IRCTC Tour Package : ಮೇ.4 ರಿಂದ ಐಆರ್‌ಸಿಟಿಸಿಯಿಂದ ಅಗ್ಗದ ಬೆಲೆಯ ತೀರ್ಥಯಾತ್ರೆ!

IRCTC-Tour Package : ಹಲವಾರು ದಿನಗಳಿಂದ ತೀರ್ಥಯಾತ್ರೆ ಮಾಡಬೇಕು ಎಂದು ಯೋಚಿಸುತ್ತಿರುವವರಿಗೆ ಇದೊಂದು ಸುವರ್ಣ ಅವಕಾಶ ಆಗಿದೆ. ಕಡಿಮೆ ವೆಚ್ಚದಲ್ಲಿ ಹಲವಾರು ಪುಣ್ಯಕ್ಷೇತ್ರಗಳಿಗೆ ನೀವು ಭೇಟಿ ನೀಡಬಹುದಾಗಿದೆ.

ಇಂಡಿಯನ್ ರೈಲ್ವೇಸ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ IRCTC ವತಿಯಿಂದ ವಿಶೇಷ 12 ದಿನಗಳ ತೀರ್ಥಯಾತ್ರೆಯನ್ನು ಆಯೋಜಿಸಲಾಗಿದ್ದು, ಈ ಬಗ್ಗೆ IRCTC ವ್ಯವಸ್ಥಾಪಕ ನಿರ್ದೇಶಕ ಕೆ.ರವಿಕುಮಾರ್ ಮತ್ತು ಸಹಾಯಕ ಪ್ರಧಾನ ವ್ಯವಸ್ಥಾಪಕ ಎಸ್. ಸುಬ್ರಮಣಿ ಮಾಹಿತಿ ನೀಡಿದ್ದಾರೆ.

ಮೇ 4 ರಂದು ಪ್ರಾರಂಭವಾಗುವ ಈ ಪ್ರವಾಸದಲ್ಲಿ 12 ದಿನಗಳ ತೀರ್ಥಯಾತ್ರೆ ನಡೆಸಲಾಗುವುದು. ಪುಣೆ, ಕೋನಾರ್ಕ್, ಕೋಲ್ಕತ್ತಾ, ಗಯಾ, ವಾರಣಾಸಿ, ಅಯೋಧಿ, ಅಲಹಾಬಾದ್ ಮತ್ತು ಇತರ ಸ್ಥಳಗಳನ್ನು ಈ ಯಾತ್ರೆ ಒಳಗೊಂಡಿದೆ. ಈ ತೀರ್ಥಯಾತ್ರೆಯ ಸಮಯದಲ್ಲಿ, ವಸತಿ, ಸ್ಥಳೀಯ ಪ್ರವಾಸಗಳು, ಆಹಾರ, ವೈದ್ಯಕೀಯ ನೆರವು, ಭದ್ರತೆ ಮತ್ತು ಪ್ರವಾಸಿ ಗೈಡ್ ಗಳನ್ನೂ ಒದಗಿಸುಲಾಗುವುದು ತಿಳಿಸಲಾಗಿದೆ.

ಮುಖ್ಯವಾಗಿ ತೀರ್ಥಯಾತ್ರೆಗಾಗಿ ವಿಶೇಷ ಭಾರತ್ ಗೌರವ್ ಪ್ರವಾಸೋದ್ಯಮ ರೈಲನ್ನು ( IRCTC-Tour Package)ಪರಿಚಯಿಸಲಾಗಿದೆ. ಈ ರೈಲು 4 ಹವಾನಿಯಂತ್ರಿತ ಕೋಚ್‌ಗಳನ್ನು ಹೊಂದಿದ್ದು, 752 ಪ್ರಯಾಣಿಕ ಸಾಮರ್ಥ್ಯವಿರುವ ಸ್ಲೀಪಿಂಗ್ ಬರ್ತ್‌ಗಳೊಂದಿಗೆ 7 ಕೋಚ್‌ಗಳನ್ನು ಒಳಗೊಂಡಿದೆ. ದಕ್ಷಿಣ ವಿಭಾಗದ ರೈಲ್ವೆ ವತಿಯಿಂದ ಯಿಂದ ಈ ವಿಶೇಷ ತೀರ್ಥಯಾತ್ರೆ ಟ್ರಿಪ್‌ ಅನ್ನು ಆಯೋಜಿಸಲಾಗುತ್ತಿದೆ.

ಈ ರೈಲು ಕೊಚುವೇಲಿ ನಿಲ್ದಾಣದಿಂದ (ಕೇರಳ ರಾಜ್ಯ) ಪ್ರಾರಂಭವಾಗುತ್ತದೆ ಮತ್ತು ತೆಂಕಶಿ, ರಾಜಪಾಳ್ಯಂ, ಶಿವಕಾಶಿ, ವಿರುಧುನಗರ, ಮಧುರೈ, ದಿಂಡಿಗಲ್, ತಿರುಚ್ಚಿ, ತಂಜಾವೂರು, ಮೈಲಾಡುತುರೈ, ಚಿದಂಬರಂ, ವಿಲ್ಲುಪುರಂ, ಚೆಂಗಲ್ಪಟ್ಟು, ತಾಂಬರಂ ಮತ್ತು ಚೆನ್ನೈ ಎಗ್ಮೋರ್‌ನಲ್ಲಿ ಪ್ರಯಾಣಿಕರು ರೈಲು ಹತ್ತಬಹುದು.

ಒಬ್ಬ ಪ್ರಯಾಣಿಕನಿಗೆ, ಹವಾನಿಯಂತ್ರಿತ ಕೋಚ್‌ನಲ್ಲಿ ಈ ಪ್ರಯಾಣದ ದರ 35,651ರೂಪಾಯಿ. ಇನ್ನು ಹವಾನಿಯಂತ್ರಿತವಲ್ಲದ ಪ್ರಯಾಣಕ್ಕೆ 20,367 ರೂ. ಪಾವತಿಸಬೇಕಾಗುತ್ತದೆ.

ಈ ಯಾತ್ರೆಯಲ್ಲಿ ಭಾಗವಹಿಸಲು ಇಚ್ಚಿಸುವವರು IRCTC ಯ ಅಧಿಕೃತ ವೆಬ್‌ಸೈಟ್‌ www.irctctourism.com ಗೆ ಭೇಟಿ ನೀಡಬಹುದು. ಅಥವಾ ರೈಲ್ವೇ ಸ್ಟೇಷನ್‌ಗಳಾದ ಚೆನ್ನೈ, ಮಧುರೈ, ತಿರುಚ್ಚಿ ಮತ್ತು ಕೊಯಮತ್ತೂರುಗಳನ್ನು ನೇರವಾಗಿ ಟಿಕೆಟ್ ಕಾಯ್ದಿರಿಸಬಹುದು.

Leave A Reply

Your email address will not be published.