Highest Paid actors: ಅತಿ ಹೆಚ್ಚು ಸಂಭಾವನೆ ಪಡೆಯುವ ಕನ್ನಡ ಹೀರೋಗಳು ಇವರೇ!

Highest Paid actors : ಕಳೆದ ಕೆಲವು ವರ್ಷಗಳಿಂದ ಕನ್ನಡ ಚಿತ್ರರಂಗ ಹೊಸ ಅಲೆಯನ್ನು ಸೃಷ್ಟಿ ಮಾಡಿದ್ದು ಇಡೀ ಭಾರತೀಯ ಚಿತ್ರರಂಗವೇ ಮೆಚ್ಚುಗೆಯಿಂದ ನೋಡುವಂತೆ ಮಾಡಿದೆ. ಚಲನ ಚಿತ್ರ ನಿರ್ಮಾಪಕರು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಪ್ರೇಕ್ಷಕರು ಕೂಡ ನವೀನ ಪರಿಕಲ್ಪನೆಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಕೆಜಿಎಫ್ 2, ಕಾಂತಾರ, ವಿಕ್ರಾಂತ್‌ ರೋಣ ಮತ್ತು 777 ಚಾರ್ಲಿಯಂತಹ ಚಲನಚಿತ್ರಗಳ ಪ್ಯಾನ್-ಇಂಡಿಯಾ ಯಶಸ್ಸಿನ ಬಳಿಕ, ಕನ್ನಡ ಚಲನಚಿತ್ರೋದ್ಯಮವು (Sandalwood)ಪ್ರಪಂಚದಾದ್ಯಂತದ ಚಲನಚಿತ್ರ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆಯನ್ನು ಪಡೆದುಕೊಂಡಿದೆ ಎಂಬುದು ಸುಳ್ಳಲ್ಲ. ಸ್ಯಾಂಡಲ್‌ವುಡ್‌ನ ಹೈ-ಪ್ರೊಫೈಲ್ ಸೆಲೆಬ್ರಿಟಿಗಳು (Sandalwood Celebrities) ಪ್ರತಿ ಚಿತ್ರಕ್ಕೂ ಉತ್ತಮ ಸಂಭಾವನೆ ಪಡೆಯುತ್ತಿದ್ದು, ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಅತಿ ಹೆಚ್ಚು ಸಂಭಾವನೆ ಪಡೆಯುವ (Highest Paid actors)ಟಾಪ್ ಹೀರೋಗಳು ಯಾರು ಎಂಬುದು ನಿಮಗೆ ತಿಳಿದಿದೆಯೇ? ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.

ಸ್ಯಾಂಡಲ್ ವುಡ್ ದುನಿಯಾದಲ್ಲಿ ಯಶ್, ಸುದೀಪ್, ದರ್ಶನ್, ರಿಷಬ್ ಶೆಟ್ಟಿ, ಧ್ರುವ ಸರ್ಜಾ, ರಕ್ಷಿತ್ ಶೆಟ್ಟಿ, ಶಿವರಾಜ್ ಕುಮಾರ್, ತಮ್ಮದೇ ಶೈಲಿಯ ನಟನೆ, ಡಾನ್ಸ್ ಮೂಲಕ ತಮ್ಮದೇ ಆದ ಟ್ರೆಂಡ್ ಹಾಗೂ ಪ್ರಭೆ ಬೀರಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವನೆ (Highest Paid actors) ಪಡೆಯುವ ಟಾಪ್ ಹೀರೋಗಳು ಇವರೇ ನೋಡಿ.

*ಯಶ್(Yash)
KGF ಫ್ರಾಂಚೈಸಿಯೊಂದಿಗೆ ರಾಕಿಂಗ್ ಸ್ಟಾರ್ ಪ್ಯಾನ್ ಇಂಡಿಯಾ ಸ್ಟಾರ್‌ ಆಗಿ ಫೇಮಸ್ ಆಗಿದ್ದು ಮಾತ್ರವಲ್ಲ KGF ಮೂಲಕ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಕನ್ನಡ ಮತ್ತು ಇತರ ಭಾಷೆಗಳಲ್ಲಿ ಯಶ್ ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್ ಹೆಚ್ಚಾದ ಬಳಿಕ ಪ್ರತಿ ಚಿತ್ರಕ್ಕೆ ಸುಮಾರು 50-100 ಕೋಟಿ ಶುಲ್ಕ ವಿಧಿಸುತ್ತಿದ್ದಾರೆ ಎನ್ನಲಾಗಿದೆ. ಇನ್ನುಳಿದ ಕನ್ನಡ ನಟರಿಗೆ ಹೋಲಿಕೆ ಮಾಡಿದರೆ ಯಶ್ ಅತಿ ಹೆಚ್ಚು ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಎಂದು ಹೇಳಲಾಗುತ್ತಿದೆ. ಕೆಜಿಎಫ್‌ 2 ಬಳಿಕ ಯಶ್ ಇನ್ನೂ ಯಾವುದೇ ಚಲನಚಿತ್ರಗಳಿಗೆ ಸಹಿ ಹಾಕಿಲ್ಲ.

