Amul and Nandini: ಅಮುಲ್‌ ವರ್ಸಸ್‌ ನಂದಿನಿ ವಿವಾದದ ಕುರಿತು ಅಮುಲ್‌ ಎಂಡಿ ಜಯೇನ್ ಮೆಹ್ತಾ ಪ್ರತಿಕ್ರಿಯೆ!

Amul and Nandini : ಇತ್ತೀಚಿನ ಕೆಲ ದಿನಗಳಿಂದ ಕರ್ನಾಟಕ ಮಾತ್ರವಲ್ಲದೆ ದೇಶಾದ್ಯಂತ ಸುದ್ದಿಯಾಗುತ್ತಿರುವ “ಅಮುಲ್‌ ವರ್ಸಸ್‌ ನಂದಿನಿ” ಕುರಿತು ಅಮುಲ್‌ ವ್ಯವಸ್ಥಾಪಕ ನಿರ್ದೇಶಕ ಜಯೇನ್‌ ಮೆಹ್ತಾ(Amul MD Jayen Mehta) ಮೌನ ಮುರಿದಿದ್ದಾರೆ.ಅಮುಲ್‌ ವರ್ಸಸ್‌ ನಂದಿನಿ (Amul and Nandini) ಅಲ್ಲ ಬದಲಿಗೆ ಇದು ಅಮುಲ್‌ ಮತ್ತು ನಂದಿನಿ(Amul and Nandini) ಆಗಿದ್ದು ಎರಡೂ ಕೃಷಿಕರ ಮಾಲಿಕತ್ವದ ಸಹಕಾರ ಸಂಸ್ಥೆಯಾಗಿದೆ. ಎರಡೂ ಸಂಸ್ಥೆಗಳು ಒಂದೇ ರೀತಿಯ ಹಿತಾಸಕ್ತಿಯನ್ನು ಆಧರಿಸಿಕೊಂಡು ಕಾರ್ಯ ನಿರ್ವಹಿಸುತ್ತಿದೆ. ಅಮುಲ್ ನಂದಿನಿ ಜೊತೆಗೆ ಪೈಪೋಟಿ ನಡೆಸುವುದಿಲ್ಲ ಎಂಬುದಾಗಿ ಮೆಹ್ತಾ ಅವರು ಸ್ಪಷ್ಟನೆ ನೀಡಿದ್ದಾರೆ.

ಕೆಎಂಎಫ್‌ನ(KMF) ಬೆಂಗಳೂರು ಘಟಕದಲ್ಲಿ ಕಳೆದ ಹಲವು ವರ್ಷಗಳಿಂದ ಅಮುಲ್‌ ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಅಮುಲ್‌ ಐಸ್‌ಕ್ರೀಮ್‌, ಅಮುಲ್‌ ಹಾಲಿನ ಪುಡಿ ಸೇರಿದಂತೆ ಹಲವು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು ಅಮುಲ್‌ ಐಸ್‌ಕ್ರೀಮ್‌ ಅನ್ನು ತಯಾರಿಸಲಾಗುತ್ತಿದೆ. 2015ರಿಂದ ಪ್ಯಾಕೇಟ್‌ ಹಾಲು ಮತ್ತು ಇತರೆ ಉತ್ಪನ್ನಗಳ ಮಾರಾಟವಾಗಿದ್ದು, ಕರ್ನಾಟಕದಲ್ಲಿ ಡೇರಿ ಅಭಿವೃದ್ಧಿಗೆ ಪೂರಕವಾಗಿ ಅಮುಲ್‌ ಕಾರ್ಯನಿರ್ವಹಿಸುತ್ತಿದೆಯೆಂದು ಮೆಹ್ತಾ ಅವರು ಮಾಹಿತಿ ನೀಡಿದ್ದಾರೆ.

“ನಾವು ನಂದಿನಿ ಜತೆಗೆ ಹಲವು ಉತ್ಪನ್ನಗಳನ್ನು ಜತೆಯಾಗಿ ಕಳೆದ ಹಲವು ವರ್ಷಗಳಿಂದ ಉತ್ಪಾದಿಸುತ್ತ ಇದ್ದೇವೆ. ಕಳೆದ ಒಂದು ದಶಕದಲ್ಲಿ ಅಮುಲ್‌ ಐಸ್‌ಕ್ರೀಮ್‌ಗಾಗಿ 30 ಸಾವಿರ ಲೀಟರ್‌ ನಂದಿನಿ ಹಾಲನ್ನು ಬಳಸಲಾಗಿದೆ. ಕೊರೊನಾ ಸಮಯದಲ್ಲಿ ನಮಗೆ ಚೀಸ್‌ ಕೊರತೆಯಾಗಿತ್ತು. ನಾವು ಕರ್ನಾಟಕದ ನಂದಿನಿಯಿಂದ ಆ ಸಮಯದಲ್ಲಿ ಚೀಸ್‌ ಖರೀದಿ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.

ನಂದಿನಿ ಜೊತೆಗೆ ಅಮುಲ್‌ ಸ್ಪರ್ಧೆ ನಡೆಸುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿರುವ ಮೆಹ್ತಾ ಅವರು, ಅಮುಲ್‌ ಟೋನ್ಡ್‌ ಹಾಲಿಗೆ 54 ರೂಪಾಯಿದ್ದು, ನಂದಿನಿ ಹಾಲಿಗೆ 39-40 ರೂಪಾಯಿದೆ. ಇಂತಹ ದರ ವ್ಯತ್ಯಾಸ ಇರುವಾಗ ಸ್ಪರ್ಧೆ ಹೇಗೆ ಉಂಟಾಗುತ್ತದೆ ಎಂದು ಅವರು ಸಂದರ್ಶನವೊಂದರಲ್ಲಿ ಪ್ರಶ್ನಿಸಿದ್ದಾರೆ. ಜಯೇನ್‌ ಮೆಹ್ತಾ ಅವರು, ಅಮುಲ್‌ ಜೊತೆಗೆ ನಂದಿನಿ ವಿಲೀನವಾಗುವ ಪ್ರಶ್ನೆಯೇ ಇಲ್ಲ ಎಂದು ಮಾಹಿತಿ ನೀಡಿದ್ದಾರೆ. ಇವೆರಡೂ ರಾಜ್ಯಗಳ ಕಾಯ್ದೆಗಳ ಅಡಿಯಲ್ಲಿ ಸ್ಥಾಪನೆಯಾದ ಸಂಸ್ಥೆಗಳಾಗಿದ್ದು, ಕರ್ನಾಟಕದಲ್ಲಿ ಅಮೂಲ್‌ ಅನ್ನು ನಂದಿನಿ ಪ್ರತಿಸ್ಪರ್ಧಿ ಎಂದು ಬಿಂಬಿಸುವುದು ದುರದೃಷ್ಟಕರ” ಎಂದು ಮೆಹ್ತಾ ಅವರು ಮಾಹಿತಿ ನೀಡಿದ್ದಾರೆ.

 

ಇದನ್ನು ಓದಿ : Cancer : ಬಿಯರ್ ಮತ್ತು ಮಾಂಸ ಪ್ರಿಯರೇ ಎಚ್ಚರಿಕೆ! ಕ್ಯಾನ್ಸರ್ ನಿಮ್ಮನ್ನು ಅಂಟಿಕೊಳ್ಳಲಿದೆ! 
.

1 Comment
  1. Registro says

    Can you be more specific about the content of your article? After reading it, I still have some doubts. Hope you can help me.

Leave A Reply

Your email address will not be published.