Labour Card Holders good news: ಲೇಬರ್ ಕಾರ್ಡ್ ಹೊಂದಿರುವವರಿಗೆ ವಾರ್ಷಿಕವಾಗಿ ದೊರಕುತ್ತೆ ರೂ. 6000
Labour Card Holders good news : ರಾಜ್ಯದ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದೇ ರೀತಿ ಬಡವರ್ಗಗಳ ಏಳಿಗೆಗೆ ಕೂಡ ಶ್ರಮಿಸುತ್ತಿದೆ. ಸರ್ಕಾರ ಬಡವರ್ಗದ ಜನರಿಗೆ ಸಹಾಯ ಮಾಡಲು ಅನೇಕ ಯೋಜನೆಗಳನ್ನು ಜಾರಿ ತಂದಿದೆ. ಕಾರ್ಮಿಕ ಕಲ್ಯಾಣ ಇಲಾಖೆ(Department of Labor) ಹೊಸ ಯೋಜನೆಯನ್ನು ಬಿಡುಗಡೆ ಮಾಡಿದ್ದು,ಇದೀಗ, ಕಾರ್ಮಿಕ ಕಾರ್ಡ್ (Labour Card)ಇದ್ದವರಿಗೆ ಸರ್ಕಾರದಿಂದ ಶುಭ ಸುದ್ದಿಯೊಂದು( Labour Card Holders good news)ಹೊರಬಿದ್ದಿದೆ.
ಕಾರ್ಮಿಕ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ತಾಯಿ ಮಗು ಸಹಾಯ ಹಸ್ತ ಯೋಜನೆಯಡಿ ಪ್ರಯೋಜನ ಪಡೆದುಕೊಳ್ಳಬಹುದು. ಇದು ಮಗುವಿನ ಆರೈಕೆ ಮತ್ತು ಆರಂಭಿಕ ಶಿಕ್ಷಣಕ್ಕಾಗಿ ಈ ಸಹಾಯ ಧನವನ್ನು ಒದಗಿಸಲಿದ್ದು, ಹೀಗಾಗಿ, ವಾರ್ಷಿಕವಾಗಿ 6000 ರೂ.ಗಳನ್ನು ನೀಡಲಾಗುತ್ತದೆ.ಕರ್ನಾಟಕ ಸರ್ಕಾರವು ಕರ್ನಾಟಕ ಕಾರ್ಮಿಕ ಕಾರ್ಡ್‌ಗಳ (Labour Card) ನೋಂದಣಿಗಾಗಿ ಆನ್‌ಲೈನ್ ಇ-ಪೋರ್ಟಲ್ ಅನ್ನು ಪರಿಚಯಿಸಿದ್ದು, ಎಲ್ಲಾ ಕಾರ್ಮಿಕರು ಮತ್ತು ನಿರ್ಮಾಣ ಕಾರ್ಮಿಕರು ಅಧಿಕೃತ ಆನ್‌ಲೈನ್ ಪೋರ್ಟಲ್ ಮೂಲಕ ಕಾರ್ಮಿಕ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ಈ ಪೋರ್ಟಲ್ ಅನ್ನು ನಿರ್ದಿಷ್ಟವಾಗಿ ಕಾರ್ಮಿಕ ಕಾನೂನುಗಳು ಮತ್ತು ಕಾರ್ಮಿಕರ ಆರೋಗ್ಯ, ಸುರಕ್ಷತೆ ಮತ್ತು ಕಲ್ಯಾಣಕ್ಕಾಗಿ ವಿನ್ಯಾಸ ಮಾಡಿದೆ.
ಕೇಂದ್ರ ಸರ್ಕಾರ ಕಾರ್ಮಿಕ ಕಲ್ಯಾಣ ಇಲಾಖೆ ಮಂಡಳಿ 2023ಯ ಮೂಲಕ ತಾಯಿ ಮಗು ಸಹಾಯ ಹಸ್ತ ಯೋಜನೆ 2023 ಯನ್ನ ಜಾರಿಗೆ ತಂದಿದ್ದು, ಕಾರ್ಮಿಕ ಮಹಿಳೆಯರಿಗೆ ನೆರವಾಗುವ ನಿಟ್ಟಿನಲ್ಲಿ ಮಗುವಿನ ಜನನ ಸಂದರ್ಭದಲ್ಲಿ 6000 ರೂ. ಧನ ಸಹಾಯ ನೀಡಲಿದೆ.
ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸಲು ಆನ್ ಲೈನ್ ಅಧಿಕೃತ ವೆಬ್ ಸೈಟ್: https://labour.karnataka.gov.in/english ಭೇಟಿ ನೀಡಬೇಕು.
ಕಾರ್ಮಿಕ ಕಾರ್ಡ್ ಯೋಜನೆಯ ಅರ್ಹತೆಗೆ ಮಾನದಂಡ ಹೀಗಿದೆ:
# ನೊಂದಾಯಿತ ಮಹಿಳಾ ಕಾರ್ಮಿಕರ ಮಗುವಿನ ಹೆರಿಗೆ ಸಮಯದಿಂದ 3 ವರ್ಷಗಳ ಅವಧಿಯವರೆಗೆ ಮಗುವಿನ ಪೂರ್ವ ಪ್ರಾಥಮಿಕ ಶಿಕ್ಷಣ ಮತ್ತು ಪೌಷ್ಟಿಕಾಂಶಗಳ ಪೂರೈಕೆಗಾಗಿ ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ.
