Shruti Haasan: ಹೀರೋಗಳಿಗೆ ಜಾಕೆಟ್‌, ನಮಗೆ ಬ್ಲೌಸ್ ಮಾತ್ರ ! ಶ್ರುತಿ ಹಾಸನ್ ವ್ಯಥೆಯ ಮಾತು

Shruti Haasan : ಭಾರತೀಯ ನಟಿಯರಲ್ಲಿ ಅಭಿಮಾನಿಗಳಿಂದ ಅತಿ ಹೆಚ್ಚು ಸಂಭಾವನೆ ಪಡೆದಂತಹ ಶ್ರುತಿ ಹಾಸನ್ (Shruti Hassan) ಹಿನ್ನೆಲೆ ಗಾಯಕಿಯು(singer) ಕೂಡ ಹೌದು. ಹಾಗೆಯೇ ತೆಲುಗು , ಹಿಂದಿ(Hindi) ಮತ್ತು ತಮಿಳು ಚಲನಚಿತ್ರಗಳ ಮೂಲಕ ನಟಿಸಿ ತನ್ನನ್ನು ತಾನು ಗುರುತಿಸಿಕೊಂಡಂತಹ ನಟಿ ಎಂದರು ತಪ್ಪಾಗಲಾರದು.
ನಟಿ ಶ್ರುತಿ ಹಾಸನ್ ಅವರು ತಂದೆಯಂತೆಯೇ ನೇರನುಡಿಯ ಸ್ವಭಾವದವರು. ಏನೇ ಇದ್ದರೂ ಎದುರು ಮಾತಿನ ಮೂಲಕ ತನ್ನ ಉತ್ತರವನ್ನು ಹೇಳಿಬಿಡುವಂತಹ ನಟಿ.

 

ಕಮಲ್ ಹಾಸನ್(Kamal Hassan) ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ ಎಲ್ಲರಿಗೂ ಪರಿಚಯ ಇರುವಂತಹ ಮೇರು ನಟ. ಸೀರಿಯಲ್ಲಿಯೇ(serial) ದಿಟ್ಟತನದಿಂದ ಮಾತನಾಡುತ್ತಾ ನಟನೆಯ ಲೋಕದಲ್ಲಿ ತನ್ನನ್ನು ಗುರುತಿಸಿಕೊಂಡಂತಹ ವ್ಯಕ್ತಿ.ಇದೀಗ ಕಮಲ್ ಹಾಸನ್ ಮಗಳು ಶೃತಿ ಹಾಸನ್(Shruti Haasan) ಇತ್ತೀಚೆಗೆ ಕೊಟ್ಟ ಹೇಳಿಕೆ ಸಿಕ್ಕಾಪಟ್ಟೆ ವೈರಲ್(viral) ಆಗಿದ್ದು ಬಹಳಷ್ಟು ಜನರು ಇದು ಸರಿ, ಚಿಂತಿಸಬೇಕಾದ ವಿಚಾರ ಎಂದು ಕಮೆಂಟ್ ಮಾಡಿದ್ದಾರೆ. ಅಷ್ಟಕ್ಕೂ ಶೃತಿ ಹಾಸನ ಅವರು ಹೇಳಿಕೆ ಕೊಟ್ಟಂತಹ ಆ ವಿಷಯ ಆದರೂ ಯಾವುದು? ಅದೇನಪ್ಪಾ ಅಂದ್ರೆ

ಸಿನಿತೆರಿಯಲ್ಲಿ ನಟರು ನಟನೆಯನ್ನು ಮಾಡುವಾಗ ಜಾಕೆಟ್ ಹಾಕಬಹುದು. ಆದರೆ ಹೀರೋಯಿನ್ಸ್(heroines) ದುಪಟ್ಟಾ ಕೂಡಾ ಧರಿಸುವಂತಿಲ್ಲ ಎಂದು ಹೇಳಿದ್ದಾರೆ. ಈ ನೀತಿ ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಶ್ರುತಿ ಹಾಸನ್ ಅವರು ಬಿಚ್ಚಿಟ್ಟಿದ್ದಾರೆ. ಬಹುಭಾಷಾ ನಟಿ ಶ್ರುತಿ ಹಾಸನ್ ಅವರು ಮಂಜಿನಲ್ಲಿ ಡ್ಯಾನ್ಸ್ (dance)ಮಾಡುವ ಸವಾಲುಗಳ ಬಗ್ಗೆ ಮುಕ್ತವಾಗಿ ತನ್ನ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ನಟಿಯ ಹೇಳಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (viral)ಆಗಿದೆ.

