Astrologer Copper Ring : ತಾಮ್ರದ ಉಂಗುರದಿಂದ ನಿಮ್ಮ ಅದೃಷ್ಟ ಬೆಳಗುತ್ತೆ!

Astrologer Copper Ring : ಎಷ್ಟೋ ಜನ ಬೆಳ್ಳಿಯ ಉಂಗುರ (ring) ಧರಿಸುವುದನ್ನು ನೀವು ನೋಡಿರಬಹುದು. ಹಾಗೆಯೇ ಇನ್ನು ಕೆಲವರು ತಾಮ್ರದ ಉಂಗುರ ಧರಿಸುವುದನ್ನು ಸಹ ನೀವು ನೋಡಿರಬಹುದು. ಇನ್ನೂ ಕೆಲವರು ಬೆಳ್ಳಿಯ ಅಥವಾ ತಾಮ್ರದ ಕಡಗವನ್ನು ಹಾಕುತ್ತಾರೆ. ಹಾಗಾದರೆ ಬೆಳ್ಳಿಯ ಉಂಗುರವನ್ನು (ring) ಧರಿಸಿದರೆ ಉತ್ತಮವ ಅಥವಾ ತಾಮ್ರದ ಉಂಗುರವನ್ನು ಧರಿಸಿದರೆ ಉತ್ತಮವ. ಯಾವುದು ಉತ್ತಮ ಎನ್ನುವ ಪ್ರಶ್ನೆ ನಿಮ್ಮನ್ನು ಇಷ್ಟರ ತನಕ ಕಾಡಿಲ್ಲವೇ? ಯಾವುದು ಒಳ್ಳೆಯದು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಹೌದು, ಜ್ಯೋತಿಷ್ಯದ ಪ್ರಕಾರ ನಿಮ್ಮ ಕೈಯಲ್ಲಿ ತಾಮ್ರದ ಉಂಗುರ ಅಥವಾ ಕಡಗವನ್ನು ಧರಿಸಿದರೆ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆಯಂತೆ. ತಾಮ್ರದ ಲೋಹವು ಸೂರ್ಯ (sun) ಮತ್ತು ಮಂಗಳನೊಂದಿಗೆ (Mars) ಅಭೂತಪೂರ್ವವಾದ ಸಂಬಂಧವನ್ನು ಹೊಂದಿದೆ. ತಾಮ್ರದ ಉಂಗುರ (Astrologer copper ring) ಧರಿಸಿದವರ ಅದೃಷ್ಟವು ಸೂರ್ಯನಂತೆಯೇ ಪ್ರಕಾಶಮಾನವಾಗಿ ಬೆಳಗುತ್ತದೆ ಎಂದು ಜ್ಯೋತಿಷ್ಯರು ಹೇಳುತ್ತಾರೆ.
ಇನ್ನೂ ದೇವಾಲಯಗಳಲ್ಲಿ ಬಹುತೇಕ ಜನರು ದೇವರಿಗೆ ತಾಮ್ರದ ಪಾತ್ರೆಯಲ್ಲಿ ನೀರನ್ನು ಅಭಿಷೇಕ ಮಾಡುತ್ತಾರೆ. ಇದಲ್ಲದೆ ದೇವಸ್ಥಾನದಲ್ಲಿ (temple) ಹೆಚ್ಚಾಗಿ ಎಲ್ಲವೂ ತಾಮ್ರದ ಲೋಹದಿಂದಲೇ ಸುತ್ತುವರಿದಿದೆ. ಗಂಟೆಗಳು, ವಿಗ್ರಹಗಳು ಹೆಚ್ಚಾಗಿ ತಾಮ್ರದ ಲೋಹದಿಂದ ಕೂಡಿರುತ್ತವೆ. ಹಾಗೆಯೇ ಸೂರ್ಯ ದೇವರಿಗೆ ನೀರನ್ನು ಅರ್ಪಿಸುವಾಗ ತಾಮ್ರದ ಪಾತ್ರೆಯನ್ನೇ ಬಳಸಲಾಗುತ್ತದೆ. ಬೇರೆ ಯಾವುದೇ ಬೆಳ್ಳಿಯ (silver) ಪಾತ್ರೆಯಲ್ಲಿ ಸೂರ್ಯನಿಗೆ ನೀರನ್ನು ಅರ್ಪಿಸುವುದಿಲ್ಲ.
ತಾಮ್ರದ ಉಂಗುರ ಅಥವಾ ಕಡಗವನ್ನು ಧರಿಸಿದರೆ ಆಗುವ ಪ್ರಯೋಜನ ಏನು?
ನಿಮ್ಮ ಕೈಯಲ್ಲಿ ತಾಮ್ರದ ಕಡಗ ಅಥವಾ ನಿಮ್ಮ ಬೆರಳಿಗೆ ತಾಮ್ರದ ಉಂಗುರ ಧರಿಸಿದರೆ, ಜಾತಕದಲ್ಲಿ ಸೂರ್ಯ ಮತ್ತು ಮಂಗಳನ ಸ್ಥಾನವು ಬಲವಾಗಿರುತ್ತದೆ. ಹಾಗೆಯೇ ಇದರೊಂದಿಗೆ ಆರೋಗ್ಯಕ್ಕೆ(health) ಸಂಬಂಧಿಸಿದ ಅನೇಕ ಪ್ರಯೋಜನಗಳಿವೆ. ತಾಮ್ರದ ಉಂಗುರ ಅಥವಾ ಕಡಗವನ್ನು ಧರಿಸಿದರೆ ಅನೇಕ ರೋಗದಿಂದ ದೂರವಿರಬಹುದು. ತಾಮ್ರದ ಉಂಗುರ ಧರಿಸಿದವರಿಗೆ ಹೊಟ್ಟೆಗೆ (stomach)ಸಂಬಂಧಿಸಿದ ಸಮಸ್ಯೆಗಳು ಎಂದಿಗೂ ಇರುವುದಿಲ್ಲ ನೀವು ನಿಮ್ಮ ಜೀವನದಲ್ಲಿ ಬಹಳ ಸಂತೋಷದಿಂದ ಮತ್ತು ಆರೋಗ್ಯಕರವಾಗಿ ಇರಬಹುದು.
