HD Kumaraswamy: ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ಎಲ್ಲಾ ವಿದ್ಯಾರ್ಥಿನಿಯರಿಗೆ ಉಚಿತ ಎಲೆಕ್ಟ್ರಿಕ್ ಸ್ಕೂಟರ್: ಎಚ್.ಡಿ ಕುಮಾರಸ್ವಾಮಿ ಹೊಸ ಭರವಸೆ
HD Kumaraswamy : ರಾಜ್ಯ ವಿಧಾನಸಭೆ ಚುನಾವಣೆ(Karnataka Assembly Election) ನಿಮಿತ್ತ ಅಧಿಕಾರಕದ ಗದ್ದುಗೆ ಹಿಡಿಯಲು ಪಕ್ಷಗಳೆಲ್ಲವೂ ಜನರಿಗೆ ಉಚಿತ ಘೋಷಣೆಗಳು, ಹೊಸ ಹೊಸ ಯೋಜನೆಗಳ ಮೊರೆ ಹೋಗಿವೆ. ನೀತಿ ಸಂಹಿತೆ ಜಾರಿಯಾದಬಳಿಕ ಇವುಗಳೆಲ್ಲವೂ ಕೊಂಚ ಕಡಿಮೆಯಾಗಿದೆ. ಆದರೆ ಜೆಡಿಎಸ್(JDS) ಮಾತ್ರ ಇದೀಗ ಹೊಸ ಘೋಷಣೆ ಹೊರಡಿಸಿದ್ದು, ತಾನು ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಉಚಿತ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಕೊಡಲಾಗುವುದು ಎಂದು ಮಾಜಿ ಸಿಎಂ ಎಚ್. ಡಿ.ಕುಮಾರಸ್ವಾಮಿ(HD Kumaraswamy) ಅನೌನ್ಸ್ ಮಾಡಿದ್ದಾರೆ.
ಹೌದು, ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಚೇನಹಳ್ಳಿಯಲ್ಲಿ ಪಂಚರತ್ನ ರಥಯಾತ್ರೆ ಕಾರ್ಯಕ್ರವನ್ನು ಉದ್ದೇಶಿಸಿ ಮಾತನಾಡಿದ ಎಚ್.ಡಿ.ಕೆ ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಜೆಡಿಎಸ್ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಸರ್ಕಾರದ ವತಿಯಿಂದ ಕೊಡಲಾಗುವುದು ಎಂದು ಹೇಳಿದ್ದಾರೆ.
ಅಲ್ಲದೆ “ನಮ್ಮದು ಕೇವಲ ಗ್ರಾಮೀಣ ಭಾಗದ ಪಕ್ಷವಲ್ಲ. ನಗರ ಪ್ರದೇಶಕ್ಕೆ ನಮ್ಮ ಸರ್ಕಾರ ಹಾಗೂ ದೇವೆಗೌಡರು ಬಹಳಷ್ಟು ಕೆಲಸ ಮಾಡಿದ್ದಾರೆ. ಬೆಂಗಳೂರಿಗೆ ಮೆಟ್ರೋ ರೈಲು ಯೋಜನೆ ತಂದದ್ದು ನಮ್ಮ ಸರ್ಕಾರ ಮೆಟ್ರೋ ಯೋಜನೆಗೆ ಅಡಿಪಾಯ ಹಾಕಿದ್ದೇ ನಾನು. ಇದೀಗ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದೇನೆ. ನೀವು ಕೊಡುವ ಪ್ರೀತಿಯೇ ನನಗೆ ಶಕ್ತಿ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪಂಚರತ್ನ ಕಾರ್ಯಕ್ರಮಗಳನ್ನ ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದರು.
ಅಂದಹಾಗೆ ಈಗಾಗಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೆಲವು ಯೋಜನೆಗಳನ್ನು ಜಾರಿಗೊಳಿಸುವುದಾಗಿ ಘೋಷಿಸುವುದರೊಂದಿಗೆ ಪ್ರತಿ ತಿಂಗಳು ಪ್ರತೀ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ಪೂರೈಸುವ ‘ಗೃಹಜ್ಯೋತಿ’, ಪ್ರತಿ ಮನೆಯ ಮನೆಯೊಡತಿಗೆ ಮಾಸಿಕ 2,000 ರೂ. ಆರ್ಥಿಕ ನೆರವು ನೀಡುವ ‘ಗೃಹಲಕ್ಷ್ಮಿ’ ಯೋಜನೆ, ಪ್ರತಿ ತಿಂಗಳು 10 ಕಿ.ಲೋ. ಉಚಿತ ಅಕ್ಕಿ ವಿತರಣೆಯ ಆಶ್ವಾಸನೆ ಹಾಗೂ ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆಯನ್ನು ನೀಡುತ್ತೇವೆಂದು 4 ಗ್ಯಾರಂಟಿಗಳನ್ನು ಘೋಷಿಸಿದೆ.