Yamaha Aerox 155 : ದ್ವಿಚಕ್ರ ವಾಹನ ಪ್ರಿಯರೇ ಗಮನಿಸಿ! ಹೊಚ್ಚ ಹೊಸ ಮಹಾ ಏರೋಕ್ಸ್ 4 ಬಣ್ಣಗಳಲ್ಲಿ ನಿಮಗಾಗಿ!

Yamaha Aerox 155 : ಏನೇ ಆಗಲಿ ದ್ವಿಚಕ್ರ ವಾಹನ ಒಂದು ನಮ್ಮಲ್ಲಿ ಇದ್ದರೆ ಒಂದು ತರಹ ನಿರಾಳ ಅನಿಸುತ್ತೆ . ಪ್ರಸ್ತುತ ನಿಮಗೂ ಹೊಸ ವಾಹನ ಖರೀದಿ ಮಾಡಲು ಸಾಕಷ್ಟು ಆಯ್ಕೆಗಳಿವೆ.

ಹೊಸ ಹೊಸ ವಾಹನಗಳು ಮಾರುಕಟ್ಟೆ (market )ಪ್ರವೇಶಿಸುತ್ತಿದೆ. ಪೈಪೋಟಿ ಕೂಡ ಹೆಚ್ಚಾಗುತ್ತಿದೆ. ಇದೀಗ ಅತ್ಯಾಧುನಿಕ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (TCS) ಒಳಗೊಂಡ ಉತ್ತಮ ಸ್ಪೋರ್ಟ್ಸ್ ಲುಕ್ ಹೊಂದಿರುವ ಸ್ಕೂಟರ್ ಬಗ್ಗೆ ತಿಳಿಯೋಣ.

ಹೌದು, ಯಮಹಾ ಕಂಪನಿಯು ಭಾರತದಲ್ಲಿ 2023 ಏರೋಕ್ಸ್ 155 ಸ್ಕೂಟರ್ ಬಿಡುಗಡೆಗೊಳಿಸಿದೆ. ಸ್ಕೂಟರ್‌ನ ಎಕ್ಸ್- ಶೋರೂಮ್ ಬೆಲೆ(ನವದೆಹಲಿ) 1,42,800 ರೂ. ಆಗಿದೆ.

ಯಮಹಾ ಏರೋಕ್ಸ್ 155 (Yamaha Aerox 155) ನ ಫ್ರೆಂಟ್ ಡಿಸ್ಕ್ ಬ್ರೇಕ್, ರೇರ್ ಡ್ರಮ್ ಯುನಿಟ್‌ನೊಂದಿಗೆ ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಮ್ ಹೊಂದಿದ್ದು, ಒಬಿಡಿ2-ಕಾಂಪ್‌ಲೈಂಟ್ ಎಂಜಿನ್ ಅಳವಡಿಸಲಾಗಿದೆ. ಎಲ್‌ಇಡಿ ಹೆಡ್‌ಲೈಟ್ ಸೇರಿದಂತೆ ಅತ್ಯಾಧುನಿಕತೆಯ ಹಲವಾರು ಫೀಚರ್‌ಗಳನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ.

ಯಮಹಾ ಏರೋಕ್ಸ್ 155 ಸ್ಕೂಟರ್ 155cc ಬ್ಲೂ ಕೋರ್ ಲಿಕ್ವಿಡ್ ಕೂಲ್ಡ್, ಪ್ಯೂಯಲ್ ಇಂಜೆಕ್ಸೆಡ್ ಎಂಜಿನ್‌ನೊಂದಿಗೆ ಬರುತ್ತದೆ. ಇದು 8,000 rpm ನಲ್ಲಿ 15 bhp ಪವರ್ ಮತ್ತು 6,500 rpm ನಲ್ಲಿ 13.9 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ OBD-2 ಕಂಪ್ಲೆಂಟ್ ಎಂಜಿನ್, ಈಗ E20 ಇಂಧನದಲ್ಲಿಯೂ ಸಹ ಚಲಿಸುತ್ತದೆ.

ಸದ್ಯ ಗ್ರಾಹಕರಿಗೆ ಮೆಟಾಲಿಕ್ ಸಿಲ್ವರ್, ಮೆಟಾಲಿಕ್ ಬ್ಲ್ಯಾಕ್, ರೇಸಿಂಗ್ ಬ್ಲೂ ಮತ್ತು ಗ್ರೇ ವರ್ಮಿಲಿಯನ್ ಎಂಬ ನಾಲ್ಕು ಬಣ್ಣಗಳಲ್ಲಿ ಏರೋಕ್ಸ್ 155 ಲಭ್ಯವಿದೆ.

 

ಇದನ್ನು ಓದಿ :  Kantara Film : ಮನೆ ಮನೆಗೆ ಬರುತ್ತಿದೆ ತುಳುವಿನ ‘ಕಾಂತಾರ’ !

1 Comment
  1. 注册Binance says

    Your article helped me a lot, is there any more related content? Thanks!

Leave A Reply

Your email address will not be published.