Rhinos itching problem : ತುರಿಕೆಯ ಸಮಸ್ಯೆ, ಕೃಷಿ ಭೂಮಿಯತ್ತ ಘೇಂಡಾಮೃಗ ಮುಖ! ಸಂಕಷ್ಟದಲ್ಲಿ ರೈತರು!

Rhinos itching problem : ರೈತರು (farmers ) ತಮ್ಮ ಬೆಳೆಗಳನ್ನು ಎಷ್ಟು ಕಾಳಜಿ ವಹಿಸಿ ಬೆಳೆಸಿದರೂ ಒಂದಲ್ಲಾ ಒಂದು ಸಮಸ್ಯೆ ( Former Problem) ತಲೆದೋರುತ್ತವೆ. ಇದೀಗ ಕೃಷಿಯೇ ಮುಖ್ಯ ಆದಾಯದ ಮೂಲವಾಗಿರುವ ಅಲಿಪುರ್ದವಾರ್ ಜಿಲ್ಲೆಯ ಚಿಲಪಾಟಾದಲ್ಲಿ ರೈತರು ಊಹಿಸಲಾರದ ಸಮಸ್ಯೆ ಒಂದನ್ನು ಎದುರಿಸುತ್ತಿದ್ದಾರೆ.

ಚಿಲಪಾಟಾದಲ್ಲಿ ರೈತರು ಹೊಲದಲ್ಲಿ ಜೋಳ ವನ್ನು ಬೆಳೆದಿದ್ದು, ಫೇಂಡಾಮೃಗಗಳು ಆಗಾಗ್ಗೆ ಜೋಳದ ಹೊಲಗಳ ಮೇಲೆ ದಾಳಿ ಮಾಡುತ್ತಿವೆ. ಈ ಪ್ರಾಣಿಗಳಿಗೆ ಈ ಧಾನ್ಯದ ಕುರಿತು ಆಸಕ್ತಿಯಿಲ್ಲ. ಆದರೆ, ತುರಿಕೆಯಿಂದ ಸ್ವಲ್ಪ ಪರಿಹಾರವನ್ನು ಪಡೆಯಲು ಎಲೆಗಳ ಒರಟಾದ ಅಂಚುಗಳಿಗೆ ತಮ್ಮ ಚರ್ಮವನ್ನು ಉಜ್ಜುತ್ತಿವೆ. ಈ ವೇಳೆ ಸಸ್ಯಗಳು ಹಾನಿಗೊಳಗಾಗುತ್ತಿವೆ.

ಹದಿನೈದು ದಿನಗಳ ಹಿಂದೆ ಅಲಿಪುರ್ದವಾರ್ ಜಿಲ್ಲೆಯ ಚಿಲಪಾಟಾದಲ್ಲಿ ಈ ತೊಂದರೆ ಪ್ರಾರಂಭವಾಗಿದ್ದು, ಆರಂಭದಲ್ಲಿ, ಪ್ರಾಣಿಗಳು ಜೋಳವನ್ನು ತಿನ್ನುತ್ತವೆ ಎಂದು ರೈತರು ಭಾವಿಸಿದ್ದರು. ಹೀಗೆ ಬೆಳಗಿನ ಜಾವದಲ್ಲಿ ಹಾನಿಗೊಳಗಾದ ಜೋಳದ ಗಿಡಗಳನ್ನು ನೋಡಿದ ರೈತರು ರಾತ್ರಿಯಿಡೀ ಕಾವಲು ಕಾಯಲು ನಿರ್ಧರಿಸಿದರು.

‘ಕಾವಲು ಕಾಯುವಾಗ ಘಂಡಾಮೃಗಗಳು ಹೊಲಗಳಿಗೆ ನುಗ್ಗುತ್ತಿರುವುದು ಕಂಡು ಬಂದಿದೆ. ಅವು ತಮ್ಮ ಚರ್ಮವನ್ನು ಜೋಳದ ಗಿಡಗಳಿಗೆ ಉಜ್ಜುವ ಮೂಲಕ (Rhinos itching problem) , ಉತ್ಪನ್ನವನ್ನು ತಿನ್ನದೆ ಆ ಪ್ರದೇಶದಿಂದ ಹೊರನಡೆದಿರುವುದನ್ನು ಗಮನಿಸಿದಾಗ ನಮಗೆ ಆಶ್ಚರ್ಯವಾಯಿತು’ ಎಂದು ಸಂತ್ರಸ್ತ ರೈತರಲ್ಲಿ ಒಬ್ಬರಾದ ಅಬು ಆಲಂ ಹೇಳಿದರು.

