Sudeep Vs Prakash Raj : ದರ್ಶನ್ ಪ್ರಚಾರ ಮಾಡಿದಾಗ ಯಾಕೆ ಸುಮ್ನಿದ್ರಿ? ಕಿಚ್ಚನ ಫ್ಯಾನ್ಸ್ ನಟ ಪ್ರಕಾಶ್ ರಾಜ್ ವಿರುದ್ಧ ಕೆಂಡಾಮಂಡಲ!

 

Sudeep Vs Prakash Raj : ಕಿಚ್ಚ ಸುದೀಪ್ ಅವರು ಸಿಎಂ ಬಸವರಾಜ್ ಬೊಮ್ಮಾಯಿ ಪರ ಪ್ರಚಾರಕ್ಕೆ ನಿಲ್ಲುತ್ತೇನೆ ಎಂದು ಘೋಷಿಸಿದ ಹಿನ್ನಲೆ ಪ್ರಕಾಶ್ ರಾಜ್ ಅವರು ಟ್ವೀಟ್ ಮೂಲಕ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಇವರ ಈ ಟ್ವೀಟ್ ವಾರ್ ಇನ್ನು ಮುಂದುವರೆಯುತ್ತಲೇ ಇದ್ದು, ಸರಣಿ ಟ್ವೀಟ್ ಗಳ ಮೂಲಕ ಕಿಚ್ಚ ಅವರಿಗೆ ಟಾಂಗ್ ಕೊಡುತ್ತಿದ್ದಾರೆ. ಕಿಚ್ಚ ಅವರು ಪ್ರಚಾರಕ್ಕೆ ಕಾಲಿಡುವ ಮುನ್ನವೇ ಹಲವಾರು ವಿಚಾರ ಹರಿದಾಡುತ್ತಿರುವುದಕ್ಕೆ ” ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭಯಕ್ಕೆ ಕಿಚ್ಚ ಅವರು ಬಿಜೆಪಿ ಗೆ ಸೇರುತ್ತಾರೆ ಎಂದು ಹೇಳುತ್ತಿದ್ದಾರೆ ಅಷ್ಟೇ ಆದರೆ ನಮ್ಮ ಕಿಚ್ಚ ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಹೋಗಿ ತಮ್ಮನ್ನು ನಾವು ಮಾರಿಕೊಳ್ಳುವುದಿಲ್ಲ ” ಎಂದು ಟ್ವಿಟ್ ಮೂಲಕ ಬೇಸರ ವ್ಯಕ್ತ ಪಡಿಸಿದರು ಪ್ರಕಾಶ್ ರಾಜ್. ಈ ಟ್ವೀಟ್ ನಿಂದ ಶುರುವಾದ ಸರಣಿ ಇನ್ನೂ ಮುಂದುವರೆಯುತ್ತಲೇ ಇದೆ.

ಇದೀಗ ಪ್ರಕಾಶ ರಾಜ್ ಅವರು ಕಿಚ್ಚ(Sudeep Vs Prakash Raj) ಅವರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಇದರಿಂದ ಕಿಚ್ಚ ಅವರ ಅಭಿಮಾನಿಗಳು ಪ್ರಕಾಶ್ ರಾಜ್ ವಿರುದ್ಧ ಕಿಡಿ ಕಾರಿದ್ದಾರೆ. ” ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣನಾ” ಎಂದು ಕೇಳುತ್ತಿದ್ದಾರೆ. ಇದರ ಹಿಂದೆ ದರ್ಶನ್ ಅವರು ಪ್ರಚಾರ ಮಾಡಿದಾಗ ಮಾತಾಡದೆ ಇದ್ದವರು ಇವಾಗ ಯಾಕೆ ಮಾತನಾಡುತ್ತಿದ್ದೀರಿ? ಎಂದು ಪ್ರಶ್ನಿಸುವುದರ ಮೂಲಕ ಕಿಡಿ ಕಾರುತ್ತಿದ್ದಾರೆ.

ಕಿಚ್ಚ ಅವರ ಸುದ್ದಿಗೋಷ್ಠಿ ನನಗೆ ನಿಜಕ್ಕೂ ಬೇಸರ ತಂದಿದೆ. ನಾನು ಸುದೀಪ್ ಅವರಿಂದ ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಟ್ವೀಟ್ ನಲ್ಲಿ ತಮ್ಮ ಬೇಸರವನ್ನು ಹೊರಹಾಕಿದ್ದಾರೆ.

ಇದರ ಜೊತೆಗೆ ಇನ್ನೊಂದು ಟ್ವೀಟ್ ಮಾಡುವ ಮೂಲಕ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ” ಸುದೀಪ್ ಅವರು ಒಬ್ಬ ಮೇರು ಕಲಾವಿದರಾಗಿದ್ದು , ಎಲ್ಲಾ ಜನರ ಪ್ರೀತಿಯನ್ನು ಪಡೆದುಕೊಂಡವರು, ಈ ರೀತಿ ರಾಜಕೀಯ ಪಕ್ಷದ ಬಣ್ಣವನ್ನು ಬಳಿದುಕೊಳ್ಳುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ, ಇನ್ನು ಮುಂದೆ ನಿಮ್ಮನ್ನು ಪ್ರಶ್ನಿಸುವ ಜನರ ದನಿಗೆ ತಯಾರಾಗಿರಿ ” ಎಂದರು.

