Kantara : ಕಾಂತಾರ ನಂತರ ಯಾವುದೇ ಸಿನಿಮಾ ಇಷ್ಟೊಂದು ಗಳಿಕೆ ಮಾಡಿಲ್ಲ!
Kantara: ವಿಶ್ವಾದ್ಯಂತ ಸಂಚಲನ ಮೂಡಿಸಿ ಕರಾವಳಿಯ ಕಲೆಯನ್ನು ಬಿಂಬಿಸಿ ತುಳುನಾಡಿನ ಸಂಸ್ಕೃತಿಯ ವೈಭವವನ್ನು ಜಗತ್ತಿಗೆ ಸಾರಿದ ‘ಕಾಂತಾರ’ದ ಹವಾ ಇನ್ನೂ ಕಮ್ಮಿಯಾಗಿಲ್ಲ. ಕಾಂತಾರ ಈ ವರ್ಷದ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾಗಳಲ್ಲಿ (blockbuster hit movie) ಒಂದಾಗಿದ್ದು, ಕಾಂತಾರವು ಬಾಕ್ಸಾಫೀಸ್‌ನಲ್ಲಿ ದೊಡ್ಡ ಕಲೆಕ್ಷನ್ ಮಾಡಿದ ವರ್ಷದ ಎರಡನೇ ಕನ್ನಡ ಚಲನಚಿತ್ರವಾಗಿದೆ (kannada film). ಕಾಂತಾರ ಚಿತ್ರ ತಮಿಳು (Tamil) , ತೆಲುಗು (Telugu), ಹಿಂದಿ, ತುಳು ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗಿದೆ. ಕಾಂತಾರ ಬಿಡುಗಡೆಯಾದ ಮೇಲೆ 400 ಕೋಟಿಗೂ ಅಧಿಕ ಕಲೆಕ್ಷನ್ ಗಳಿಸಿದ್ದು, ಪ್ಯಾನ್ ಇಂಡಿಯಾ ಸಿನಿಮಾ ಆಗಿ ಮಾರ್ಪಟ್ಟಿದೆ.
ಆದರೆ, ಕಾಂತಾರ (Kantara) ಬಳಿಕ ಬಂದ ಯಾವ ಸೌತ್ ಚಿತ್ರವೂ ಸಹ ಹಿಂದಿ ಬಾಕ್ಸ್ ಆಫೀಸ್‌ನಲ್ಲಿ 10 ಕೋಟಿ ದಾಟಿಲ್ಲ ಎನ್ನಲಾಗಿದೆ.
ಇತ್ತೀಚೆಗೆ ಬಾಲಿವುಡ್ ಸಿನಿಮಾಗಳಿಗಿಂತ ಸೌತ್ ಸಿನಿಮಾಗಳು ಅಬ್ಬರಿಸುತ್ತಿವೆ. ಹಿಂದಿಗೂ ಡಬ್ ಆಗಿ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸಿವೆ. ಕಳೆದ ವರ್ಷ ಬಾಲಿವುಡ್ (Bollywood) ಬಾಕ್ಸ್ ಆಫೀಸ್‌ನಲ್ಲಿ ಹಿಂದಿ ಚಿತ್ರಗಳಿಗಿಂತ ದಕ್ಷಿಣ ಭಾರತದ ಚಿತ್ರಗಳ ಸಕ್ಸಸ್ ಶೇಕಡಾಂಶ ಹಾಗೂ ಹಣ ಗಳಿಕೆಯೇ ದೊಡ್ಡದಿತ್ತು. ಕಳೆದ ವರ್ಷ ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿ, ಯಶಸ್ಸು ಕಂಡ ಸೌತ್ ಚಿತ್ರಗಳು ಈ ವರ್ಷದ ಮೊದಲ ಮೂರು ತಿಂಗಳುಗಳಲ್ಲಿ ಆ ಮೋಡಿಯನ್ನು ಮಾಡುವಲ್ಲಿ ಯಶಸ್ವಿಯಾಗಿಲ್ಲ. ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಮೇಲೆ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಸೌತ್ ಸಿನಿಮಾ ಹೆಚ್ಚು ಗಳಿಕೆ ಮಾಡ್ತಾ ಅಥವಾ ಬಾಲಿವುಡ್‌ನ ಸಿನಿಮಾ ಹೆಚ್ಚು ಗಳಿಕೆ ಮಾಡ್ತಾ ಎಂಬ ಪೈಪೋಟಿ ಶುರುವಾಗಿದೆ.
ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಗೊಂಡ ಕಾಂತಾರ ಹಿಂದಿ ವರ್ಷನ್ ಬಳಿಕ ಹಿಂದಿಗೆ ಡಬ್ ಆದ ಯಾವ ಸೌತ್ ಚಿತ್ರವೂ ಕೂಡ ಐದು ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನೂ ಸಹ ಮಾಡಿಲ್ಲ ಎಂದು ಹೇಳಲಾಗಿದೆ. ಕನ್ನಡದಲ್ಲಿ ಬನಾರಸ್ (Banaras), ವಿಜಯಾನಂದ ಹಾಗೂ ಕಬ್ಜ (kabzaa) ಚಿತ್ರಗಳು ಹಿಂದಿಗೆ ಡಬ್ ಆಗಿ ಬಿಡುಗಡೆಯಾಗಿದ್ದವು. ಇದರಲ್ಲಿ ಬನಾರಸ್ ಹಾಗೂ ವಿಜಯಾನಂದ ಕಲೆಕ್ಷನ್ ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ಹತ್ತು ಲಕ್ಷ ದಾಟಿಲ್ಲ. ಕನ್ನಡದಲ್ಲಿ ಅಬ್ಬರದ ಕಲೆಕ್ಷನ್ ಮಾಡಿರುವ ಕಬ್ಜ ಚಿತ್ರ ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ನಾಲ್ಕು ಕೋಟಿ ಗಳಿಸಿದೆ ಎಂದು ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ವರದಿಗಳು ತಿಳಿಸಿದ್ದಾರೆ.
ಕಾಂತಾರ ಬಳಿಕ ಬಿಡುಗಡೆಯಾದ ತೆಲುಗಿನ ಪ್ಯಾನ್ ಇಂಡಿಯಾ ಚಿತ್ರವಾದ ಯಶೋಧ (yashodha) ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ಒಂದೂವರೆ ಕೋಟಿಯನ್ನು ಗಳಿಸಿದ್ದು, ವಾಲ್ತೇರು ವೀರಯ್ಯ 1.8 ಕೋಟಿ, ಚಿರಂಜೀವಿ ನಟನೆಯ ಗಾಡ್‌ಫಾದರ್ (god father) 1.2 ಕೋಟಿ, ಸಂದೀಪ್ ಕಿಶನ್ ನಟನೆಯ ಮೈಖೆಲ್ ಸಿನಿಮಾ 30 ಲಕ್ಷ, ನಾಗಾರ್ಜುನ ಅಭಿನಯದ ದ ಘೋಸ್ಟ್ (ghost) ಸಿನಿಮಾ 10 ಲಕ್ಷ ಗಳಿಸಿದವು. ತಮಿಳು ಹಾಗೂ ಕನ್ನಡದಿಂದ ಹೆಚ್ಚೇನೂ ಪ್ಯಾನ್ ಇಂಡಿಯಾ ಚಿತ್ರಗಳು ಬಿಡುಗಡೆಯಾಗಿಲ್ಲ.
ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿರುವ ನ್ಯಾಚುರಲ್ ಸ್ಟಾರ್ ನಾನಿ (nani) ಹಾಗೂ ಕೀರ್ತಿ ಸುರೇಶ್ (Keerthy Suresh) ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ದಸರಾ’ (dasara) ಹಿಂದಿ ಬಾಕ್ಸ್ ಆಫೀಸ್‌ನಲ್ಲಿ 6 ಕೋಟಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದ್ದು, ಈ ಚಿತ್ರವೂ ಸಹ ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಗುವಲ್ಲಿ ವಿಫಲವಾಗಿದೆ. ಕಾಂತಾರ ಹಿಂದಿ ಬಾಕ್ಸ್ ಆಫೀಸ್‌ನಲ್ಲಿ 71 ಕೋಟಿ ಗಳಿಕೆ ಮಾಡಿತ್ತು. ಇದು ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ಇಷ್ಟು ದೊಡ್ಡ ಕಲೆಕ್ಷನ್ ಮಾಡಿದ ಕೊನೆ ಸೌತ್ ಸಿನಿಮಾ ಎನಿಸಿಕೊಂಡಿದೆ.
Can you be more specific about the content of your article? After reading it, I still have some doubts. Hope you can help me.