Election 2023 : ಹಾಸನದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡಿದ್ರೆ ಸೋಲೋದು ಖಚಿತ- ಹೆಚ್ ಡಿ ಕುಮಾರಸ್ವಾಮಿ

Election 2023 : ಈಗಾಗಲೇ ಚುನಾವಣೆಯ ಬಿಸಿ ಎಲ್ಲೆಡೆ ಗರಿಗೆದರಿದ್ದು, ಬಿಜೆಪಿ (BJP), ಕಾಂಗ್ರೆಸ್ (Congress) ಪಕ್ಷದ ಅಭ್ಯರ್ಥಿಗಳ ಪಟ್ಟಿ ಸಿದ್ಧ ಪಡಿಸಿ ಜನರ ಮನವೊಲಿಸುವ ತಂತ್ರ ರೂಪಿಸುತ್ತಿದೆ. ಈ ಮಧ್ಯೆ ಮುಂಬರುವ ವಿಧಾನಸಭಾ ಚುನಾವಣೆಗೆ (Election 2023) ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು (H.D.Kumaraswamy) ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಹರಸಾಹಸ ಪಡುತ್ತಿದ್ದು, ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

 

ಚುನಾವಣೆಯ ಪ್ರಚಾರದ ಮಧ್ಯೆ ಮಾಜಿ ಸಿಎಂ ಕುಮಾರಸ್ವಾಮಿ , “ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣ (Bhavani Revanna) ಸ್ಪರ್ಧೆ ಮಾಡಿದರೆ ಗೆಲ್ಲಲ್ಲ” ಎಂದು ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ,
ʻʻನಾನು ಮೊದಲಿಂದಲೂ ಹಾಸನದ ಟಿಕೆಟ್ ಸಾಮಾನ್ಯ ಕಾರ್ಯಕರ್ತರಿಗೆ ನೀಡುವ ಸುಳಿವು ನೀಡಿದ್ದೆ. ಕುಟುಂಬಕ್ಕೆ ಹಾಸನ ಟಿಕೆಟ್ ಕೊಟ್ಟು ಮಾಧ್ಯಮಗಳಿಗೆ ಆಹಾರ ಆಗುವುದಿಲ್ಲ. ಯಾರೋ ರೇವಣ್ಣ ಕುಟುಂಬಕ್ಕೆ ತಲೆ ತುಂಬಿ ದಾರಿ ತಪ್ಪಿಸುತ್ತಿದ್ದಾರೆ. ಶಕುನಿಗಳು ದೇವೇಗೌಡರ ಕುಟುಂಬವನ್ನು ಮುಗಿಸಬೇಕು ಎಂದು ಪ್ರಯತ್ನಿಸುತ್ತಿವೆʼʼ ಎಂದು ಅವರು ನೇರವಾಗಿ ಆರೋಪಿಸಿದರು.

ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡಿದರೆ ಗೆಲ್ಲಲ್ಲ ಎಂದು ಈ ಹಿಂದೆ ಶಾಸಕರು ಸವಾಲ್ ಹಾಕಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು. ಕಾರ್ಯಕರ್ತರ ತೀರ್ಮಾನವೇ ಅಂತಿಮವಾಗಿದ್ದು, ಗ್ರೌಂಡ್, ರಿಯಾಲಿಟಿ ಚೆಕ್ ಮೂಲಕ ಟಿಕೆಟ್ ಫೈನಲ್ ಮಾಡಲಾಗುತ್ತದೆ. ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅನ್ನು ಗೆಲ್ಲಿಸುವುದೇ ನನ್ನ ಗುರಿ ಎಂದು ಕುಮಾರಸ್ವಾಮಿ ಹೇಳಿದರು.

 

ಇದನ್ನು ಓದಿ : Tata Motors car sales : ಕಾರು ಮಾರಾಟದಲ್ಲಿ ವೇಗವಾಗಿ ಮುನ್ನುಗುತ್ತಿದೆ ಟಾಟಾ ! ನಂ.1 ಪಟ್ಟ ಫಿಕ್ಸ್!

Leave A Reply

Your email address will not be published.