BJP Candidate First List: ಬಿಜೆಪಿ ಪಟ್ಟಿಯಲ್ಲಿ 8 ಮಹಿಳೆಯರಿಗೆ ಟಿಕೆಟ್, ಕೆಲವು ಅಚ್ಚರಿಯ ಹೆಸರುಗಳು !
BJP Candidate First List :ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Election ) ಬಿಜೆಪಿಯು ನಿನ್ನೆ ಮಂಗಳವಾರ ರಾತ್ರಿ ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿ (BJP Candidate First List) ಪ್ರಕಟಿಸಿದ್ದು, ಒಟ್ಟು 189 ಜನರನ್ನು ತನ್ನ ಸ್ಪರ್ಧಿಗಳನ್ನಾಗಿ ಘೋಷಿಸಿದೆ. ಈ ಅಭ್ಯರ್ಥಿಗಳ ಪೈಕಿ 8 ಮಹಿಳೆಯರಿಗೆ ಟಿಕೆಟ್ (Karnataka BJP Women Candidates) ಘೋಷಿಸಿದೆ. ಅವರಲ್ಲಿ ಕೆಲ ಅಚ್ಚರಿಯ ಹೆಸರು ಕೂಡಾ ಇದೆ.
ಬಿಜೆಪಿ ಘೋಷಿತ ಅಭ್ಯರ್ಥಿಗಳ ಪಟ್ಟಿಯಲ್ಲಿ ಮೂವರು ಹಾಲಿ ಶಾಸಕಿಯರು ಬಿಜೆಪಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಶಶಿಕಲಾ ಜೊಲ್ಲೆ, ಪೂರ್ಣಿಮಾ ಶ್ರೀನಿವಾಸ್ ಹಾಗೂ ರೂಪಾಲಿ ಸಂತೋಷ್ ನಾಯ್ಕ್ ಹಾಲಿ ಶಾಸಕರು.
ಪುತ್ತೂರಿನ ಆಶಾ ತಿಮ್ಮಪ್ಪ ಗೌಡ, ಸುಳ್ಯದ ಭಾಗೀರಥಿ ಮುರುಳ್ಯ ಮತ್ತು ಸಂಡೂರಿನ ಶಿಲ್ಪಾ ರಾಘವೇಂದ್ರ ಎಂಬ ಮೂವರು ಮಹಿಳೆಯರು ಕೊನೆಯ ಕ್ಷಣದಲ್ಲಿ ಅಚ್ಚರಿಯೆಂಬಂತೆ ಸೀಟು ಪಡೆದುಕೊಂಡಿದ್ದಾರೆ. ದಕ್ಷಿಣ ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಮಹಿಳೆಯರು ಟಿಕೆಟ್ ಪಡೆದುಕೊಂಡಿದ್ದಾರೆ. ಪುತ್ತೂರಿನಲ್ಲಿ ಈಗಾಗಲೇ ಶಕುಂತಳಾ ಶೆಟ್ಟಿ ಮತ್ತು ಮಲ್ಲಿಕಾ ಪ್ರಸಾದ್ ಎಂಬ ಇಬ್ಬರು ಮಹಿಳೆಯರು ಶಾಸಕಿಯರಾಗಿದ್ದಾರೆ. ಆದರೆ ಸುಳ್ಯದಲ್ಲಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಮಹಿಳೆಯೊಬ್ಬರಿಗೆ ಟಿಕೆಟ್ ನೀಡಲಾಗಿದೆ.
ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು 52 ಹೊಸ ಮುಖಗಳಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿ ಯಥಾಪ್ರಕಾರ ಪ್ರಯೋಗಕ್ಕೆ ಇಳಿದಿದೆ. ಇದರೊಂದಿಗೆ 5 ಮಂದಿ ವಕೀಲರು, 9 ಮಂದಿ ವೈದ್ಯರು, ಒಬ್ಬರು ನಿವೃತ್ತ ಐಎಎಸ್, ಒಬ್ಬರು ಐಪಿಎಸ್ ಅಧಿಕಾರಿಗೆ ಟಿಕೆಟ್ ಘೋಷಣೆ ಮಾಡಿದೆ.
ಯಾವ ಮಹಿಳೆಗೆ ಎಲ್ಲಿ ಬಿಜೆಪಿ ಟಿಕೆಟ್?
1. ಪುತ್ತೂರು – ಆಶಾ ತಿಮ್ಮಪ್ಪ ಗೌಡ
2. ಸುಳ್ಯ – ಭಾಗೀರಥಿ ಮುರುಳ್ಯ
3. ಸವದತ್ತಿ – ರತ್ನಾ ವಿಶ್ವನಾಥ್ ಮಾಮನಿ
4. ಕಾರವಾರ – ರೂಪಾಲಿ ನಾಯ್ಕ್
5. ಸಂಡೂರು – ಶಿಲ್ಪಾ ರಾಘವೇಂದ್ರ
5. ನಾಗಮಂಗಲ – ಸುಧಾ ಶಿವರಾಮೇಗೌಡ
6. ನಿಪ್ಪಾಣಿ – ಶಶಿಕಲಾ ಜೊಲ್ಲೆ
7. ಹಿರಿಯೂರು – ಪೂರ್ಣಿಮಾ ಶ್ರೀನಿವಾಸ್