*ದರ್ಶನ್ (Darshan Thoogudeepa)
ಡಿ ಬಾಸ್ ಎಂದೇ ಪ್ರಖ್ಯಾತಿ ಪಡೆದಿರುವ ದರ್ಶನ್ ಅಭಿಮಾನಿಗಳ ನೆಚ್ಚಿನ ದಚ್ಚು ಅವರು ಸ್ಯಾಂಡಲ್‌ವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಟಾಪ್‌ 2 ಸ್ಥಾನ ಪಡೆದುಕೊಂಡಿದ್ದಾರೆ. ದರ್ಶನ್‌ ಅವರು ಪ್ರತಿ ಚಿತ್ರಕ್ಕೆ 22 – 26 ಕೋಟಿ ರೂ. ಯಷ್ಟು ಸಂಪಾದನೆ ಮಾಡುತ್ತಾರಂತೆ.

*ಕಿಚ್ಚ ಸುದೀಪ್ (Sudeep)
ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಎಂಬ ಬಿರುದು ಪಡೆದಿರುವ ಕಿಚ್ಚ ಸುದೀಪ್ ಇತ್ತೀಚೆಗಷ್ಟೇ ವಿಕ್ರಾಂತ್ ರೋಣ ಮತ್ತು ಕಬ್ಜಾ ಚಿತ್ರಗಳನ್ನು ಮಾಡಿದ್ದ ಸುದೀಪ್ 2023ರಲ್ಲಿ ಮೂರು ಹೊಸ ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಕನ್ನಡದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಟಾಪ್ 3ನೇ ಸ್ಥಾನವನ್ನು ಪಡೆದಿದ್ದಾರೆ. ಪ್ರತಿ ಸಿನಿಮಾಗಳಿಗೂ ಕೂಡ ಸುಮಾರು 20 – 25 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.

*ಉಪೇಂದ್ರ(Upendra Rao)
ನಟ, ನಿರ್ಮಾಪಕ, ನಿರ್ದೇಶಕ ಹಾಗೂ ತನ್ನದೇ ಆದ ವಿಭಿನ್ನ ಶೈಲಿಯ ನಿರೂಪಣೆ ಮೂಲಕ ಜನರ ಮನಸೆಳೆಯುವ ರಿಯಲ್ ಸ್ಟಾರ್ ಉಪೇಂದ್ರ ಅವರ ನಿರ್ದೇಶನದ ಚಿತ್ರಗಳು ವಿಶೇಷವಾದ ಸೃಜನಾತ್ಮಕ ಶೈಲಿ, ಪ್ರಸ್ತುತ ಪಡಿಸುವ ರೀತಿ ಎಲ್ಲವೂ ವಿಭಿನ್ನ. ಹೀಗಾಗಿ, ಕನ್ನಡ ಪ್ರೇಕ್ಷಕರಲ್ಲಿ ಹೆಚ್ಚಿನ ಖ್ಯಾತಿಯನ್ನು ಪಡೆದಿದ್ದಾರೆ.ಇವರು ಪ್ರತಿ ಚಿತ್ರಕ್ಕೆ 10 ರಿಂದ 15 ಕೋಟಿ ರೂ. ಚಾರ್ಜ್ ಮಾಡುತ್ತಾರೆ ಎನ್ನಲಾಗಿದೆ.

*ರಿಷಬ್ ಶೆಟ್ಟಿ (Rishab Shetty):
ನಟನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ರಿಶಬ್ ಶೆಟ್ಟಿ ಅವರು ರಾತ್ರೋ ರಾತ್ರಿ ಫ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಪಡೆದು ಡಿವೈನ್ ಸ್ಟಾರ್ ಎಂಬ ಬಿರುದು ಪಡೆಯಲು ಕಾರಣವಾಗಿದ್ದು ಕಾಂತಾರ ಸಿನಿಮಾದ ನಟನೆ, ನಿರ್ದೇಶನ ಎಂದರೇ ತಪ್ಪಾಗದು. ಕನ್ನಡ ಮಾತ್ರವಲ್ಲದೆ ಇತರೆ ಭಾಷೆಯಲ್ಲಿಯೂ ಹಿಟ್ ಆಗಿ ದಾಖಲೆ ಬರೆದದ್ದು ಗೊತ್ತೇ ಇದೆ. ಕಾಂತಾರ ಸಿನೆಮಾದ ಬಳಿಕ, ಈಗ ರಿಷಬ್ ಶೆಟ್ಟಿ ಸುಮಾರು 10-15 ಕೋಟಿ ರೂ. ಸಂಭಾವನೆ ಪಡೆಯುತ್ತಾರಂತೆ.

