Guess Who : ಖ್ಯಾತ ನಟಿಯರು ಈ ಸಹೋದರಿಯರು! ಬಾಲ್ಯದ ಫೋಟೋ ಮೂಲಕ ಯಾರೆಂದು ಪತ್ತೆಹಚ್ಚಬಲ್ಲಿರಾ?

Bollywood Siblings : ನಾವು ನಮ್ಮ ಬಾಲ್ಯದ ಫೋಟೋ ನೋಡಿ ಏನೋ ಒಂದು ತರಹ ಖುಷಿ ಪಡುತ್ತೇವೆ. ಜೊತೆಗೆ ನಮಗೆ ತುಂಬ ನೆಚ್ಚಿನವರ ಬಾಲ್ಯದ ಫೋಟೋ ನೋಡಲು ಏನೋ ಒಂದು ಕುತೂಹಲ. ಹಾಗೆಯೇ ಕೆಲವೊಂದು ನೆನಪುಗಳನ್ನು ವಿಶೇಷ ಸಂದರ್ಭಗಳಲ್ಲಿ ನಟ ನಟಿಯರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಖುಷಿ ಪಡುತ್ತಾರೆ . ಅದರಲ್ಲೂ ನಟ ನಟಿಯರು ತಮ್ಮ ಬಾಲ್ಯದ ಫೋಟೋ (Childhood Pics) ಹಂಚಿಕೊಂಡಾಗ ಅಭಿಮಾನಿಗಳು ತುಂಬಾ ಕುತೂಹಲದಿಂದ ನೋಡುತ್ತಾರೆ.

 

ಇದೀಗ ಈ ಚಿತ್ರದಲ್ಲಿ ಇರುವ ಇಬ್ಬರು ಸಹೋದರಿಯರು ಬಾಲಿವುಡ್ (Bollywood Siblings) ಇಂಡಸ್ಟ್ರಿಯೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದ್ದು, ಅವರಲ್ಲಿ ಒಬ್ಬರು ವರ್ಷಗಳ ಹಿಂದೆ ನಟನೆಯನ್ನು ತೊರೆದರೆ, ಇನ್ನೊಬ್ಬರು ಸೂಪರ್‌ಸ್ಟಾರ್‌ ಆಗಿದ್ದಾರೆ. ನೀವು ಅವರನ್ನು ಯಾರೆಂದು ಗುರುತಿಸಬಹುದೇ? ಇಲ್ಲವಾದಲ್ಲಿ ಈ ಕೆಳಗೆ ಅವರ ಬಗ್ಗೆ ವಿವರಿಸಲಾಗಿದೆ.

ನಮಗೆಲ್ಲರಿಗೂ ತಿಳಿದಿರುವ ಹಾಗೇ ಮಲೈಕಾ ಅರೋರಾ ಯಾವಾಗಲೂ ನಟನೆಯಿಂದ ದೂರವಿದ್ದರು, ಆದರೂ ಅವರು ಚಲನಚಿತ್ರಗಳಲ್ಲಿ ಅನೇಕ ನೃತ್ಯ ಪ್ರದರ್ಶನಗಳನ್ನು ಮಾಡುತ್ತಿದ್ದರು, ಇದರಿಂದಾಗಿ ಅವರು ಸಾಕಷ್ಟು ಹೆಸರು ಮಾಡಿದರು. ಆದರೆ ಅಚ್ಚರಿಯ ವಿಷಯವೆಂದರೆ ನಟನೆಯಿಂದ ದೂರವಿದ್ದರೂ ಮಲೈಕಾ ಇನ್ನೂ ಸೂಪರ್ ಸ್ಟಾರ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಹವಾ ಹಾಗೆಯೇ ಇದೆ .

ಆಕೆಯನ್ನು ಇಂಡಸ್ಟ್ರಿಯಲ್ಲಿ ಸ್ಟೈಲಿಶ್ ದಿವಾ ಎಂದು ಕರೆಯುತ್ತಾರೆ. ಅವರು 2002 ರಲ್ಲಿ ಕಿತ್ನೆ ದೂರ್‌ ಕಿತ್ನೆ ಪಾಸ್ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು. ಅದರ ನಂತರ ಅವರು 2015 ರವರೆಗೆ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡರು. ಆ ಬಳಿಕ ಸಿನಿರಂಗದಿಂದ ದೂರವಾದರು.

ಮಲೈಕಾ ಅರೋರಾ, ಅಸಂಖ್ಯಾತ ಬಾಲ್ಯದ ನೆನಪುಗಳನ್ನು ಹೊಂದಿರುವ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ತಮ್ಮ ಕ್ರೈಂ ಪಾರ್ಟನರ್‌ ಜೊತೆ ಕಾಣಿಸಿಕೊಂಡಿದ್ದಾರೆ. ಅವರ ಸಹೋದರಿ ಅಮೃತಾ ಅರೋರಾ ಜೊತೆಗಿನ ಬಾಲ್ಯದ ಫೋಟೋಗಳನ್ನು ಮಲೈಕಾ ಶೇರ್‌ ಮಾಡಿದ್ದಾರೆ.

ಮೊದಲ ಫೋಟೋದಲ್ಲಿ, ಸಹೋದರಿಯರಿಬ್ಬರೂ ಹೊಲಿಗೆ ಯಂತ್ರದ ಕೆಳಗೆ ಕುಳಿತು ಕ್ಯಾಮೆರಾಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಎರಡನೇ ಫೋಟೋದಲ್ಲಿ, ಮಲೈಕಾ ಅಮೃತಾ ಬಿಗ್‌ ಸ್ಮೈಲ್‌ ಮಾಡುತ್ತಿದ್ದಾರೆ.

ಮೂರನೆಯ ಚಿತ್ರವು ಅವರ ಹದಿಹರೆಯದ ಸಮಯದ್ದಾಗಿದ್ದು, ಅದರಲ್ಲಿ ಅವರ ಕೇಶವಿನ್ಯಾಸವು ವಿಚಿತ್ರವಾಗಿದೆ. ಇದನ್ನು ನೋಡಿ ವೀಕ್ಷಕರಿಗೂ ನಗು ತಡೆಯಲಾಗುತ್ತಿಲ್ಲ. ಅದೇ ಸಮಯದಲ್ಲಿ, ಸ್ವತಃ ಮಲೈಕಾ ಕೂಡ ಈ ಹೇರ್ ಸ್ಟೈಲ್ ಅನ್ನು ಗೇಲಿ ಮಾಡುತ್ತಿರುವುದು ನೀವು ಕಾಣಬಹುದು.

ಇದನ್ನೂ ಓದಿ: Actor Kiccha Sudeep : ತನ್ನ ವಿರುದ್ಧ ಸುದ್ದಿ ಪ್ರಸಾರ ಮಾಡಬಾರದೆಂದು ಕೋರ್ಟ್ ಮೊರೆ ಹೋದ ನಟ ಸುದೀಪ್!

Leave A Reply

Your email address will not be published.