Crime News: ಇದು ಇಂಗ್ಲಿಷ್ ಡಿಕ್ಷನರಿಯಂತೆ ಕಾಣುತ್ತೆ, ಆದರೆ ಡಿಕ್ಷನರಿಯಲ್ಲ! ಇದರಲ್ಲೊಂದು ರಹಸ್ಯವಿದೆ! ಏನದು?

English dictionary: ಬೆಂಗಳೂರು: ಪುಸ್ತಕವನ್ನು ಸರಸ್ವತಿ ಎಂದು ಕರೆಯುತ್ತಾರೆ. ಪುಸ್ತಕವನ್ನು ದೇವರಿಗೆ ಹೋಲಿಸಲಾಗುತ್ತದೆ ಹಾಗೂ ಪೂಜೆಯೂ ಮಾಡಲಾಗುತ್ತದೆ. ಆದರೆ, ಬೆಂಗಳೂರಿನಲ್ಲಿ (Bengaluru) ಇಂಗ್ಲಿಷ್ ಡಿಕ್ಷನರಿಯನ್ನು ಬೇರೆ ರೀತಿಯಲ್ಲೇ ಬಳಸಿಕೊಳ್ಳಲಾಗಿದೆ. ಹೇಗೆ ಅಂದ್ರೆ ನೀವೂ ಶಾಕ್ ಆಗ್ತೀರಾ!! ಅಂತಾ ರಹಸ್ಯ (Crime News) ಈ ಇಂಗ್ಲಿಷ್ ಡಿಕ್ಷನರಿಯಲ್ಲಿ ಅಡಗಿದೆ.

 

ನಗರದ ಬಸವನಗುಡಿಯಲ್ಲಿ ವಿದೇಶಿಗನೊಬ್ಬ ಇಂಗ್ಲಿಷ್ ಡಿಕ್ಷನರಿ (English dictionary) ಹಿಡಿದುಕೊಂಡಿದ್ದ. ಈ ವ್ಯಕ್ತಿ ಇದ್ದ ಪ್ರದೇಶದಲ್ಲೇ ಪೊಲೀಸರು ಇದ್ದು, ಪೊಲೀಸರು ವಿದೇಶಿಗನನ್ನು ನೋಡಿದೊಡನೆ ಈತ ಭಯಭೀತನಾಗಿ ವಿಚಿತ್ರವಾಗಿ ವರ್ತಿಸುತ್ತಿದ್ದ. ಆತನ ವರ್ತನೆ ಮೇಲೆ ಅನುಮಾನ ಬಂದು ಪೊಲೀಸರು ಹತ್ತಿರ ಬರುತ್ತಿದ್ದಂತೆ ಭಯಗೊಂಡು ಡಿಕ್ಷನರಿ ಅಲ್ಲೇ ಬಿಟ್ಟು ಕಾಲ್ಕಿತ್ತಿದ್ದಾನೆ. ಅಷ್ಟಕ್ಕೂ ಆತ‌ ಭಯಗೊಂಡಿದ್ದೇಕೆ? ಆ ಡಿಕ್ಷನರಿಯಲ್ಲಿ ಅಂತದ್ದೇನಿದೆ?

ಪೊಲೀಸರು (police) ಬುಕ್ ತೆಗೆದುಕೊಂಡು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಹೌದು, ಆ ಬುಕ್ ನಲ್ಲಿ ಅಂತಹ ರಹಸ್ಯ ಏನಿತ್ತು ಗೊತ್ತಾ? ವಿದೇಶಿಗ ಸಿನಿಮಾ ಸ್ಟೈಲ್ ನ ಖತರ್ನಾಕ್‌ ಐಡಿಯಾ ಮಾಡಿದ್ದ. ನೋಡಲು ಡಿಕ್ಷನರಿಯಂತಿದ್ದ ಆ ಬುಕ್ ಬರೀ ಬುಕ್ ಅಲ್ಲಾ!!!. ಅದರೊಳಗಿತ್ತು ಮಿನಿ ಲಾಕರ್. ಲಾಕರ್ ನಲ್ಲಿದ್ದ ವಸ್ತು ಓಪನ್ ಮಾಡಲು ಪಾಸ್ ವರ್ಡ್ ಸೆಟ್‌ ಮಾಡಲಾಗಿತ್ತು.

ಅದರೊಳಗೆ ಏನಿರಬಹುದು ಎಂಬ ಆಶ್ಚರ್ಯ ಕುತೂಹಲದಿಂದ ಪೊಲೀಸರು ಇನ್ನಷ್ಟು ಪರಿಶೀಲನೆ ನಡೆಸಿದ್ದಾರೆ. ನುರಿತ ವ್ಯಕ್ತಿಯಿಂದ ಪಾಸ್ ವರ್ಡ್ ನ್ನು ತೆಗೆಸಿ, ಲಾಕರ್‌ ಓಪನ್‌ ಮಾಡಿದರೆ, ಅದರೊಳಗೆ ಲಕ್ಷ ಲಕ್ಷ ಬೆಲೆಬಾಳುವ ಪ್ಯೂರೆಸ್ಟ್ ಡ್ರಗ್ಸ್‌ ಹಾಗೂ ಕೊಕೇನ್ ಮತ್ತು ಎಂಡಿ ಕ್ರಿಸ್ಟಲ್ಸ್ ಪತ್ತೆಯಾಗಿವೆ.

ಪತ್ತೆಯಾದ ಮಾದಕ ವಸ್ತುವಿನ ಮಾರ್ಕೆಟ್ ಬೆಲೆ ಬರೊಬ್ಬರಿ 10 ಲಕ್ಷ ಎಂದು ಹೇಳಲಾಗಿದೆ. ಈ ಖತರ್ನಾಕ್ ಡ್ರಗ್ ಮಾಫಿಯಾ (drug mafia) ಪ್ರಕರಣಕ್ಕೆ ಪೊಲೀಸರೇ ಒಂದು ಬಾರಿ ದಂಗಾಗಿದ್ದು, ಸದ್ಯ ಬಸವನಗುಡಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಪರಾರಿಯಾದ ವಿದೇಶಿಗನ ಸೆರೆಹಿಡಿಯಲು ಬೆಲೆ ಬೀಸಿದ್ದಾರೆ.

Leave A Reply

Your email address will not be published.