*ರಕ್ಷಿತ್ ಶೆಟ್ಟಿ(Rakshith Shetty):
ರಕ್ಷಿತ್ ಶೆಟ್ಟಿ ಕನ್ನಡ ಚಲನಚಿತ್ರೋದ್ಯಮದ ಯಶಸ್ವಿ ನಟ ಮತ್ತು ನಿರ್ಮಾಪಕರಾಗಿ ಖ್ಯಾತಿ ಪಡೆದಿದ್ದಾರೆ. ಕಿರಿಕ್ ಪಾರ್ಟಿ ಮತ್ತು ಉಳಿದವರು ಕಂಡಂತೆ ಸಿನಿಮಾಗಳ ಮೂಲಕ ಜನರ ಮನ ಸೆಳೆದ ಸಿಂಪಲ್ ಸ್ಟಾರ್ , 777 ಚಾರ್ಲಿ ಸಿನಿಮಾ ನೋಡುಗರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸದ್ಯ, ಸಪ್ತ ಸಾಗರದಾಚೆ ಎಲ್ಲೋ, ರಿಚರ್ಡ್ ಆಂಟನಿ ಸಿನಿಮಾಗಳಲ್ಲಿ ರಕ್ಷಿತ್‌ ಬ್ಯುಸಿಯಾಗಿದ್ದು, ಪ್ರತಿ ಚಿತ್ರಕ್ಕೆ ಅಂದಾಜು 5 ರಿಂದ 10 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.

* ಶಿವರಾಜ್‌ಕುಮಾರ್ (Shiva Rajkumar):
ರಾಜಕುಮಾರ್ ಅವರ ಮಗ ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗದಲ್ಲಿ ಬಾಲನಟನಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡು ಅನೇಕ ಮಂದಿ ಅಭಿಮಾನೀ ಬಳಗವನ್ನು ಹೊಂದಿದ್ದಾರೆ. 120 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿರುವ ಶಿವಣ್ಣ, ಪ್ರತಿ ಚಿತ್ರಕ್ಕೂ 6 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.

*ಶ್ರೀಮುರಳಿ(Sri Murali)

ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬಂದ ಮೊದಲ ಚಿತ್ರ ಉಗ್ರಂ ಸಿನಿಮಾದಿಂದ ಹಿಟ್‌ ಪಡೆದ ಶ್ರೀಮುರಳಿ ತಮ್ಮ ನಟನೆಯ ಮೂಲಕ ಜನ ಮನ ಗೆದ್ದಿದ್ದಾರೆ. ಸದ್ಯ ಬಗೀರಾ ಸಿನಿಮಾದ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರತಿ ಚಿತ್ರಕ್ಕೆ ಶ್ರೀಮುರಳಿ ಸುಮಾರು 4 – 6 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.

*ಗಣೇಶ್ (Ganesh):
ಮುಂಗಾರು ಮಳೆ, ಚೆಲುವಿನ ಚಿತ್ತಾರ, ಗಾಳಿಪಟ, ಮುಗುಳು ನಗೆ ಸೇರಿದಂತೆ ಅನೇಕ ಹಿಟ್‌ ಸಿನಿಮಾದ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್‌ ಜನರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಗಣೇಶ್ ಪ್ರಸ್ತುತ ದಿ ಸ್ಟೋರಿ ಆಫ್ ರಾಯಗಡ, ಬಾನದಾರಿಯಲ್ಲಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಇವರು ಪ್ರತಿ ಚಿತ್ರಕ್ಕೆ ಸುಮಾರು 3 – 6 ಕೋಟಿ ಸಂಭಾವನೆ ಪಡೆಯುತ್ತಾರೆ.

*ಧ್ರುವ ಸರ್ಜಾ(Dhruva Sarja):
ಪೊಗರು ಚಿತ್ರದ ಮೂಲಕ ಖ್ಯಾತಿ ಪಡೆದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಾರ್ಟಿನ್, ಕೆಡಿ: ದಿ ಡೆವಿಲ್ ಎರಡೂ ಪ್ಯಾನ್-ಇಂಡಿಯನ್ ಚಲನಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಧ್ರುವ ಸರ್ಜಾ ಪ್ರತಿ ಸಿನಿಮಾಗೆ ಸುಮಾರು 3 – 5 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.

 

ಇದನ್ನು ಓದಿ : Actress Niharika Konidela : ಮೆಗಾ ಸ್ಟಾರ್​’ ಚಿರಂಜೀವಿ ಸಹೋದರ ಮಗಳ ಸಂಸಾರದಲ್ಲಿ ಬಿರುಕು; ವಿಚ್ಛೇದನ ಪಡೆದುಕೊಳ್ಳುತ್ತಾರಾ ನಟಿ ನಿಹಾರಿಕಾ? 

1 Comment
  1. binance registrácia says

    Thanks for sharing. I read many of your blog posts, cool, your blog is very good.

Leave A Reply

Your email address will not be published.