ಹಾಗೆಯೇ ತಾಮ್ರದ ಉಂಗುರವನ್ನು ಧರಿಸಿದರೆ ನಿಮ್ಮ ದೇಹದಲ್ಲಿ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇಲ್ಲದೆ ರಕ್ತದ ಹರಿವು ಕೂಡ ಉತ್ತಮವಾಗಿರುತ್ತದೆ ಮತ್ತು ರಕ್ತವೂ ಶುದ್ಧವಾಗುತ್ತದೆ. ಉಂಗುರದ ಬೆರಳಿನಲ್ಲಿ ತಾಮ್ರದ ಉಂಗುರ ಧರಿಸುವುದರಿಂದ ಸೂರ್ಯ ಮತ್ತು ಮಂಗಳನ ನಿಂದ ಬರುವ ದುಷ್ಪರಿಣಾಮಗಳನ್ನು ತಡೆಯಬಹುದು.
ತಾಮ್ರದ ಉಂಗುರದಿಂದ ಯಶಸ್ಸು ಖಂಡಿತ
ತಾಮ್ರದ ಉಂಗುರವನ್ನು ನೀವು ಧರಿಸಿದರೆ ನಿಮಗೆ ಯಶಸ್ಸು ಖಂಡಿತವಾಗಿ ಲಭಿಸುತ್ತದೆ. ಸೂರ್ಯನ ದೋಷದಿಂದ ವ್ಯಕ್ತಿಯ ವೃತ್ತಿಜೀವನದಲ್ಲಿನ ತೊಂದರೆಗಳು ದೂರವಾಗುತ್ತವೆ. ಏಕೆಂದರೆ ತಾಮ್ರವು ಸೂರ್ಯನ ದೋಷದ ಋಣಾತ್ಮಕ ಪರಿಣಾಮವನ್ನು ನಾಶಪಡಿಸುತ್ತದೆ ಮತ್ತು ಅದು ನಿಮ್ಮನ್ನು ಮಾನಸಿಕ ಒತ್ತಡದಿಂದ ದೂರವಿರಿಸುತ್ತದೆ. ಇದನ್ನು ಧರಿಸಿದ ನಂತರ ಕೋಪ (anger) ಮತ್ತು ಕಿರಿಕಿರಿಯು ದೂರವಾಗಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಮತ್ತು ಯಾರೊಂದಿಗೂ ನೀವು ಜಗಳವನ್ನು ಆಡಲು ಹೋಗುವುದಿಲ್ಲ.
ನೀವು ಹೆಚ್ಚಿನ ರೀತಿ ಜೀವನದಲ್ಲಿ ಪ್ರಗತಿಯನ್ನು ಕಾಣುತ್ತೀರಿ.
ತಾಮ್ರದ ಉಂಗುರವನ್ನು(Astrology copper ring) ಧರಿಸಿದ ನಂತರ ನಿಮ್ಮ ಸ್ಥಾನ ಮತ್ತು ಪ್ರತಿಷ್ಠೆಯನ್ನು ಬೇರೆ ಮಟ್ಟಕ್ಕೆ ಕೊಂಡೊಯ್ಯುತ್ತದೆ ಅಂದರೆ ನೀವು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತೀರಿ.. ಜ್ಯೋತಿಷಿಗಳ ಪ್ರಕಾರ ದೀರ್ಘಕಾಲದವರೆಗೆ ಬಡ್ತಿ ಪಡೆಯದ ಜನರು ತಮ್ಮ ಪ್ರಭಾವ ಹೆಚ್ಚಿಸಲು ತಾಮ್ರದ ಉಂಗುರ ಧರಿಸಬಹುದು.ಇದರಿಂದ ಅವರಿಗೆ ಅನುಕೂಲ ಹೆಚ್ಚು. ಇದನ್ನು ಧರಿಸಿದ ನಂತರ ನಿಮ್ಮ ಕೆಲಸವೂ ವೇಗಗೊಳ್ಳುತ್ತದೆ ಮತ್ತು ಇತರರ ಮುಂದೆ ನೀವು ತಲೆತಗ್ಗಿಸಿ ನಿಂತುಕೊಳ್ಳುವುದನ್ನು ಬಿಟ್ಟು ತುಂಬಾ ಪ್ರಭಾವಶಾಲಿಯಾಗಿ ಕಾಣುತ್ತೀರಿ. ಇದನ್ನು ಧರಿಸಿದ ನಂತರ ವೃತ್ತಿಜೀವನಕ್ಕೆ ಸಂಬಂಧಿಸಿದ ಅನೇಕ ಪ್ರಯೋಜನಗಳಿವೆ. ಹಾಗಾಗಿ ಜ್ಯೋತಿಷ್ಯದ ಪ್ರಕಾರ ತಾಮ್ರದ ಉಂಗುರ (ring) ಮತ್ತು ಕಡಗವನ್ನು ಧರಿಸಿದರೆ ಯಾವಾಗಲೂ ಒಳ್ಳೆಯದು ಲಭಿಸುತ್ತದೆ.