H.D. Kumaraswamy: ಹೆಚ್ ಡಿಕೆ ಅವರನ್ನು ಮದುವೆಯಾಗುವ ಮೊದಲು ಅನಿತಾ ಕುಮಾರಸ್ವಾಮಿ ಹಾಕಿದ ಷರತ್ತು ಏನು ಗೊತ್ತಾ?
H.D.Kumaraswamy : ಈಗಾಗಲೇ ಚುನಾವಣೆಯ ಬಿಸಿ ಎಲ್ಲೆಡೆ ಗರಿಗೆದರಿದ್ದು, ಬಿಜೆಪಿ (BJP), ಕಾಂಗ್ರೆಸ್ (Congress) ಪಕ್ಷದ ಅಭ್ಯರ್ಥಿಗಳ ಪಟ್ಟಿ ಸಿದ್ಧ ಪಡಿಸಿ ಜನರ ಮನವೊಲಿಸುವ ತಂತ್ರ ರೂಪಿಸುತ್ತಿದೆ. ಇದರ ನಡುವೆ ಮುಂಬರುವ ವಿಧಾನಸಭಾ ಚುನಾವಣೆಗೆ (Election 2023)ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು (H.D.Kumaraswamy) ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಹರಸಾಹಸ ಪಡುತ್ತಿದ್ದು, ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ನನ್ನನ್ನು ಮದುವೆಯಾಗುವ (Marriage) ಮುನ್ನ ಅನಿತಾ ಅವರು ರಾಜಕೀಯಕ್ಕೆ (Politics) ಹೋಗಬಾರದು ಎಂದು ಷರತ್ತು ಹಾಕಿದ್ದರು ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ (H. D. Kumaraswamy) ತಿಳಿಸಿದ್ದಾರೆ. ತುಮಕೂರಿನ () ಮಧುಗಿರಿಯ ಕೈಮರದಲ್ಲಿ
2008ರ ಉಪಚುನಾವಣೆಯಲ್ಲಿ ಇತರೆ ಪಕ್ಷಗಳಿಗಿಂತ ಮೊದಲೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದ ಜೆಡಿಎಸ್(JDS), ಇದೀಗ ಎರಡನೇ ಪಟ್ಟಿ ಬಿಡುಗಡೆಗೆ ತಯಾರಿ ನಡೆಸುತ್ತಿದೆ. ಇದರ ನಡುವೆಯೇ ಹೆಚ್ ಡಿ.ಕೆ ಅವರು ಕುತೂಹಲಕಾರಿ ಸಂಗತಿಯನ್ನು ಬಹಿರಂಗ ಮಾಡಿದ್ದಾರೆ. ಕುಮಾರಸ್ವಾಮಿಯವರು ತುಮಕೂರಿನ(Tumakuru) ಮಧುಗಿರಿ ತಾಲೂಕಿನ ಡಿ ಕೈಮರದಲ್ಲಿ ಆದಿತ್ಯವಾರ ನಡೆದ ಕಾರ್ಯಕ್ರಮದ ಸಂದರ್ಭ ಜೆಡಿಎಸ್ (JDS) ಕಾರ್ಯಕರ್ತರನ್ನು ಉದ್ದೇಶಿ ಮಮಾತನಾಡಿದ್ದು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಕೊಂಡವಾಡಿ ಚಂದ್ರಶೇಖರ್ಗೆ ಸ್ವಾಗತ ಕೋರಿದ್ದಾರೆ. ದೇವೇಗೌಡರ (HD Devegowda) ಸಾವನ್ನು ಬಯಸಿದ್ದವರಿಗೆ ತಕ್ಕ ಪಾಠ ಕಲಿಸಬೇಕು. ಆ ಮೂಲಕ ದೇವೇಗೌಡರ ಹೆಸರನ್ನು ಉಳಿಸಬೇಕಾಗಿದೆ ಎಂದು ಮನವಿ ಸಲ್ಲಿಸಿದರು. ಈ ವೇಳೆ ವಿಶೇಷ ವಿಚಾರ ಕೂಡ ಪ್ರಸ್ತಾಪ ಮಾಡಿದ್ದಾರೆ.