ಅದಲ್ಲದೆ ‘ನಾವೆಲ್ಲ ಕಲ್ಲು ತೂರಾಟ ನಡೆಸಿ ಕೂಗಾಡುವ ಮೂಲಕ ಓಡಿಸಲು ಯತ್ನಿಸಿದರು. ಆದರೆ, ಅದು ಪರಿಣಾಮಕಾರಿಯಾಗಲಿಲ್ಲ.
ಸದ್ಯ ಅರಣ್ಯ ಇಲಾಖೆಯು ತಕ್ಷಣ ಪರಿಹಾರವನ್ನು ಕಂಡುಕೊಳ್ಳಲು ನಾನು ವಿನಂತಿಸುತ್ತೇನೆ. ಇದರಿಂದ ನಾವು ಇನ್ನೂ ಹಾನಿಗೊಳಗಾಗದೆ ಉಳಿದಿರುವ ನಮ್ಮ ಬೆಳೆಯನ್ನು ಉಳಿಸಿಕೊಳ್ಳಬಹುದು’ ಎಂದು ರೈತರೊಬ್ಬರು ಮನವಿ ಮಾಡಿದ್ದಾರೆ.

ಈ ಕುರಿತು ಉತ್ತರ ವಿಭಾಗದ ಮುಖ್ಯ ಅರಣ್ಯ (ವನ್ಯಜೀವಿ) ಸಂರಕ್ಷಣಾಧಿಕಾರಿ ರಾಜೇಂದ್ರ ಜಾಖರ್ ಮಾತನಾಡಿ, ಕಲ್ಲು ತೂರಾಟದ ಮೂಲಕ ಫೇಂಡಾಮೃಗಗಳನ್ನು ಓಡಿಸುವುದು ತುಂಬಾ ಅಪಾಯಕಾರಿ. ಕಲ್ಲಿನಿಂದ ಹೊಡೆಸಿಕೊಂಡ ಪ್ರಾಣಿಗಳು ರೈತರ ಮೇಲೆ ದಾಳಿ ಮಾಡಲು ಪ್ರಾರಂಭಿಸಿದರೆ, ಅದು ಮಾರಣಾಂತಿಕವಾಗಬಹುದು.

ಒಟ್ಟಿನಲ್ಲಿ ‘ಆನೆಗಳು ಮತ್ತು ಫೇಂಡಾಮೃಗಗಳು ತಮ್ಮ ಚರ್ಮವನ್ನು ದೊಡ್ಡ ಮರಗಳ ಕಾಂಡಗಳಿಗೆ ಉಜ್ಜಿಕೊಂಡು ಪರಿಹಾರ ಪಡೆಯುತ್ತವೆ. ಹೀಗಾಗಿ ಜೋಳದ ಗದ್ದೆಗಳಲ್ಲೂ ಫೇಂಡಾಮೃಗಗಳು ಇದೇ ಪದ್ಧತಿ ಅನುಸರಿಸುತ್ತಿವೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಸಮಸ್ಯೆಗೆ ಆದಷ್ಟು ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳುವುದಾಗಿ ಅಧಿಕಾರಿಗಳು ಮನವರಿಕೆ ಮಾಡಿದ್ದಾರೆ.

ಇದನ್ನೂ ಓದಿ: Vote From Home voting process : 80 ವರ್ಷ ಮೇಲ್ಪಟ್ಟವರಿಗೆ ಮತದಾನದ ಪ್ರಕ್ರಿಯೆ ಹೇಗಿರುತ್ತೆ? ಇಲ್ಲಿದೆ ಕಂಪ್ಲೀಟ್‌ ವಿವರ!

Leave A Reply

Your email address will not be published.