# ಮಹಿಳಾ ಕಾಮಿಕರು 2 ಬಾರಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಅರ್ಜಿಯನ್ನೂ ಜನನ ಮರಣ ನೊಂದಣಿ ಅಧಿಕಾರಿಯಿಂದ ಪಡೆದ ಜನನ ಪ್ರಮಾಣ ಪತ್ರವನ್ನ ಹೊಂದಿರಬೇಕು.
# ಈ ಸೌಲಭ್ಯವನ್ನು ಪಡೆಯಲು ಅರ್ಹರಾದ ಮಹಿಳೆಯು ಮಂಡಳಿಯ ತಂತ್ರಾಂಶದಿಂದ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಅಗತ್ಯವಿರುವ ದಾಖಲಾತಿಗಳು
ಉದ್ಯೋಗ ದೃಢೀಕರಣ ಪತ್ರ, ಗುರುತಿನ ಚೀಟಿ, ಮಕ್ಕಳ ಪೋಟೊ, ಬ್ಯಾಂಕ್ ಪಾಸ್ ಬುಕ್, ಆಸ್ಪತ್ರೆಯಿಂದ ಡಿಸ್ಟಾರ್ಜ್ ಆದ ದಾಖಲೆಗಳು, ಮಗುವಿನ ಜನನ ಪ್ರಮಾಣ ಪತ್ರ ದಾಖಲೆ ಗಳು ಬೇಕಾಗುತ್ತವೆ. ಮಗುವಿನ ಜನನದ 6 ತಿಂಗಳ ಒಳಗೆ ಅರ್ಜಿ ಸಲ್ಲಿಸಬೇಕಾಗಿದ್ದು, 3 ವರ್ಷದ ವರೆಗೆ ಪ್ರತೀ ವರ್ಷವೂ ಅರ್ಜಿ ಸಲ್ಲಿಸಬೇಕು.ಮಗುವಿನ ಜೀವಿತಕ್ಕೆ ಸಂಬಂಧ ಪಟ್ಟ ಪ್ರತಿ ದಾಖಲೆಗಳನ್ನು ಸಲ್ಲಿಸಬೇಕು.
ಕಾರ್ಮಿಕ ಕಾರ್ಡ್ ಯೋಜನೆ 2023 ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ:
ಮೊದಲಿಗೆ ಅರ್ಜಿದಾರರು ಅಧಿಕೃತ ವೆಬ್ ಸೈಟ್ ಗೆ https://sevasindhu.karnataka.gov.in/sevasindhu/english ಭೇಟಿ ನೀಡಿ ಲಾಗಿನ್ ಮಾಡಿಕೊಳ್ಳಬೇಕು. ಆ ಬಳಿಕ, ಅಪ್ಲಿಕೇಶನ್ ಪ್ರಕ್ರಿಯೆ ಇರಲಿದ್ದು, ನಿಮ್ಮ ಎಲ್ಲಾ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕು.ಅರ್ಜಿದಾರರು ಅರ್ಜಿ ಸಲ್ಲಿಸಿದ ಬಳಿಕ ನೋಂದಣಿ ಅಧಿಕಾರಿಗಳಾದ ಹಿರಿಯ ಕಾರ್ಮಿಕ ನಿರೀಕ್ಷಕರಿಂದ ಪರಿಶೀಲನೆ ನಡೆಯಲಿದೆ. ಆ ಬಳಿಕ ಕಾರ್ಮಿಕ ಅಧಿಕಾರಿ ಅವರಿಂದ ಪರಿಶೀಲನೆ ಮತ್ತು ಅನುಮೋದನೆ ಮಾಡಲಾಗುತ್ತದೆ.
ಈ ಯೋಜನೆಯ ಮೂಲಕ ಅರ್ಹ ಕಾರ್ಮಿಕ ಮಹಿಳೆಯರಿಗೆ ಒಟ್ಟು ಮೊತ್ತ ರೂ 6000 ಹಣ ನೀಡಲಾಗುತ್ತದೆ. ಪ್ರತೀ ತಿಂಗಳು 500 ರೂ.ಗಳಂತೆ ಮಂಜೂರಾತಿ ಅಧಿಕಾರಿಯು ನೊಂದಾಯಿತ ಫಲಾನುಭವಿಗಳ ಖಾತೆಗೆ ಮಂಜೂರಾತಿ ಮಾಡುತ್ತಾರೆ,
ಇದನ್ನು ಓದಿ : Election 2023 : ಹಾಸನದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡಿದ್ರೆ ಸೋಲೋದು ಖಚಿತ- ಹೆಚ್ ಡಿ ಕುಮಾರಸ್ವಾಮಿ
Your point of view caught my eye and was very interesting. Thanks. I have a question for you.