Tata Motors car sales : ಕಾರು ಮಾರಾಟದಲ್ಲಿ ವೇಗವಾಗಿ ಮುನ್ನುಗುತ್ತಿದೆ ಟಾಟಾ ! ನಂ.1 ಪಟ್ಟ ಫಿಕ್ಸ್!
Tata Motors car sales : ದೇಶದ ಬಹುತೇಕ ವಾಹನ ತಯಾರಿಕಾ ಕಂಪನಿಗಳು (company ) ವಿಭಿನ್ನ ವಾಹನಗಳ ಉತ್ಪಾದನೆಯತ್ತ ಮುಖ ಮಾಡಿದ್ದು, ಅದರಲ್ಲೂ ಮಾರುಕಟ್ಟೆಯಲ್ಲಿ ಕಾರು ಮಾರಾಟದ ಪೈಪೋಟಿ ಭರ್ಜರಿಯಾಗಿ ನಡೆಯುತ್ತಿದೆ.
ಈಗಾಗಲೇ ಪ್ರಸಿದ್ಧ ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ನ (Tata Motors) 2022ರ ಮಾರ್ಚ್ ತಿಂಗಳಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು 42,466 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು.
ಇದೀಗ 2023ರ ಮಾರಾಟ ವರದಿಯನ್ನು (Tata Motors car sales ) ಬಹಿರಂಗಪಡಿಸಿದ್ದು, ಈ ಮಾರಾಟ ವರದಿಯ ಪ್ರಕಾರ ಮಾರ್ಚ್ ತಿಂಗಳು ಟಾಟಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ 44,047 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ. ಇದರಲ್ಲಿ 6,509 ಯುನಿಟ್‌ಗಳು ಎಲೆಕ್ಟ್ರಿಕ್ ವಾಹನಗಳಾಗಿವೆ. ಸದ್ಯ ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.4 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.
ಸದ್ಯ 2023ರ ಮಾರ್ಚ್ ತಿಂಗಳಿನಲ್ಲಿ ಹ್ಯುಂಡೈ ಮೋಟಾರ್ಸ್ ತನ್ನ 50,600 ಯುನಿಟ್ ಕಾರುಗಳನ್ನು ಮಾರಾಟ ಮಾಡಿ ಎರಡನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಇನ್ನು ಮಹೀಂದ್ರಾ ಕಂಪನಿಯು ತನ್ನ 35,876 ಯುನಿಟ್ ಕಾರುಗಳನ್ನು ಚಿಲ್ಲರೆ ಮಾಡಲು ನಿರ್ವಹಿಸಿದ ನಂತರ ಟಾಟಾ ಮೋಟಾರ್ಸ್‌ಗೆ ಬಹಳ ಹತ್ತಿರದಲ್ಲಿದೆ. ಟಾಟಾ ಮೋಟಾರ್ಸ್ ಮುಂಬರುವ ತಿಂಗಳುಗಳಲ್ಲಿ ಹ್ಯುಂಡೈ ಅನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ತನ್ನ ಮಾರಾಟವನ್ನು ಹೆಚ್ಚಿಸಲು ಪ್ರಯತ್ನ ಮಾಡುತ್ತಿದೆ.
ಪ್ರಸ್ತುತ ಟಾಟಾ ಮೋಟಾರ್ಸ್ ತನ್ನ ಮಾರಾಟದ ಅಂಕಿ ಅಂಶಗಳನ್ನು ಸುಧಾರಿಸಿದೆಯಾದರೂ, ಭಾರತೀಯ ಕಾರು ತಯಾರಕರು ಹ್ಯುಂಡೈನಿಂದ ಎರಡನೇ ಸ್ಥಾನವನ್ನು ಪಡೆಯುವಲ್ಲಿ ಕೆಲವು ಸಾವಿರ ಯುನಿಟ್ ಗಳಿಗಿಂತ ಎರಡನೇ ಸ್ಥಾನ ಕಳೆದುಕೊಂಡಿದೆ.
ಅದಲ್ಲದೆ ತನ್ನ ಟಾಟಾ ಮೋಟಾರ್ಸ್ ಕಂಪನಿಯ ಪೋರ್ಟ್‌ಫೋಲಿಯೊದಲ್ಲಿ ಟಾಟಾ ಟಿಯಾಗೊ ಹ್ಯಾಚ್‌ಬ್ಯಾಕ್, ಟಿಗೊರ್ ಸೆಡಾನ್, ಪಂಚ್ ಎಸ್ಯುವಿ, ಆಲ್ಟ್ಜ್ ಪ್ರೀಮಿಯಂ ಹ್ಯಾಚ್‌ಲ್ಯಾಕ್, ನೆಕ್ಸನ್ ಎಸ್ಎಯುವಿ, ಹ್ಯಾರಿಯರ್ ಎಸ್ಯುವಿ ಮತ್ತು ಸಫಾರಿ ಎಸ್‌ಯುವಿಗಳನ್ನು ಒಳಗೊಂಡಿದೆ.
