Courses after 2nd puc: ಸೆಕೆಂಡ್ ಪಿಯುಸಿಯಲ್ಲಿ 50% ಗಿಂತ ಕಡಿಮೆ ಮಾರ್ಕ್ಸ್ ಬಂದರೆ, ಈ ಕೋರ್ಸ್ ಗಳ ಆಯ್ಕೆ ಬೆಸ್ಟ್!!
Courses after 2nd puc: ಈಗಾಗಲೇ ಸೆಕೆಂಡ್ ಪಿಯುಸಿ ವಾರ್ಷಿಕ ಪರೀಕ್ಷೆ (second puc annual exam) ಮುಕ್ತಾಯವಾಗಿದೆ. ವಿದ್ಯಾರ್ಥಿಗಳೆಲ್ಲಾ ಫಲಿತಾಂಶಕ್ಕಾಗಿ (second puc result) ಎದುರುನೋಡುತ್ತಿದ್ದಾರೆ. ಈ ಮಧ್ಯೆ ವಿದ್ಯಾರ್ಥಿಗಳು, ಪೋಷಕರು ಪಿಯುಸಿ ಬಳಿಕ ಮುಂದೇನು? ಎಂಬ ಬಗ್ಗೆ ಚಿಂತಾಕ್ರಾಂತರೂ ಆಗಿದ್ದಾರೆ. ಇನ್ನು 2nd PUC ಪರೀಕ್ಷೆಯಲ್ಲಿ ಶೇ.50ಕ್ಕಿಂತ ಕಡಿಮೆ ಅಂಕಗಳು ಬಂದ್ರೆ ಮುಂದೆ ಯಾವ ಕೋರ್ಸ್ (Courses after 2nd puc) ಮಾಡಬೇಕು ಎಂಬುದರ ಮಾಹಿತಿ ಇಲ್ಲಿದೆ.
ವೆಬ್ ಡಿಸೈನರ್ (Web designer): ವೆಬ್ ಡಿಸೈನರ್ ವೆಬ್‌ಸೈಟ್‌ನ ವಿನ್ಯಾಸವನ್ನು ರಚಿಸುತ್ತಾರೆ. ಡಿಜಿಟಲೀಕರಣದ ಈ ಯುಗದಲ್ಲಿ ಪ್ರತಿ ಕಂಪನಿಗೆ ಉತ್ತಮ ವೆಬ್ ಡಿಸೈನರ್ ಅಗತ್ಯವಿದೆ. ಇದು ಹೆಚ್ಚು ಬೇಡಿಕೆ ಇರುವ ವೃತ್ತಿಯಾಗಿದೆ. ನೀವು ವೆಬ್ ಡಿಸೈನರ್ ಆಗಿ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದು. ಅಲ್ಲದೇ, ಉತ್ತಮ ವೇತನವೂ ಇದೆ.
ಈವೆಂಟ್ ಮ್ಯಾನೇಜ್ ಮೆಂಟ್: ಸಭೆ, ಸಮಾರಂಭಗಳನ್ನು ಆಯೋಜಿಸುವುದು ಇವೆಂಟ್ ಮ್ಯಾನೇಜ್‌ಮೆಂಟ್ (event management). ದಿನೇ ದಿನೇ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳ ಪೈಕಿ ಇದು ಕೂಡ ಒಂದು. ಈವೆಂಟ್ ಮ್ಯಾನೇಜ್ ಮೆಂಟ್ ಕೋರ್ಸ್ ನಂತರ, ವಿದ್ಯಾರ್ಥಿಗಳು ಈವೆಂಟ್ ಗಳನ್ನು ನಿರ್ವಹಿಸಲು ಅಥವಾ ಯಾವುದೇ ಕಂಪನಿಗೆ ಸೇರಬಹುದು. ಇದಕ್ಕಾಗಿ ಅನೇಕ ಕೋರ್ಸ್ ಗಳನ್ನು ಸಹ ನಡೆಸಲಾಗುತ್ತಿದೆ. ಡಿಪ್ಲೊಮಾ ಅಥವಾ ಪದವಿ ಕೋರ್ಸ್ ಮಾಡಬಹುದು.
ಅನಿಮೇಷನ್: ಅನಿಮೇಷನ್ (animation) ಎನ್ನುವುದು ಚಲಿಸುವ ಚಿತ್ರಗಳನ್ನು ಸೂಚಿಸುತ್ತದೆ. ಕಾರ್ಟೂನ್ಗಳನ್ನು ತಯಾರಿಸುವ ಕೆಲಸ ಇವರದ್ದಾಗಿರುತ್ತದೆ, ಅದನ್ನೇ ಕಲಿಸಿಕೊಡಲಾಗುತ್ತದೆ. ಆದ್ದರಿಂದ ಅನಿಮೇಷನ್ ಕ್ಷೇತ್ರವು ಎಲ್ಲಾ ವಿದ್ಯಾರ್ಥಿಗಳಿಗೆ (students) ಸಹಾಯವಾಗುತ್ತದೆ ಮತ್ತು ಭವಿಷ್ಯ ರೂಪಿಸಿಕೊಳ್ಳುವಲ್ಲಿ ಉತ್ತಮ ಉದ್ಯೋಗ ಕೂಡಾ ಇದರಿಂದ ಸಿಗುತ್ತದೆ. ಅನಿಮೇಷನ್ ಕಲಿತವರು ಸುಲಭವಾಗಿ ವರ್ಷಕ್ಕೆ 15 ಲಕ್ಷ ಸಂಬಳ ಪಡೆಯುತ್ತಾರೆ.
