Modi visited church on Easter: ಈಸ್ಟರ್ ಹಿನ್ನಲೆಯಲ್ಲಿ ದೆಹಲಿಯ ಚರ್ಚ್ ನಲ್ಲಿ ಪ್ರಧಾನಿ ಮೋದಿ ಪ್ರಾರ್ಥನೆ
Modi visited church on Easter: ಪ್ರಧಾನಿ ನರೇಂದ್ರ ಮೋದಿ ನಿನ್ನೆ ಭಾನುವಾರದಂದು ಈಸ್ಟರ್ (Ester) ಅಂಗವಾಗಿ ನವದೆಹಲಿಯಲ್ಲಿನ ಸೇಕ್ರೆಡ್ ಹಾರ್ಡ್ ಕ್ಯಾಥಡ್ರಲ್ ಚರ್ಚ್ ಗೆ ಭೇಟಿ ನೀಡಿ (Modi visited church) ಪ್ರಾರ್ಥನೆ ಸಲ್ಲಿಸಿದ್ದಾರೆ. ಅಲ್ಲಿ ಚರ್ಚ್ ನಲ್ಲಿ ಪ್ರಧಾನಿ ಮೋದಿ (Narendra Modi) ಅವರನ್ನು ಸ್ವಾಗತಿಸುತ್ತಿರುವ ಹಾಗೂ ಪ್ರಧಾನಿ ಮೋದಿ ಅಲ್ಲಿನ ಪಾದ್ರಿಗಳಿಗೆ ಶುಭಾಶಯ ಕೋರುತ್ತಿರುವ ಅಧಿಕೃತ ವೀಡಿಯೋ ಪ್ರಕಟಗೊಂಡಿದೆ. ಮೋದಿ ಚರ್ಚ್ ನಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
” ಈಸ್ಟರ್‌ನ ಸಂದರ್ಭದಲ್ಲಿ, ದೆಹಲಿಯ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್‌ಗೆ ಭೇಟಿ ನೀಡುವ ಅವಕಾಶ ನನಗೆ ಸಿಕ್ಕಿದೆ. ನಾನು ಕ್ರಿಶ್ಚಿಯನ್ ಸಮುದಾಯದ ಆಧ್ಯಾತ್ಮಿಕ ನಾಯಕರನ್ನು ಸಹ ಭೇಟಿಯಾದೆ ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಬಿಜೆಪಿಯು ಕ್ರೈಸ್ತರನ್ನು ಸಕ್ರಿಯವಾಗಿ ಓಲೈಸುತ್ತಿರುವುದರಿಂದ ಪ್ರಧಾನಮಂತ್ರಿ ಚರ್ಚ್ ಗೆ ಅಪರೂಪದ ಭೇಟಿ ನೀಡಿರುವುದು ರಾಜಕೀಯ ಪ್ರಾಮುಖ್ಯತೆ ಪಡೆದಿದೆ.
ಮೋದಿಯವರು ತಮ್ಮ ಇತ್ತೀಚಿನ ಭಾಷಣಗಳಲ್ಲಿ ಗೋವಾ ಮತ್ತು 2 ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಪಕ್ಷದ ಚುನಾವಣಾ ಯಶಸ್ಸನ್ನು ಉಲ್ಲೇಖಿಸಿದ್ದರು. ಆ ಮೂಲಕ ಬಿಜೆಪಿಯೊಂದಿಗೆ ಅಲ್ಪಸಂಖ್ಯಾತ ಸಮುದಾಯದ ಬೆಳೆಯುತ್ತಿರುವ ಸಂಪರ್ಕವನ್ನು ಒತ್ತಿ ಹೇಳಿದ್ದರು ಮೋದಿ. ಈ ರಾಜ್ಯಗಳು ಹೆಚ್ಚಿನ ಕ್ರಿಶ್ಚಿಯನ್ ಜನಸಂಖ್ಯೆಯನ್ನು ಹೊಂದಿದ್ದರೂ, ಅಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.
ಇನ್ನು ಕ್ರಿಶ್ಚಿಯನ್ ಸಮುದಾಯವು ಗಣನೀಯವಾಗಿ ಇರುವ ಕೇರಳದಂತಹ ರಾಜ್ಯದಲ್ಲಿ ಬಿಜೆಪಿಯು ಈ ಸಮುದಾಯದ ಬೆಂಬಲದ ನಿರೀಕ್ಷೆಯಲ್ಲಿದೆ. ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಅಭಿವೃದ್ಧಿ ಎಂಬ ಧ್ಯೇಯೋದ್ದೇಶಗಳಿಗೆ ತಮ್ಮ ಸರ್ಕಾರದ ಬದ್ಧವಾಗಿದೆ ಎಂದು ಮೋದಿ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಕೇರಳದ ಹಿರಿಯ ಕಾಂಗ್ರೆಸ್ ನಾಯಕ, ಕ್ರಿಶ್ಚಿಯನ್ ನಾಯಕ ಎಕೆ ಆಂಟನಿ ಅವರ ಪುತ್ರ, ಅನಿಲ್ ಆಂಟೋನಿ ಬಿಜೆಪಿ ಸೇರಿದ್ದಾರೆ. ಈಗ ಪ್ರಧಾನಿ ಮೋದಿ ಈಸ್ಟರ್ ಸಂದರ್ಭದಲ್ಲಿ ಚರ್ಚ್ ಗೆ ಭೇಟಿ ನೀಡಿದ್ದಾರೆ.
Thank you very much for sharing, I learned a lot from your article. Very cool. Thanks. nimabi