ಇನ್ನು ಟಾಟಾ ಮೋಟಾರ್ಸ್ ಲೆಕ್ನಿಕ್ ವಾಹನಗಳ ಪೋರ್ಟ್‌ಫೋಲಿಯೊದಲ್ಲಿ ಟಿಯಾಗೋ ಇವಿ, ಟಿಗೊರ್ ಇವಿ ಮತ್ತು ನೆಕ್ಸಾನ್ ಇವಿಯಂತಹ ಎಲೆಕ್ಟ್ರಿಕ್ ಕಾರುಗಳನ್ನು ಸಹ ಒಳಗೊಂಡಿದೆ.
ಇತ್ತೀಚಿನ RDE ಮತ್ತು BS6 ಹೊರಸೂಸುವಿಕೆ ಮಾನದಂಡಗಳನ್ನು ಅನುಸರಿಸಲು ಟಾಟಾ ಮೋಟಾರ್ಸ್ ತನ್ನ ಎಲ್ಲಾ ಪ್ರಸ್ತುತ ಮಾದರಿಗಳನ್ನು ನವೀಕರಿಸಿದೆ. ಇದರ ಜೊತೆಗೆ ಟಾಟಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಹ್ಯಾರಿಯರ್ ಮತ್ತು ನೆಕ್ಸಾನ್ ಎಸ್ಯುವಿಗಳ ಫೇಸ್‌ಲಿಫೈಡ್ ಆವೃತ್ತಿಯನ್ನು ಬಿಡುಗಡೆಗೊಳಿಸಲು ತಯಾರು ನಡೆಸುತ್ತಿದೆ.
ಇದರ ಜೊತೆ ಮಹೀಂದ್ರಾ ಸಹ 31 ಪ್ರತಿಶತಕ್ಕಿಂತ ಹೆಚ್ಚಿನ ಮಾರಾಟ ಹೆಚ್ಚಳದೊಂದಿಗೆ ಅತ್ಯಂತ
ವೇಗವಾಗಿ ಮುನ್ನುಗುತ್ತಿದೆ. ಟಾಟಾ ಮೋಟಾರ್ಸ್‌ನ ಉತ್ಪನ್ನ ಪೋರ್ಟ್‌ಫೋಲಿಯೊದಲ್ಲಿ ಸಿ-ಸೆಗ್‌ಮೆಂಟ್ ಎಸ್‌ಯುವಿ ಕೊರತೆಯು ಒಟ್ಟಾರೆ ಮಾರಾಟದ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತಿದೆ.
ಟಾಟಾ ಕಾರುಗಳಾದ ನೆಕ್ಸಾನ್, ಆಫ್ರಿಜ್, ಪಂಚ್, ಟಿಯಾಗೊ ಮತ್ತು ಟಿಗೊರ್‌ನ ಬಿಎಸ್ ಕಾರುಗಳ ಪೆಟ್ರೋಲ್ ಮತ್ತು ಡೀಸೆಲ್ ರೂಪಾಂತರಗಳಾದ್ಯಂತ ಮೈಲೇಜ್ 0.60 ಕಿ.ಮೀ ನಿಂದ 2.40 ಕಿ.ಮೀ ಹೆಚ್ಚು ಮೈಲೇಜ್ ಪಡೆಯುತ್ತದೆ. ಹೆಚ್ಚಿದ ಮೈಲೇಜ್ ನಿಂದ ಉಳಿತಾಯವನ್ನು ಹೆಚ್ಚಿಸುತ್ತದೆ, ಇನ್ನು ಸಿಎನ್‌ಜಿ ರೂಪಾಂತರಗಳು ಈಗಾಗಲೇ ಹೆಚ್ಚು ಮೈಲೇಜ್ ಅನ್ನು ನೀಡುತ್ತಿದೆ. ಡೀಸೆಲ್ ರೂಪಾಂತರಗಳಲ್ಲಿ ಆಲ್ಟ್ಜ್ ಡೀಸೆಲ್ ಕಾರು 0.60 ಕಿ.ಮೀ ಹೆಚ್ಚು ಮೈಲೇಜ್ ಅನ್ನು ನೀಡುತ್ತದೆ.
ಈಗಾಗಲೇ ಟಾಟಾ ಮೋಟಾರ್ಸ್ ಈ ವರ್ಷದ ಆರಂಭದಲ್ಲಿ ಫೆಬ್ರವರಿಯಲ್ಲಿ ಬೆಲೆ ಏರಿಕೆಯನ್ನು ಘೋಷಿಸಿತ್ತು. ಈ ವರ್ಷದ ಕೊನೆಯಲ್ಲಿ ಮತ್ತೊಂದು ಸುತ್ತಿನ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಮಾಹಿತಿ ಇದೆ . ಸದ್ಯ ಟಾಟಾ ಕಾರುಗಳು ದುಬಾರಿಯಾಗಿದ್ದರೂ, ನೆಕ್ಸಾನ್, ಆಫ್ರಿಜ್, ಪಂಚ್, ಟಿಯಾಗೊ ಮತ್ತು ಟಿಗೊರ್‌ನ ಬಿಎಸ್ 6 ಹಂತ II ಆವೃತ್ತಿಗಳ ಹೆಚ್ಚಿದ ಮೈಲೇಜ್‌ನಿಂದ ಗ್ರಾಹಕರು ಲಾಭ ಪಡೆಯುವುದು ಖಚಿತವಾಗಿದೆ.