Renu Desai: ನೀವು ಕೂಡ ಒಂದು ಹೆಣ್ಣಿಗೆ ಹುಟ್ಟಿದವರಲ್ಲವೇ?–ಪವನ್ ಕಲ್ಯಾಣ್ ಅಭಿಮಾನಿಗಳ ವಿರುದ್ಧ ಮಾಜಿ ಪತ್ನಿ ರೇಣು ದೇಸಾಯಿ ಗರಂ!!
Renu Desai: 2009 ರಲ್ಲಿ ನಟ ಪವನ್ ಕಲ್ಯಾಣ್ (Pawan Kalyan) ಅವರು ರೇಣು ದೇಸಾಯಿ (Renu Desai) ಅವರನ್ನು ವಿವಾಹವಾದರು. ಇವರಿಗೆ ಅಕಿರಾ ಮತ್ತು ಆಧ್ಯ (aadhya) ಎಂಬ ಇಬ್ಬರು ಮಕ್ಕಳಿದ್ದಾರೆ. ಆದರೆ, ಪವನ್ ಕಲ್ಯಾಣ್ ಮತ್ತು ರೇಣು 2012 ರಲ್ಲಿ ವಿಚ್ಛೇದನ ಪಡೆದಿದ್ದು, ನಂತರ ನಟ ಪವನ್ ಅನ್ನಾ ಲೆಜ್ನೆವಾ ಅವರನ್ನು ವಿವಾಹವಾದರು. ಇದೀಗ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ನೆಟ್ಟಿಗರ ವಿರುಧ್ಧ ಕಿಡಿಕಾರಿದ್ದಾರೆ. ಪವನ್ ಅಭಿಮಾನಿಗಳ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ.
ನಟಿ ರೇಣು ದೇಸಾಯಿ ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ಏನಾದರೊಂದು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅದಕ್ಕೆ ನಟ ಪವನ್ ಅಭಿಮಾನಿಗಳು ಕೆಲವರು ಪಾಸಿಟಿವ್ ಇನ್ನೂ ಕೆಲವರು ನೆಗೆಟಿವ್ ಕಾಮೆಂಟ್ ಮಾಡುತ್ತಾರೆ. ಅಂತೆಯೇ ಈ ಬಾರಿಯೂ ಪವನ್ ಅಭಿಮಾನಿಯೊಬ್ಬ ರೇಣು ದೇಸಾಯಿ ಅವರಿಗೆ ಬೇಸರವಾಗುವ ಕಾಮೆಂಟ್ ಮಾಡಿದ್ದು, ನಟಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಏ.8 (ನಿನ್ನೆ) ರಂದು ರೇಣು ಅವರ ಪುತ್ರ ಅಕಿರ ನಂದನ್ (akira Nandan) ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಕಿರನಿಗೆ ನಟ ನಾಗಬಾಬು, ಸಾಯಿಧರಮ್ ತೇಜ್, ವರುಣ್ ತೇಜ್ ಸೇರಿದಂತೆ ಪವನ್ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಪವನ್ ಅಭಿಮಾನಿಗಳ ಪೈಕಿ ಒಬ್ಬ ಮಾಡಿರುವ ಕಾಮೆಂಟ್ ನಟಿಯ ಮನಸ್ಸಿಗೆ ಘಾಸಿಗೊಳಿಸಿದ್ದು,“ ಮೇಡಂ ಇದು ಅತಿಯಾಯಿತು. ಒಂದು ಬಾರಿಯಾದರೂ ಅಕಿರ ನಂದನ್ ಅವರನ್ನು ನಮಗೆ ತೋರಿಸಿ, ಪವನ್ ಅಣ್ಣ ಅವರ ಮಗನನ್ನು ನೋಡುವ ಆಸೆ ನಮಗೂ ಇದೆ. ಅಕಿರ ಅವರ ವಿಡಿಯೋವನ್ನು ಪೋಸ್ಟ್ ಮಾಡುತ್ತಿರಿ” ಎಂದು ತೆಲುಗಿನಲ್ಲಿ ಪವನ್ ಕಲ್ಯಾಣ್ ಅಭಿಮಾನಿಯೊಬ್ಬ ಕಾಮೆಂಟ್ ಮಾಡಿದ್ದಾರೆ.
ಪ್ರತೀಬಾರಿ ಕಾಮೆಂಟ್ ನಿರ್ಲಕ್ಷಿಸುತ್ತಿದ್ದ ನಟಿ ಈ ಬಾರಿ ಈ ಕಾಮೆಂಟ್‌ಗೆ ಅಸಮಾಧಾನಗೊಂಡ ಖಾರವಾಗಿ ಉತ್ತರಿಸಿದ್ದು, “ಅಕಿರ ನಿನ್ನ ಅಣ್ಣನ (ಪವನ್ ಕಲ್ಯಾಣ್) ಮಗನಾ? ಅಕಿರ ನನ್ನ ಪುತ್ರ ನೀವು ಕೂಡ ಒಬ್ಬ ತಾಯಿಗೆ ಹುಟ್ಟಿದವರಲ್ಲವೇ? ನೀವು ಅವರ
ಹಾರ್ಡ್‌ಕೋರ್ ಅಭಿಮಾನಿಗಳು ಎಂದು ನಾನು
ಅರ್ಥಮಾಡಿಕೊಂಡಿದ್ದೇನೆ, ಆದರೆ ನೀವು ನಂಬಿಕೆಗಿಂತ ಹೆಚ್ಚು
ಸಂವೇದನಾಶೀಲರಾಗಿದ್ದೀರಿ. ನಾನು ಈ ರೀತಿಯ ಕಾಮೆಂಟ್‌ಗಳನ್ನು
ನಿರ್ಲಕ್ಷಿಸುತ್ತಿರುತ್ತೇನೆ, ಅಳಿಸುತ್ತಿರುತ್ತೇನೆ ಮತ್ತು
ನಿರ್ಬಂಧಿಸುತ್ತಿರುತ್ತೇನೆ ಆದರೆ ಇಂದು ನನ್ನ ಮಗನ
ಹುಟ್ಟುಹಬ್ಬವಾದ್ದರಿಂದ ಈ ಸೂಕ್ಷ್ಮವಲ್ಲದ ಕಾಮೆಂಟ್ ಅನ್ನು ಓದಿದೆ ಮತ್ತು ನನಗೆ ನೋವುಂಟಾಯಿತು” ಎಂದು ರೇಣು ದೇಸಾಯಿ ತಮಗಾದ ಬೇಸರವನ್ನು ತೋಡಿಕೊಂಡಿದ್ದಾರೆ. ಸದ್ಯ ಈ ಪ್ರತಿಕ್ರಿಯೆ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ: Prakash Raj on PM Modi : ಬಂಡೀಪುರ ಫೈಲ್ಸ್ ನೋಡಲು ಮರೆಯದಿರಿ- ಮೋದಿಗೆ ವ್ಯಂಗ್ಯ ಮಾಡಿದ ಪ್ರಕಾಶ್ ರಾಜ್
Your article helped me a lot, is there any more related content? Thanks!