ತಾವು ರಾಜಕೀಯಕ್ಕೆ ಬರುವುದು ಅನಿತಾ ಅವರಿಗೆ ಒಂಚೂರು ಇಷ್ಟವಿರಲಿಲ್ಲ. ಹೀಗಾಗಿ ಅನಿತಾ (Anitha)ಅವರು ಕುಮಾರಸ್ವಾಮಿ ಅವರಿಗೆ ರಾಜಕೀಯಕ್ಕೆ ಎಂಟ್ರಿ ಕೊಡುವುದಿಲ್ಲ ಎಂದಾದರೆ ಮಾತ್ರ ಮದುವೆ (Marraige)ಆಗುತ್ತೇನೆಂದು ಷರತ್ತು (Condition)ಕೂಡ ಹಾಕಿದ್ದರಂತೆ. ಮಧುಗಿರಿ ಕ್ಷೇತ್ರದಲ್ಲಿ ಆ ವೇಳೆ ದೊಡ್ಡ ಹೋರಾಟವಿತ್ತು. ಒಂದು ಕಡೆ ನಮ್ಮ ಕುಟುಂಬದ ಶಂಕರಣ್ಣ ನಿಂತಿದ್ದರು. ಇನ್ನೊಂದೆಡೆ ಕೆ.ಎನ್ ರಾಜಣ್ಣ ಇದ್ದರು. ಇಂದು ದೇವರ ಇಚ್ಛೆಯ ಅನುಸಾರ ಅನಿತಾ ಅವರೂ ಕೂಡ ರಾಜಕೀಯಕ್ಕೆ ಎಂಟ್ರಿ ನೀಡಿದ್ದಾರೆ.
2008ರ ವಿಧಾನಸಭಾ ಚುನಾವಣೆಯಲ್ಲಿ ಅನಿತಾ ಅವರನ್ನು ಚುನಾವಣೆಗೆ ಸ್ಪರ್ಧೆ ಮಾಡಿಸಲು ಯೋಜನೆ ರೂಪಿಸಿದಾಗ ಮಗ ನಿಖಿಲ್, ನೀವು ಚುನಾವಣೆಗೆ ಸ್ಪರ್ಧೆ ಮಾಡುವುದು ಬೇಡ ಎಂದಿದ್ದರಂತೆ. ಅಪ್ಪ, ಪ್ರತಿಷ್ಠೆಗಾಗಿ ನಿಮ್ಮನ್ನು ಚುನಾವಣೆಗೆ ನಿಲ್ಲಿಸುತ್ತಿದ್ದು, ಹೀಗಾಗಿ ನೀವು ಸ್ಪರ್ಧಿಸಬೇಡಿ ಎಂದು ತಿಳಿಸಿದ್ದ. ಆದರೂ ಕೂಡ ಅನಿತಾ ಸ್ಪರ್ಧೆ ಮಾಡಿ ಗೆದ್ದು ಬಂದರು ಎಂಬುದಾಗಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಹಾಸನದ ರಾಜಕೀಯದಲ್ಲಿ ಬಹಳ ಕುತೂಹಲ ಮೂಡಿಸಿದೆ. ಇದಕ್ಕೆ ಅಂತಿಮ ತೆರೆ ಎಳೆಯುವುದಾಗಿ ಇದೆ ವೇಳೆ ಹೆಚ್ಡಿಕೆ ತಿಳಿಸಿದ್ದಾರೆ.
ಇದನ್ನು ಓದಿ : Bank Jobs: ಬ್ಯಾಂಕಿಂಗ್ ಉದ್ಯೋಗಕ್ಕೆ ಅರ್ಜಿ ಆಹ್ವಾನ! 3.50 ಲಕ್ಷ ಸಂಬಳ, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ!