ಮಂಗಳೂರು : ಬಸ್ಸಿನಲ್ಲಿ ಕುಳಿತಿದ್ದ‌‌ ಮಹಿಳೆ ಕೆಳಗೆ ಬಿದ್ದು ತೀವ್ರ ಗಾಯ!

Share the Article

Mangalore: ಬಸ್ಸಿನ ಸೀಟಿನಲ್ಲಿ ಕುಳಿತಿದ್ದ‌‌ ಮಹಿಳೆಯೊಬ್ಬರು ಕೆಳಗೆ ಬಿದ್ದು, ತೀವ್ರ ಗಾಯಗೊಂಡಿರುವ ಘಟನೆ ನಗರದ (Mangalore) ಲೇಡಿಹಿಲ್ ಸಾಯಿಬಾಬಾ ಮಂದಿರದ ಬಳಿ ನಡೆದಿದೆ. ಗಾಯಾಳುವನ್ನು ಪಾರ್ವತಮ್ಮ (53) ಎಂದು ಹೇಳಲಾಗಿದೆ.

ಪಾರ್ವತಮ್ಮ ತನ್ನ ಪತಿ ಮತ್ತು ಮೊಮ್ಮಗನೊಂದಿಗೆ ಮಂಗಳೂರಿನ ಆಸ್ಪತ್ರೆಗೆ ತೆರಳಿ ವಾಪಸ್ ಉಡುಪಿಗೆ ಬಸ್ಸಿನಲ್ಲಿ ಹೋಗುತ್ತಿದ್ದರು.
ಬಸ್ ಲೇಡಿಹಿಲ್ ಸಾಯಿಬಾಬಾ ಮಂದಿರದ ಬಳಿ ತಲುಪಿದಾಗ ಬಸ್ ಚಾಲಕ ಹಂಪ್ಸ್ ಗಮನಿಸದೇ ಏಕಾಏಕಿ ಬ್ರೇಕ್ ಹಾಕಿದ್ದು, ಇದರಿಂದ ಬಸ್‌ನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಪಾರ್ವತಮ್ಮ ಅವರು ಬಸ್ಸಿನೊಳಗೆ ಬಿದ್ದಿದ್ದು, ಘಟನೆ ಪರಿಣಾಮ ಮಹಿಳೆ ಗಂಭೀರ ಗಾಯಗೊಂಡಿದ್ದು, ಪಾರ್ವತಮ್ಮನಿಗೆ ಸೊಂಟ ಮತ್ತು ಬೆನ್ನು ಮೂಳೆ ಮುರಿತದ ಗಾಯವಾಗಿದೆ.

ಸಹಪ್ರಯಾಣಿಕರು ತಕ್ಷಣವೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದರು. ಸದ್ಯ ಘಟನೆಯ ಬಗ್ಗೆ ಮಂಗಳೂರು ಪಶ್ಚಿಮ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Money Seized at Punjalkatte : ಎಟಿಎಂ ವಾಹನದಲ್ಲಿ ದಾಖಲೆಯಿಲ್ಲದ 10 ಲಕ್ಷ ರೂ. ವಶ!

Leave A Reply