Tirumala: ತಿರುಪತಿಗೆ ತೆರಳುವ ಭಕ್ತರಿಗೆ ಮಹತ್ವದ ಮಾಹಿತಿ ಇಲ್ಲಿದೆ!!
Tirumala : ತಿರುಪತಿ ತಿಮ್ಮಪ್ಪನ ದೇವಾಲಯವು (tirupati temple) ಅತ್ಯಂತ ಜನಪ್ರಿಯ ದೇವಾಲಯವಾಗಿದೆ. ಈ ದೇವಾಲಯಕ್ಕೆ ಎಣಿಕೆಗೂ ಮೀರಿದ ಭಕ್ತರು ಭೇಟಿ ನೀಡುತ್ತಾರೆ. ಭಕ್ತರು ತಮ್ಮೆಲ್ಲಾ ಇಚ್ಛೆಯನ್ನು ಈಡೇರಿಸುವಂತೆ ಭಗವಂತನಲ್ಲಿ ಬೇಡಿಕೊಂಡು ಇಚ್ಛೆ ಫಲಿಸಿದ ನಂತರ ದೇವಾಲಯದ (Tirumala temple) ಹುಂಡಿಗೆ ತಮ್ಮ ದಾನವನ್ನು ನೀಡುತ್ತಾರೆ. ಸದ್ಯ ತಿರುಪತಿಗೆ ತೆರಳುವ ಭಕ್ತರಿಗೆ ಮಹತ್ವದ ಮಾಹಿತಿ ಇಲ್ಲಿದೆ.
ಕಳೆದ ಕೆಲ ದಿನಗಳಿಂದ ತಿರುಪತಿಗೆ ತೆರಳುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಟಿಟಿಡಿಯು (TTD) ಭಕ್ತರಿಗಾಗಿ ಹಲವು ಸೌಲಭ್ಯಗಳನ್ನು ಒದಗಿಸಿದೆ. ಮಾತೃಶ್ರೀ ತಾರಿಗೊಂಡ ವೆಂಗಮಾಂಬ ಅನ್ನಪ್ರಸಾದ ಕಟ್ಟಡದಲ್ಲಿ ಭಕ್ತರಿಗೆ ಅನ್ನ, ಹಾಲು ಮತ್ತು ನೀರಿನ ಸೌಲಭ್ಯಗಳ ಮಾಡಲಾಗಿದೆ. ಜೊತೆಗೆ ತಿರುಮಲದ ಅನ್ನಪ್ರಸಾದ ಕೌಂಟರ್‌ಗಳು, ನಾರಾಯಣಗಿರಿ ಉದ್ಯಾನವನಗಳು ಮತ್ತು ಭಕ್ತರ ದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ಅನ್ನ, ಹಾಲು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಮಾತೃಶ್ರೀ ತಾರಿಗೊಂಡ ವೆಂಗಮಾಂಬ ಅನ್ನಪ್ರಸಾದ ಸಮುದಾಯದಲ್ಲಿ ಮಧ್ಯಾಹ್ನ ಸುಮಾರು 79 ಸಾವಿರಕ್ಕೂ ಹೆಚ್ಚು ಜನರಿಗೆ ಅನ್ನ ಪ್ರಸಾದ ವಿತರಿಸಲಾಯಿತು. ಜೊತೆಗೆ ಮಕ್ಕಳಿಗೆ ಕಾಲ ಕಾಲಕ್ಕೆ ಹಾಲು ನೀಡಲಾಗುತ್ತದೆ. ವೈಕುಂಠಂ ಸರತಿ ಸಾಲಿನಲ್ಲಿ 80 ಸಾವಿರ ಜನರಿಗೆ ಅನ್ನ ಪ್ರಸಾದ ವಿತರಿಸಲಾಯಿತು.
ಇನ್ನು ದೇವರ ದರ್ಶನಕ್ಕೆ ತೆರಳುವ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ, ಸರತಿ ಸಾಲಿನಲ್ಲಿ ಯಾವುದೇ ಕಾಲ್ತುಳಿತ ಸಂಭವಿಸದಂತೆ ಟಿಟಿಡಿ ವಿಜಿಲೆನ್ಸ್ ಮತ್ತು ಪೊಲೀಸ್ ಸಿಬ್ಬಂದಿ ಬಿಗಿ ಭದ್ರತೆ ಇದೆ.
“ಶ್ರೀವಾರಿ ಸೇವಕರು ಅನ್ನಪ್ರಸಾದ, ಆರೋಗ್ಯ ಮತ್ತು ಜಾಗ್ರತೆ ಇಲಾಖೆಗಳ ಮೇಲೆ ವಿಶೇಷ ಗಮನಹರಿಸಿ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ತಿರುಪತಿಗೆ ತೆರಳುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಭಕ್ತಾದಿಗಳ ವಿಪರೀತ ದಟ್ಟಣೆಯಿಂದಾಗಿ, 300 ರೂ. ವಿಶೇಷ ಪ್ರವೇಶ ದರ್ಶನ ಟೋಕನ್‌ಗಳು, ಎಸ್‌ಎಸ್‌ಡಿ ಟೋಕನ್‌ಗಳು ಮತ್ತು ದೈವಿಕ ದರ್ಶನ ಟೋಕನ್‌ಗಳನ್ನು ಹೊಂದಿರುವ ಭಕ್ತರು ಮಾತ್ರ ತಿರುಮಲಕ್ಕೆ ಬರಬೇಕು ಎಂದು ಟಿಟಿಡಿ ಮನವಿ ಮಾಡಿದೆ.
ಟಿಟಿಡಿ EO ಶ್ರೀ ಎ.ವಿ.ಧರ್ಮಾ ರೆಡ್ಡಿ ಅವರ ಆದೇಶದಂತೆ, JEO ಶ್ರೀ ವೀರಬ್ರಹ್ಮ ಅವರ ಅಧೀನದಲ್ಲಿರುವ ಎಂಜಿನಿಯರಿಂಗ್, ಆರೋಗ್ಯ, ಅನ್ನಪ್ರಸಾದ, ವಿಜಿಲೆನ್ಸ್ ಮತ್ತು ವೈದ್ಯಕೀಯ ಇಲಾಖೆಗಳ ಹಿರಿಯ ಅಧಿಕಾರಿಗಳು ಭಕ್ತರ ಸೌಲಭ್ಯಗಳು ಮತ್ತು ಸರತಿ ಸಾಲುಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಭಕ್ತರ ಸುರಕ್ಷತೆಗೆ ಎಲ್ಲಾ ರೀತಿಯಲ್ಲೂ ಕ್ರಮ ಕೈಗೊಳ್ಳುತ್ತಿದ್ದಾರೆ.
ಇದನ್ನು ಓದಿ : Xiaomi Smart Audio Glasses Launch: ಶಿಯೋಮಿಯಿಂದ ಹೊಸ ಕನ್ನಡಕ ಬಿಡುಗಡೆ! ಇದರ ಪ್ರಯೋಜನ ಕೇಳಿದರೆ ನೀವೇ ಅಚ್ಚರಿ ಪಡ್ತೀರ!
Can you be more specific about the content of your article? After reading it, I still have some doubts. Hope you can help me.