ಏರ್ ಹೋಸ್ಟೆಸ್ / ಕ್ಯಾಬಿನ್ ಸಿಬ್ಬಂದಿ: ಉತ್ತಮ ಸಂವಹನ ಕೌಶಲ್ಯ ಮತ್ತು ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದರೆ ಗಗನಸಖಿ ಮತ್ತು ಕ್ಯಾಬಿನ್ ಸಿಬ್ಬಂದಿಯಾಗಿ ವೃತ್ತಿಜೀವನವನ್ನು ಮಾಡಬಹುದು. ಪಿಯುಸಿ ನಂತರದ ಕೋರ್ಸ್ ಗಳಲ್ಲಿ ಇದೂ ಉತ್ತಮ ಆಯ್ಕೆಯಾಗಿದೆ.
ಪ್ರಯಾಣ ಮತ್ತು ಪ್ರವಾಸೋದ್ಯಮ: ಪ್ರಯಾಣ ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಪದವಿ, ಡಿಪ್ಲೊಮಾಗಳು ಇದ್ದು, ನೀವೂ ಕೂಡ ಈ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು.
ಕಲೆ ಪ್ರದರ್ಶನ: ಸದ್ಯ ಹಲವು ಸಂಸ್ಥೆಗಳು ಪ್ರದರ್ಶನ ಕಲೆಗಳ ಕೋರ್ಸ್ ಗಳನ್ನು ನೀಡುತ್ತವೆ. ಈ ಕ್ಷೇತ್ರದಲ್ಲಿ ನೃತ್ಯದ ಜೊತೆಗೆ ನಟನೆ ಮತ್ತು ರಂಗಭೂಮಿಯ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ. ನಟನೆಯಲ್ಲಿ ಆಸಕ್ತಿ ಇದ್ದವರಿಗೆ ಇದು ಉತ್ತಮ ಕೋರ್ಸ್ ಆಗಿದೆ.
ಛಾಯಾಗ್ರಹಣ: ಛಾಯಾಗ್ರಾಹಕ ವೃತ್ತಿಯು ಛಾಯಾಗ್ರಹಣದಲ್ಲಿ ಉತ್ಸಾಹವನ್ನು ಹೊಂದಿರುವ ಮತ್ತು ಸೃಜನಶೀಲರಿಗೆ ಸೂಕ್ತವಾಗಿದೆ. ಈ ಕೌಶಲ್ಯಗಳು ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳು ಛಾಯಾಗ್ರಹಣ (Photography Course) ಮತ್ತು ಸಿನಿಮಾಟೋಗ್ರಫಿ ವಿಜ್ಞಾನದಲ್ಲಿ ಕೋರ್ಸ್ ಅನ್ನು ಅನುಸರಿಸುವ ಮೂಲಕ ಲಲಿತಕಲೆ ಕ್ಷೇತ್ರದಲ್ಲಿ ಉತ್ತಮ ವೃತ್ತಿಜೀವನವನ್ನು ಮಾಡಬಹುದು. ಈ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಹಲವು ಕೋರ್ಸ್ ಗಳಿವೆ.
ಫ್ಯಾಷನ್ ಡಿಸೈನರ್: ಫ್ಯಾಷನ್ ಡಿಸೈನರ್ (fashion designer) ಹೆಚ್ಚು ಬೇಡಿಕೆಯಲ್ಲಿರುವ ಹುದ್ದೆಯಾಗಿದೆ. ಇತ್ತೀಚೆಗೆ ಈ ಹುದ್ದೆಗೆ ಎಲ್ಲರೂ ಮುನ್ನುಗ್ಗುತ್ತಿದ್ದಾರೆ. ಫ್ಯಾಷನ್ ಡಿಸೈನರ್ ಕೋರ್ಸ್ ಮಾಡಿ, ಬಹುಬೇಗನೆ ಹುದ್ದೆ ಗಿಟ್ಟಿಸಿಕೊಳ್ಳುತ್ತಾರೆ. ಈ ಕ್ಷೇತ್ರದಲ್ಲಿ ವಿದ್ಯಾರ್ಹತೆಗಿಂತ ವಿನ್ಯಾಸ ಕಲೆಯೇ ಮುಖ್ಯ. ಒಮ್ಮೆ ಈ ಕ್ಷೇತ್ರದಲ್ಲಿ ಫೇಮಸ್ ಆದಲ್ಲಿ ಲಕ್ಷ, ಕೋಟಿಗಳಲ್ಲಿ ಗಳಿಸಬಹುದು.
I don’t think the title of your article matches the content lol. Just kidding, mainly because I had some doubts after reading the article.
Thank you for your sharing. I am worried that I lack creative ideas. It is your article that makes me full of hope. Thank you. But, I have a question, can you help me?