Best Earphones : ಇಯರ್‌ಫೋನ್‌ ಖರೀದಿಸಲು ಇಚ್ಛಿಸುವವರಿಗೆ ಇಲ್ಲಿವೆ ಅತ್ಯುತ್ತಮ ಬೆಸ್ಟ್‌ ಆಯ್ಕೆಯ ಇಯರ್‌ಫೋನ್‌!

Earphones Wireless : ಇದು ಆಧುನಿಕ ಜಗತ್ತು. ಇಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ತಂತ್ರಜ್ಞಾನಗಳು ಅಪ್ಡೇಟ್‌ ಆಗುತ್ತಲೇ ಇರುತ್ತದೆ. ಹೊಸ ಹೊಸ ಆವಿಷ್ಕಾರಗಳು ಸೃಷ್ಟಿ ಆಗುತ್ತಲೇ ಇದೆ. ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಇಯರ್‌ಫೋನ್‌ಗಳು ಕೂಡ ಸಾಕಷ್ಟು ಬೆಳವಣಿಗೆಯನ್ನು ಕಂಡಿವೆ. ಇಂದು ಟೆಕ್ ವಲಯದಲ್ಲಿ ಸ್ಮಾರ್ಟ್‌ಫೋನ್‌ಗಳಿಗಿರುವಷ್ಟೇ ಬೇಡಿಕೆ ಇಯರ್‌ಫೋನ್‌ಗಳು (Earphones Wireless)ಕೂಡ ಪಡೆದುಕೊಂಡಿವೆ. ಅದರಲ್ಲೂ ಜನಪ್ರಿಯ ಬ್ಯಾಂಡ್‌ಗಳ ಇಯರ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಅನ್ನು ಹುಟ್ಟುಹಾಕಿವೆ.

ಇಯರ್‌ಫೋನ್‌ಗಳ ಬೇಡಿಕೆ ತಕ್ಕಂತೆ ಹಲವು ಬ್ಯಾಂಡ್‌ಗಳು ತಮ್ಮ ವಿಶೇಷ ಇಯರ್‌ಫೋನ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಪ್ರಸ್ತುತ ನೀವು ಕೂಡ ಅತ್ಯುತ್ತಮ ಇಯರ್‌ಫೋನ್ ಖರೀದಿಸಬೇಕೆಂದು ಕೊಂಡರೆ ಹಲವು ಆಯ್ಕೆಗಳು ಇಲ್ಲಿ ಲಭ್ಯವಿದೆ .

ಬೋಸ್ ಕ್ರೈಟ್ ಕಂಫರ್ಟ್ ಇಯರ್‌ಬಡ್ಸ್ (ಕಪ್ಪು):
ಬೋಸ್ ಕೈಟ್ ಕಂಫರ್ಟ್ ಇಯರ್‌ಬಡ್ಸ್ 6 ಗಂಟೆಗಳ ಪ್ಲೇ ಬ್ಯಾಕ್ ಟೈಮ ನೀಡಲಿದೆ. ಇದನ್ನು ನೀವು ಅಮೆಜಾನ್‌ನಲ್ಲಿ 20,128ರೂ. ಬೆಲೆಗೆ ಖರೀದಿಸಬಹುದಾಗಿದೆ. ಇದು 20Hz – 20kHz ಫ್ರಿಕ್ವೆನ್ಸಿ ರೇಂಜ್ ಅನ್ನು ಪಡೆದಿದ್ದು, ನಾಯ್ಸ್ ಕ್ಯಾನ್ಸಲಿಂಗ್ ವ್ಯವಸ್ಥೆಯನ್ನು ಹೊಂದಿದೆ. ಇದರಲ್ಲಿ ಟಚ್ ಕಂಟ್ರೋಲ್ ಅನ್ನು ಸಹ ನೀಡಲಾಗಿದ್ದು, ನಿಮ್ಮ ಕರೆಗಳು ಹಾಗೂ ಮ್ಯೂಸಿಕ್ ಅನ್ನು ಕಂಟ್ರೋಲ್ ಮಾಡುವ ಅವಕಾಶ ನೀಡಿದೆ.

