೋಸ್ಟ್‌ ವಿವಾದ ಹುಟ್ಟುಹಾಕಿದೆ. ನನ್ನ ಉದ್ದೇಶ ಯಾರಿಗೂ ಕೋಪವನ್ನು ಉಂಟುಮಾಡುವುದಲ್ಲ. ಎಲ್ಲರನ್ನೂ ಒಂದು ಮಾಡಬೇಕು ಅನ್ನೋದು ನನ್ನ ಉದ್ದೇಶವಾಗಿತ್ತು. ಆದರೆ, ನಾನಂದುಕೊಂಡ ರೀತಿಯಲ್ಲಿ ಜನರು ಅದನ್ನು ಅರ್ಥಮಾಡಿಕೊಂಡಿಲ್ಲ. ನನ್ನ ಹೇಳಿಕೆ ಹಿಂದೂ ಗೆಳೆಯರ ಭಾವನೆಗೆ ಧಕ್ಕೆ ಉಂಟು ಮಾಡಿದೆ. ಅದಕ್ಕಾಗಿ ನಾನು ತೀವ್ರವಾಗಿ ವಿಷಾದಿಸುತ್ತೇನೆ ಮತ್ತು ಕ್ಷಮೆ ಕೇಳುತ್ತೇನೆ. ಮತ್ತು ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ” ಎಂದು ಕ್ಷಮೆಯಾಚಿಸಿ, ಬರೆದಿರುವ ಪೋಸ್ಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಆದರೆ, ಗಾಯಕ ತಮ್ಮ ಹೇಳಿಕೆಯ ಬಗ್ಗೆ ಕ್ಷಮೆ ಕೇಳಿದರೂ ಆಕ್ರೋಶ, ಟೀಕೆಗಳು ನಿಂತಿಲ್ಲ.

Leave A Reply