ನಟಿ ಸೀರೆ(saree) ಮತ್ತು ಬ್ಲೌಸ್(blouse) ಧರಿಸಿರುವಾಗ ಅವರನ್ನು ಮಂಜಿನಲ್ಲಿ ಕುಣಿಯುವಂತೆ ಮಾಡಬೇಡಿ ಎಂದು ನಟಿ ಚಿತ್ರ ನಿರ್ದೇಶಕರಲ್ಲಿ ಕೇಳಿಕೊಂಡಿದ್ದಾರೆ. ಮಂಜಿನಲ್ಲಿ ಡ್ಯಾನ್ಸ್ ಮಾಡುವುದು ಸುಲಭದ ಕೆಲಸವಲ್ಲ ತುಂಬಾ ಕಷ್ಟಕರವಾದ ಕೆಲಸ. ಇದನ್ನು ನಿಲ್ಲಿಸಿದರೆ ಒಳ್ಳೆಯದು ಎಂದು ನಟಿ ಶೃತಿ ಹಾಸನ್(Shruti Hassan) ತನ್ನ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಇತ್ತೀಚೆಗೆ ಅಭಿಮಾನಿಗಳೊಂದಿಗೆ ಮಾತನಾಡಿದ ನಟಿ ಮಂಜಿನಲ್ಲಿ ಡ್ಯಾನ್ಸ್ ಮಾಡುವುದು ಏಕೆ ಕಷ್ಟ ಎನ್ನುವ ವಿಷಯದ ಬಗ್ಗೆ ಅಭಿಮಾನಿಗಳ ಮುಂದೆ ಬಿಚ್ಚಿಟ್ಟಿದ್ದಾರೆ. ಮಂಜಿನ ಮೇಲೆ ನಟಿಮಣಿಯರು ನರ್ತನವನ್ನು ಮಾಡುವಾಗ ಏಕೆ ಕಷ್ಟವಾಗುತ್ತದೆ ಎನ್ನುವ ಇಂಟರೆಸ್ಟಿಂಗ್ ವಿಷಯದ ಬಗ್ಗೆ ಮಾಹಿತಿ ನೀಡಿದ್ದಾರೆ ಅದೇನೆಂದು ಇಲ್ಲಿದೆ ನೋಡಿ.

ನನಗೆ ಮಂಜಿನಲ್ಲಿ ಡ್ಯಾನ್ಸ್(dance) ಮಾಡುವುದು ಇಷ್ಟವಿಲ್ಲ. ಇದು ತುಂಬಾ ಕಷ್ಟದ ಕೆಲಸ. ಹೀರೋ ಜಾಕೆಟ್ ಧರಿಸಬಹುದು. ಆದರೆ ನಮಗೆ ಜಾಕೆಟ್, ಕೋಟ್, ಶಾಲ್ ಏನೂ ಇರುವುದಿಲ್ಲ. ಮಂಜಿನಲ್ಲಿ ಖಾಲಿ ಬ್ಲೌಸ್ ಹಾಗೂ ಸೀರೆ ಉಡಬೇಕು. ನಾನು ಇಲ್ಲೊಂದು ಮನವಿ ಮಾಡಲು ಬಯಸುತ್ತೇನೆ. ಇದನ್ನು ನಿಲ್ಲಿಸಿ. ನಾನು ಇತ್ತೀಚೆಗೆ ಒಂದು ಸಾಂಗ್ (song)ಮಾಡಿದೆ ಎಂದು ನಟಿ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಹಿಮಾವೃತ ಪರ್ವತಗಳ ಮುಂದೆ ಶೂಟ್(shooting) ಮಾಡಲಾದ ಶ್ರೀದೇವಿ ಚಿರಂಜೀವಿ ಹಾಡಿನಲ್ಲಿ ಶ್ರುತಿ ಹಾಸನ್ ತೆಳ್ಳಗಿನ ಸೀರೆ ಉಟ್ಟು ಸೊಂಟವನ್ನು ಬಳುಕಿಸುತ್ತ ಡ್ಯಾನ್ಸ್ ಮಾಡಿದ್ದರು. ನಟಿ ಇದರಲ್ಲಿ ವೈಟ್ & ಬ್ಲೂ ಸೀರೆ ಉಟ್ಟಿದ್ದು ಬ್ಲೌಸ್ ಸ್ಲೀವ್ಲೆಸ್ ಆಗಿತ್ತು. ನಟಿ ಇತ್ತೀಚೆಗೆ ಇನ್​ಸ್ಟಾಗ್ರಾಮ್​ನಲ್ಲಿ (Instagram)ತನ್ನ ಅಭಿಮಾನಿಗಳ ಜೊತೆ ಸಲಾರ್ ಸಿನಿಮಾದ ತಮ್ಮ ಭಾಗದ ಶೂಟಿಂಗ್ ಮುಗಿಸಿರುವುದಾಗಿ ಹೇಳಿದ್ದಾರೆ. ಈ ಸಿನಿಮಾವನ್ನು ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಅವರು ನಿರ್ದೇಶಿಸುತ್ತಿದ್ದು ಇದರಲ್ಲಿ ಪ್ರಭಾಸ್(Prabhas) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಎಂಬ ಮಾಹಿತಿಯನ್ನು ಸಹ ತಿಳಿಸಿದ್ದಾರೆ.

4 Comments
  1. brezplacen racun na binance says

    Your point of view caught my eye and was very interesting. Thanks. I have a question for you.

  2. Your point of view caught my eye and was very interesting. Thanks. I have a question for you.

  3. Thanks for sharing. I read many of your blog posts, cool, your blog is very good.

  4. binance referral code says

    Thank you for your sharing. I am worried that I lack creative ideas. It is your article that makes me full of hope. Thank you. But, I have a question, can you help me? https://www.binance.com/en-IN/register?ref=UM6SMJM3

Leave A Reply

Your email address will not be published.