Vote From Home voting process : 80 ವರ್ಷ ಮೇಲ್ಪಟ್ಟವರಿಗೆ ಮತದಾನದ ಪ್ರಕ್ರಿಯೆ ಹೇಗಿರುತ್ತೆ? ಇಲ್ಲಿದೆ ಕಂಪ್ಲೀಟ್ ವಿವರ!
Vote From Home voting process : ಕರ್ನಾಟಕ ವಿಧಾನಸಭೆಯಲ್ಲಿ ಚುನಾವಣೆಯ (election) ಸಿದ್ಧತೆ ಭರದಿಂದ ಸಾಗುತ್ತಿದ್ದು, ಬರುವ ಮೇ ತಿಂಗಳಿನಲ್ಲಿ ನಡೆಯಬೇಕಾಗಿರುವ ಚುನಾವಣೆಯಲ್ಲಿ ಜನರ ಆಯ್ಕೆ ಯ ಪಾತ್ರವು ಪ್ರಮುಖವಾಗಿದೆ. ಸದ್ಯ ಮತದಾನದಿಂದ ಯಾರೂ ವಂಚಿತರಾಗಬಾರದು ಎಂಬ ಉದ್ದೇಶದಿಂದ 80 ವರ್ಷಕ್ಕೂ ಹೆಚ್ಚು ವಯಸ್ಸಿನವರು ಮನೆಯಿಂದಲೇ ಮತದಾನಕ್ಕೆ ಅವಕಾಶ (Vote From Home voting process) ಕಲ್ಪಿಸುವ ಹೊಸ ನಿರ್ಧಾರ ಮಾಡಲಾಗಿದೆ.
ಮೇ 10ಕ್ಕೆ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಸರ್ವ ಪಕ್ಷಗಳೂ ಭರದಿಂದಲೇ ಅಖಾಡಕ್ಕೆ ಇಳಿದಿವೆ. ಈ ಮಧ್ಯೆ ಈ ಬಾರಿ ರಾಜ್ಯದ ಪೀಠ ಏರಲಿರುವ ಪಕ್ಷ ಯಾವುದು ಎನ್ನುವ ಕುತೂಹಲ ಮತದಾರಲ್ಲೂ ಇದೆ.
ಮತದಾನ ಎಂದರೆ ಸಾಮಾನ್ಯವಾಗಿ ಯಾವ ಮತಗಟ್ಟೆಗೆ ತೆರಳಿ ನಾವು ಮತದಾನ ಮಾಡಬೇಕು ಎನ್ನುವುದನ್ನು ಮೊದಲೇ ಸೂಚಿಸಲಾಗುತ್ತದೆ. ಆ ಪ್ರಕಾರ ಮತದಾನ ನಡೆಯುತ್ತದೆ. ಹೀಗೆ ವಯಸ್ಕರಿಗೆ ಮತಗಟ್ಟೆಗೆ ತೆರಳಿ ಮತ ಚಲಾವಣೆ ಮಾಡುವುದು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಹೊಸ ಪದ್ದತಿಯನ್ನು ಜಾರಿಗೆ ತರಲಾಗಿದೆ. 80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನಕ್ಕೆ ಅವಕಾಶ ನೀಡಲಾಗಿದೆ.
80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲಿಯೇ ಮತದಾನಕ್ಕೆ ಅವಕಾಶ ನೀಡಿರುವುದರಿಂದ ಬಿಬಿಎಂಪಿ ಇದಕ್ಕಾಗಿ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳುತ್ತಿದೆ.
ಹೊಸ ಮತದಾನ ಪ್ರಕ್ರಿಯೆ ಈ ರೀತಿ ನಡೆಯಲಿದೆ.
ನೋಂದಣಿ ಮಾಡಿಕೊಳ್ಳುವ ವಿಧಾನ :
ಈಗಾಗಲೇ ವೃದ್ಧ ಮತದಾರರ ಮನೆ ಮತದಾನಕ್ಕೆ ಸಿದ್ದತೆ ನಡೆಯುತ್ತಿದೆ.