ಸೋನಿ WF-1000XM4:
ಸೋನಿ WF-1000XM4 ನೀವು ಖರೀದಿಸಬಹುದಾದ ಅತ್ಯುತ್ತಮ ಬ್ಲೂಟೂತ್ ವಾಯರ್‌ ಲೆಸ್ ಇಯರ್‌ಫೋನ್ ಎನಿಸಿಕೊಂಡಿದೆ. ಪ್ರಸ್ತುತ ಅಮೆಜಾನ್‌ನಲ್ಲಿ ಇದರ ಬೆಲೆ 16,990ರೂ. ಆಗಿದೆ. ಇದು 36 ಗಂಟೆಗಳ ಪ್ಲೇ ಬ್ಯಾಕ್‌ಟೈಂ ಅನ್ನು ಹೊಂದಿದ್ದು, ಇದರ ಫ್ರಿಕ್ವೆನ್ಸಿ ರೇಂಜ್ 20Hz – 40,000Hz ಇರಲಿದೆ. ಇನ್ನು ಈ ಇಯರ್‌ಫೋನ್ ಡ್ಯುಯಲ್ ಚಾನಲ್‌ಗಳನ್ನು ಹೊಂದಿದೆ. ಇದು LDAC, AAC CŨ SBC & ಬೆಂಬಲಿಸುವುದರಿಂದ ಪವರ್‌ಫುಲ್ ಸೌಂಡ್ ಸಿಸ್ಟಂ ಅನ್ನು ನೀಡಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ 2 ಪ್ರೊ:
ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ 2 ಪ್ರೊ ಸ್ಯಾಮ್‌ಸಂಗ್ ಕಂಪೆನಿಯ ಬೆಸ್ಟ್ ಇಯರ್‌ಫೋನ್‌ಗಳಲ್ಲಿ ಒಂದಾಗಿದೆ. ಇದು 5 ಗಂಟೆಗಳ ಪ್ಲೇ ಬ್ಯಾಕ್ ಟೈಂ ನೀಡಲಿದ್ದು, 20Hz – 20kHz ಫ್ರಿಕ್ವೆನ್ಸಿ ರೇಂಜ್ ಹೊಂದಿದೆ. ಇನ್ನು ಈ ಇಯರ್‌ಬಡ್ಸ್‌ ನಾಯ್ಸ್ ಕ್ಯಾನ್ಸಲೇಶನ್ ಫೀಚರ್ಸ್ ಅನ್ನು ಹೊಂದಿದ್ದು, ನಿಮಗೆ ಅತ್ಯುತ್ತಮ ಕರೆ ಅನುಭವವನ್ನು ನೀಡಲಿದೆ. ಪ್ರಸ್ತುತ ಅಮೆಜಾನ್‌ನಲ್ಲಿ ಇದರ ಬೆಲೆ 15,890ರೂ. ಆಗಿದೆ.

ಸೆನ್‌ಹೈಸರ್ ಮೊಮೆಂಟಮ್ ಟೂ ವೈರ್‌ಲೆಸ್ 3:
ಸೆನ್‌ಹೈಸರ್ ಮೊಮೆಂಟಮ್ ಟೂ ವೈರ್‌ಲೆಸ್ 3 ಬೆಸ್ಟ್ ಇಯರ್ ಫೋನ್‌ಗಳಲ್ಲಿ ಒಂದಾಗಿದೆ. ಪ್ರಸ್ತುತ ಇದರ ಬೆಲೆ 19,990ರೂ. ಆಗಿದೆ. ಇದು 28 ಗಂಟೆಗಳ ಪ್ಲೇ ಟೈಂ ಅನ್ನು ನೀಡಲಿದ್ದು, 20Hz – 20kHz ಫ್ರಿಕ್ವೆನ್ಸಿ ರೇಂಜ್ ಅನ್ನು ಹೊಂದಿದೆ. ಇನ್ನು ಇಯರ್‌ಬಡ್ಸ್ ನಾಯ್ಸ್ ಕ್ಯಾನ್ಸಲೇಶನ್ ಮೈಕ್ರೋಫೋನ್‌ಗಳನ್ನು ಹೊಂದಿದೆ. ಇದರಿಂದ ನಿಮಗೆ ಉತ್ತಮ ಗುಣಮಟ್ಟದ ಧ್ವನಿ ಪಿಕ್-ಅಪ್ ಸ್ಪಷ್ಟವಾದ ಮಾತು ಕೇಳಲು ಸಹಾಯ ಮಾಡಲಿದೆ.

ಒಪ್ಪೋ ಎನ್ನೋ X2 :
ಒಪ್ಪೋ ಎನ್ನೋ X2 ಇಯರ್‌ಫೋನ್ ಕೂಡ ನೀವು ಆಯ್ಕೆ ಮಾಡಬಹುದಾದ ಬೆಸ್ಟ್ ಚಾಯ್ಸ್ ಆಗಿದೆ. ಪ್ರಸ್ತುತ ಅಮೆಜಾನ್‌ನಲ್ಲಿ ಇದರ ಬೆಲೆ 10,999ರೂ. ಆಗಿದೆ. ಇದು ಅತ್ಯುತ್ತಮ ಸೌಂಡ್ ಸಿಸ್ಟಂ ಮತ್ತು ಡಿಸೈನ್‌ನಿಂದಾಗ ಗಮನಸೆಳೆದಿದೆ. ಇದರಲ್ಲಿ ನಿಮಗೆ 40 ಗಂಟೆಗಳ ಪ್ಲೇ ಬ್ಯಾಕ್ ಟೈಂ ಸಿಗಲಿದೆ. ಇದು 20Hz – 40kHz ಫ್ರಿಕ್ವೆನ್ಸಿ ರೇಂಜ್ ಅನ್ನು ಹೊಂದಿದೆ. ಅಲ್ಲದೆ ಅಲ್ಟಾ-ವೈಡ್ ಫ್ರೀಕ್ವೆನ್ಸಿ 45dB ಸ್ಮಾರ್ಟ್ ಅಡಾಪ್ಟಿವ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಸಿಸ್ಟಂ ಅನ್ನು ಕೂಡ ಒಳಗೊಂಡಿದೆ.

 

ಇದನ್ನು ಓದಿ : cow Urine : ಗೋಮೂತ್ರ ಮಾನವ ಬಳಕೆಗೆ ಒಳ್ಳೆಯದಲ್ಲ- ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆ IVRI !!! 

Leave A Reply

Your email address will not be published.