PM Modi selfie with BJP worker: ಬಿಜೆಪಿಯ ವಿಕಲಚೇತನ ಕಾರ್ಯಕರ್ತನೊಂದಿಗೆ ಪ್ರಧಾನಿ ಮೋದಿ ಸೆಲ್ಫಿ, ಹಿಂದಿದೆ ಒಂದು ವಿಶೇಷ ಕಾರಣ !

PM Modi selfie with BJP worker: ಶನಿವಾರ ತಮಿಳುನಾಡಿನ ಚೆನ್ನೈಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಬಿಜೆಪಿಯ ವಿಕಲಚೇತನ ಕಾರ್ಯಕರ್ತನ ಜೊತೆ ಸೆಲ್ಫಿ ತೆಗೆದುಕೊಂಡಿದ್ದು, ಆವರದನ್ನು ‘ಸ್ಪೆಷಲ್​ ಸೆಲ್ಫಿ ಎಂದು ಕರೆದಿದ್ದಾರೆ.

 

ತಮಿಳುನಾಡಿನ ಬಿಜೆಪಿ ಕಾರ್ಯಕರ್ತ ತಿರು ಎಸ್ ಮಣಿಕಂದನ್ (Tamilnadu BJP Worker Manikandan) ಅವರೊಂದಿಗೆ ಪಿಎಂ ಮೋದಿ ಸೆಲ್ಫಿ (Modi selfie with BJP worker) ತೆಗೆದುಕೊಂಡಿರುವುದಕ್ಕೆ ಕಾರಣ ಕೂಡ ಇದೆ. ಮಣಿಕಂದನ್ ಅವರು ವಿಕಲಚೇತನರಾಗಿದ್ದರೂ ಕೂಡ ಆತ ಅಲ್ಲಿನ ಬೂತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ಅವರು ಅಂಗಡಿಯೊಂದನ್ನು ಕೂಡ ನಡೆಸುತ್ತಿದ್ದು ಅದರಲ್ಲಿ ಬರುವ ಲಾಭವನ್ನು ಕೂಡಾ ಅವರು ಬಿಜೆಪಿಗೆ ನೀಡುತ್ತಿದ್ದಾರೆ. ಮಣಿಕಂದನ್ ಅವರ ಈ ಕಾರ್ಯ ಪ್ರಧಾನಿಯ ಗಮನ ಸೆಳೆದಿದೆ.

ನಿನ್ನೆ ಮಣಿಕಂದನ್ ಅವರೊಂದಿಗಿನ ಸೆಲ್ಫಿ ಫೋಟೋ ಹಂಚಿಕೊಂಡು ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, “ ಒಂದು ವಿಶೇಷ ಸೆಲ್ಫಿ…. ಚೆನ್ನೈನಲ್ಲಿ ನಾನು ತಿರು ಎಸ್. ಮಣಿಕಂದನ್ ಅವರನ್ನು ಭೇಟಿಯಾದೆ. ಈರೋಡ್‌ನ ಅವರು ತಮಿಳುನಾಡು ಬಿಜೆಪಿಯ ಹೆಮ್ಮೆಯ ಕಾರ್ಯಕರ್ತ. ವಿಕಲಚೇತನರಾಗಿರುವ ಇವರು ಬೂತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತನ್ನದೇ ಆದ ಅಂಗಡಿಯನ್ನು ನಡೆಸುತ್ತಾರೆ. ಹೆಚ್ಚು ಪ್ರೇರೇಪಿಸುವ ಅಂಶವೆಂದರೆ ಅವರು ತಮ್ಮ ದೈನಂದಿನ ಲಾಭದ ಗಣನೀಯ ಭಾಗವನ್ನು ಬಿಜೆಪಿಗೆ ನೀಡುತ್ತಾರೆ” ಎಂದು ಪ್ರಧಾನಿ ಹೇಳಿದ್ದಾರೆ.

ನಿನ್ನೆ ಶನಿವಾರ ತೆಲಂಗಾಣ ಬಳಿಕ ತಮಿಳುನಾಡಿಗೆ ಭೇಟಿ ನೀಡಿ ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ಹಾಗೂ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು ಪ್ರಧಾನಿ ನರೇಂದ್ರ ಮೋದಿಯವರು. ನಂತರ ಚೆನ್ನೈ ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿ, ಚೆನ್ನೈ-ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದರು.

ಬಳಿಕ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮೋದಿ, ತಮಿಳುನಾಡಿನ ಶ್ರೀಮಂತ ಇತಿಹಾಸವನ್ನು ಹೊಗಳಿದರು. ಇದು ಭಾಷೆ ಮತ್ತು ಸಾಹಿತ್ಯದ ನಾಡು. ದೇಶಭಕ್ತಿ ಮತ್ತು ರಾಷ್ಟ್ರೀಯ ಪ್ರಜ್ಞೆಯ ಕೇಂದ್ರವಾಗಿದೆ. ದೇಶದ ಅನೇಕ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು ತಮಿಳುನಾಡಿನವರು ಎಂದು ಹೇಳಿದರು.

ಆದರೆ, ತಮಿಳುನಾಡಿನಲ್ಲಿ ಪ್ರಧಾನಿ ಮೋದಿ ಭೇಟಿಗೆ ವಿರೋಧ ಕೂಡಾ ವ್ಯಕ್ತವಾಗಿದೆ. ‘ ಗೋಬ್ಯಾಕ್ ಮೋದಿ ‘ ಎಂಬ ಹ್ಯಾಶ್ ಟ್ಯಾಗ್ ಬಳಸಿ ನೆಟ್ಟಿಗರು ಟ್ವೀಟ್ ಮಾಡಿ ಮೋದಿ ಭೇಟಿಗೆ ವಿರೋಧ ವ್ಯಕ್ತಪಡಿಸಿದ್ದರು.

1 Comment
  1. Binance创建账户 says

    Can you be more specific about the content of your article? After reading it, I still have some doubts. Hope you can help me.

Leave A Reply

Your email address will not be published.