ಮೊದಲಿಗೆ 80 ವರ್ಷ ಮೇಲ್ಪಟ್ಟವರಿಗೆ 12ಡಿ ಫಾರಂ ವಿತರಣೆ ಮಾಡಲಾಗುತ್ತದೆ. ನಾಮಿನೇಷನ್ ಪ್ರಕ್ರಿಯೆಗೂ 5 ದಿನ ಮುಂಚಿತವಾಗಿ 12 ಡಿ ಫಾರಂ ವಿತರಣೆ ಮಾಡಲಾಗುತ್ತದೆ. ಈ ಫಾರಂ ಮೂಲಕ ಮತದಾರ ಫೋಸ್ಟಲ್ ವೋಟ್ ಗೆ ಮನವಿ ಮಾಡಬೇಕು. ಈ ಫಾರಂಅನ್ನು ಪ್ರತಿ 80 ವರ್ಷ ಮೇಲ್ಪಟ್ಟವರಿಗೆ ಮಾತ್ರ ನೀಡಲಾಗುವುದು.
ಫೋಸ್ಟಲ್ ಬ್ಯಾಲೆಟ್ ವ್ಯವಸ್ಥೆ :
ಬೆಂಗಳೂರಿನಲ್ಲಿ 2 ಲಕ್ಷದ 36 ಸಾವಿರ ಮಂದಿ 80 ವರ್ಷ ಮೇಲ್ಪಟ್ಟ ಮತದಾರರಿದ್ದಾರೆ. ಈ ಪೈಕಿ ಯಾರೆಲ್ಲಾ ಮನೆಯಲ್ಲಿ ಮತದಾನಕ್ಕೆ ಬಯಸುತ್ತಾರೋ ಅವರಿಗೆ ಫೋಸ್ಟಲ್ ವೋಟ್ ಮಾಡುವ ಅವಕಾಶ ವಿರುತ್ತದೆ. ಈ ಸಂದರ್ಭದಲ್ಲಿ ಇಬ್ಬರು ಚುನಾವಣಾಧಿಕಾರಿಗಳು ಹಾಜರಿರುತ್ತಾರೆ. ಕಂಪ್ಲೀಟ್ ಚುನಾವಣಾ ಪ್ರಕ್ರೀಯೆ ಗೌಪ್ಯವಾಗಿ ನಡೆಯುತ್ತದೆ. ಫೋಸ್ಟಲ್ ವೋಟಿಂಗ್ ಪ್ರಕ್ರಿಯೆಯನ್ನು ಸಂಪೂರ್ಣ ವೀಡಿಯೋ ಶೂಟ್ ಮಾಡಲಾಗುತ್ತದೆ.
ಸದ್ಯ 80 ವರ್ಷ ಮೇಲ್ಪಟ್ಟವರಿಗೆ ಮತ ಚಲಾಯಿಸಲು ಎರಡು ಆಯ್ಕೆಗಳನ್ನು ನೀಡಲಾಗಿದೆ. ಒಂದು ಮತಗಟ್ಟೆಗೆ ಬಂದು ಮತ ಚಲಾಯಿಸುವುದು. ಇನ್ನೊಂದು ಮನೆಯಲ್ಲಿಯೇ ಹಕ್ಕು ಚಲಾಯಿಸುವುದು. ಮತಗಟ್ಟೆಗೆ ಬಂದು ಮತ ಹಾಕುವವರು 12 ಡಿ ಫಾರಂ ಕೊಡುವ ಅವಶ್ಯಕತೆ ಇಲ್ಲ. ಆದರೆ ಮನೆಯಲ್ಲೇ ಮತದಾನ ಬಯಸುವವರು ಮಾತ್ರ 12 ಡಿ ಫಾರಂ ಕೊಡಲೇಬೇಕು ಎಂದು ತಿಳಿಸಲಾಗಿದೆ.
ಇದನ್ನೂ ಓದಿ: Subsidy on gas cylinder : ಗೃಹಿಣಿಯರೇ ನಿಮಗೊಂದು ಗುಡ್ ನ್ಯೂಸ್! ದೊರಕಲಿದೆ ನಿಮಗೆ 500ರೂ. ಗೆ ಗ್ಯಾಸ್!