Women Of Mahabharata: ಮಹಾಭಾರತ ಕಾಲದಲ್ಲಿದ್ದ ಈ ಮಹಿಳೆಯರ ಬಗ್ಗೆ ನಿಮಗೆಷ್ಟು ಗೊತ್ತು? ಮಹಾಭಾರತದಲ್ಲಿನ ನಿಗೂಢ ಮಹಿಳೆಯರಿವರು!!
Women Of Mahabharata: ಮಹಾಭಾರತ (Mahabharata) ವೇದ ವ್ಯಾಸರ ಮಹಾನ್ ಗ್ರಂಥವಾಗಿದ್ದು, ಅದು ಋಷಿ ಕೃಷ್ಣ ದ್ವೈಪಾಯನ ವೇದ ವ್ಯಾಸರಿಂದ ರಚಿಸಲ್ಪಟ್ಟಿದೆ. ಆದರೆ ಇದನ್ನು ಭಗವಾನ್ ಗಣಪತಿಯು ಬರೆದಿದ್ದಾರೆ. ಹಿಂದೂಗಳ (Hindu) ಪಾಲಿಗೆ ಮಹಾಭಾರತದ ಒಂದೊಂದು ಕಥೆಗಳು ಒಂದೊಂದು ಆದರ್ಶಗಳು. ಹೀಗಾಗಿಯೇ ಇಂದಿಗೂ ಪ್ರತಿಯೊಬ್ಬರೂ ಮಹಾಭಾರತದಲ್ಲಿ ಬರುವ ಕೃಷ್ಣ (Lord Krishna), ಅರ್ಜುನ (Arjuna), ಧುರ್ಯೋಧನ, ಭೀಷ್ಮ, ಕರ್ಣ (karna), ದ್ರೋಣಾಚಾರ್ಯ, ಧರ್ಮರಾಯ ಸೇರಿದಂತೆ ಹಲವರನ್ನು ಆದರ್ಶ ವ್ಯಕ್ತಿಗಳನ್ನಾಗಿ ಕಾಣುತ್ತಾರೆ. ಮಹಾಭಾರತದಲ್ಲಿನ ಸತ್ಯವತಿ, ದ್ರೌಪದಿ (draupadi), ಕುಂತಿ (kunti) ಮತ್ತು ಗಾಂಧಾರಿ ಮುಂತಾದ ಪ್ರಮುಖ ಮಹಿಳೆಯರ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಆದರೆ ಕೆಲವೊಂದು ಮಹಿಳೆಯರ (Women Of Mahabharata) ಬಗ್ಗೆ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ತಿಳಿದಿರುವುದು. ಆ ಮಹಿಳೆಯರು ಯಾರು? ಅವರ ಬಗ್ಗೆ ಮಾಹಿತಿ ತಿಳಿಯೋಣ.
ಭಾನುಮತಿ : ಭಾನುಮತಿ ಕಾಂಬೋಜ ಸಾಮ್ರಾಜ್ಯದ ರಾಜಕುಮಾರಿ ಮತ್ತು ದುರ್ಯೋಧನನ ಪತ್ನಿಯೂ ಹೌದು. ಭಾನುಮತಿಯು ಯುದ್ಧ ಇತ್ಯಾದಿ ಎಲ್ಲಾ ಕಲೆಗಳಲ್ಲಿ ಉತ್ತಮ ಜ್ಞಾನವನ್ನು ಹೊಂದಿದ್ದಳು. ಕುಸ್ತಿಯಲ್ಲಿ ಪಾರಂಗತಳಾಗಿದ್ದಳು. ಈ ಬಗ್ಗೆ ಕೆಲವು ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಇವರಿಬ್ಬರ ಮಗಳು ಲಕ್ಷ್ಮಣ.
ರಾಕ್ಷಸ ಹಿಡಿಂಬಿ: ಹಿಡಿಂಬಿ ರಾಕ್ಷಸ ಹಿಡಿಂಬನ ಸಹೋದರಿ. ಈಕೆ ಪಾಂಡವರು ವನವಾಸದಲ್ಲಿದ್ದಾಗ, ಭೀಮನಿಗೆ ಮನಸೋತು ಸುಂದರಿ ಸ್ತ್ರಿರೂಪ ತಾಳಿ ಭೀಮನ ಮುಂದೆ ವಿವಾಹದ ಅಪೇಕ್ಷೆಯಿಟ್ಟಳು. ನಂತರ ಇವರಿಬ್ಬರಿಗೆ ವಿವಾಹವಾಯಿತು. ಇವರಿಗೆ ಘಟೋತ್ಕಚನೆಂಬ ಪುತ್ರ ಜನಿಸಿದನು. ರಾಕ್ಷಸ ಜಾತಿಯವಳಾದ ಆಕೆಗೆ ತಂತ್ರ-ಮಂತ್ರ ಇತ್ಯಾದಿ ಚಟುವಟಿಕೆಗಳು ಚೆನ್ನಾಗಿ ತಿಳಿದಿದ್ದವು. ಹಿಮಾಚಲದಲ್ಲಿ ಹಿಡಿಂಬಿಗೆ ಸಮರ್ಪಿತವಾದ ದೇವಾಲಯ ಕೂಡ ಇದೆ. ಅಲ್ಲಿ ಆಕೆಯನ್ನು ಪೂಜಿಸಲಾಗುತ್ತದೆ.
ಮೋರ್ಬಿ : ಮೋರ್ಬಿ ಘಟೋತ್ಕಚನ ಪತ್ನಿ. ಇವಳು ತಂತ್ರ-ಮಂತ್ರದ ಪರಿಣಿತಳು. ಘಟೋತ್ಕಚನು ಮೋರ್ಬಿಯನ್ನು ಯುದ್ಧದಲ್ಲಿ ಸೋಲಿಸಿದ ನಂತರವೇ ಅವಳನ್ನು ಮದುವೆಯಾದನು (marriage). ಇವರಿಬ್ಬರ ಮಗ ಬಾರ್ಬರಿಕ. ಪ್ರಸ್ತುತ ಶ್ಯಾಮ ಎನ್ನುವ ಹೆಸರಿನಲ್ಲಿ ಪೂಜಿಸಲಾಗುತ್ತದೆ.
ಮಣಿಪುರದ ರಾಜಕುಮಾರಿ ಚಿತ್ರಾಂಗದಾ : ಚಿತ್ರಾಂಗದಾ ಮಣಿಪುರದ ರಾಜಕುಮಾರಿ ಮತ್ತು ಅರ್ಜುನನ ಹೆಂಡತಿ.
ಪಾಂಡವರು ವನವಾಸದಲ್ಲಿದ್ದಾಗ, ಅರ್ಜುನ ಚಿತ್ರಾಂಗದಳನ್ನು ವರಿಸುತ್ತಾನೆ. ಇವರಿಬ್ಬರ ಮಗ ಬಬ್ರುವಾಹನ. ಈತ ಬಹಳ ಪರಾಕ್ರಮಶಾಲಿ. ಯುಧಿಷ್ಟಿರ ಯಾಗ ನಡೆಸುತ್ತಿದ್ದ ಸಂದರ್ಭದಲ್ಲಿ ತಂದೆ ಎಂದು ತಿಳಿಯದೇ ಬಬ್ರುವಾಹನ ಅರ್ಜುನನೊಡನೆ ಯುದ್ಧ ಮಾಡಿ ಅರ್ಜುನನ್ನು ಕೊಲ್ಲುತ್ತಾನೆ.
ನಾಗ ಕನ್ಯೆ ಉಲೂಪಿ: ಉಲೂಪಿ ಅರ್ಜುನನನ್ನು ಮದುವೆಯಾಗಿದ್ದ ಸರ್ಪ ಹುಡುಗಿ. ಅರ್ಜುನನು ಮಗ ಬಬ್ರುವಾಹನನಿಂದ ಕೊಲ್ಲಲ್ಪಟ್ಟಾಗ, ಉಲೂಪಿ ದಿವ್ಯ ರತ್ನದಿಂದ ಅರ್ಜುನನಿಗೆ ಮರುಜೀವ ಕೊಟ್ಟಳು.
ಇದನ್ನೂ ಓದಿ: Titanic House : ಈತ ಕಟ್ಟಿಸಿದ್ದು ಟೈಟಾನಿಕ್ ಹಡಗಿನಂತಹ ಮನೆ! ಅಸಲಿ ಕಥೆ ಏನು?