ಕಿಚ್ಚ ಅವರು ಸುದ್ದಿಗೋಷ್ಠಿಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ನನ್ನ ಕಷ್ಟಕಾಲದಲ್ಲಿ ಜೊತೆಗೆ ನಿಂತಿದ್ದರು. ಹಾಗಾಗಿ ನಾನು ಅವರ ಪರ ಪ್ರಚಾರಕ್ಕೆ ನಿಲ್ಲುತ್ತೇನೆ ಎಂದು ಹೇಳಿದ್ದರು. ಇದಕ್ಕೆ ಮತ್ತೆ ಪ್ರಕಾಶ್ ರಾಜ್ ಅವರು ಟ್ವೀಟ್ ನಲ್ಲಿ ” ನೋಡ್ರಪ್ಪ… ನಿಮ್ ಮಾಮನೊ.. ನಿಮ್ ಅತ್ತೇನೊ.. ನಿಮ್ ಕಷ್ಟಕಾಲದಲ್ಲಿ ಸಹಾಯ ಮಾಡಿದ್ರೆ.. ನೀವು ದುಡಿದಿದ್ರಲ್ಲಿ 10%..20% ಇಲ್ಲ 30 % ಕೊಡಿ.. ಅದು ನಿಮ್ಮಿಷ್ಟ .. ಆದ್ರೆ, ಪ್ರಜೆಗಳ 30% ಕೊಳ್ಳೆ ಹೊಡೆಯೊಕ್ ಬಿಡ್ಬೇಡಿ .. ಅಷ್ಟೆ..ಅಷ್ಟೇ ” ಎಂದು ಟಾಂಗ್ ಕೊಟ್ಟಿದ್ದಾರೆ.

ಈ ಟಾಂಗ್ ಗೆ ಕಿಚ್ಚ ಅವರ ಅಭಿಮಾನಿಗಳು ಹಾಗೂ ನೆಟ್ಟಿಗರು ಪ್ರಕಾಶ್ ರಾಜ್ ವಿರುದ್ದ ತಿರುಗಿ ಬಿದ್ದು, ” ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಬೇಡ ” ಎಂದು ಕಿಡಿ ಕಾರಿದ್ದಾರೆ. ಮತ್ತು ಈ ವಿಚಾರ ಕುರಿತು ಕಿಚ್ಚ ಅವರ ಅಭಿಮಾನಿಯೊಬ್ಬರು “ಪ್ರೀತಿಯ ಪ್ರಕಾಶ್ ಸರ್ ಅವರೇ.. ನಾನು ನಿಮ್ಮ ಆಲೋಚನೆಗಳು ಮತ್ತು ತೆರೆ ಹಿಂದಿನ ವರ್ತನೆಯ ದೊಡ್ಡ ಅಭಿಮಾನಿ. ಸುದೀಪ್ ಸರ್ ಅವರ ಡೈ ಹಾರ್ಡ್ ಪ್ಯಾನ್ ಆಗಿದ್ದು, ನಿಮ್ಮ ನಿರ್ಧಾರದ ಬಗ್ಗೆ ತೀವ್ರ ನಿರಾಸೆಯಾಗಿದೆ. ನಿರಂತರವಾಗಿ ನೀವು ಟ್ವೀಟ್ ಮೂಲಕ ಟಾರ್ಗೆಟ್ ಮಾಡುತ್ತಿರುವುದು ಸರಿಯಲ್ಲ. ಸತೀಶ್ ರೆಡ್ಡಿ ಪರ ಹೇಗೆ ದರ್ಶನ್ ಪ್ರಚಾರ ಮಾಡಿದ್ರೋ ಹಾಗೇ ಇವರೂ ಮಾಡುತ್ತಿದ್ದಾರಷ್ಟೇ ಎಂದು ಟ್ವೀಟ್ ಮಾಡಿದ್ದಾರೆ.

ಮತ್ತೊಂದೆಡೆ ನೆಟ್ಟಿಗರು ಕೂಡ ಪ್ರಕಾಶ ಅವರಿಗೆ ಟ್ವೀಟ್ ಮುಲಕ ಟಾಂಗ್ ಕೊಡುತ್ತಿದ್ದಾರೆ ನೆಟ್ಟಿಗರು. ” ನೀವು ಒಬ್ಬರು ನಟರು, ನಿಮ್ಮ ಮೇಲೆ ನಮಗೆ ಗೌರವವಿದೆ ಆದರೆ ನೀವು ಕಾಂಗ್ರೆಸ್ ಪಕ್ಷದ ಕಡೆ ಎಂಬುವುದು ಎಲ್ಲರಿಗೂ ತಿಳಿದಿದೆ. ಅವರ ಚುನಾವಣೆ ಅವರ ಮತ ತೆಗೆದುಕೊಳ್ಳುವ ತಂತ್ರ ಅವರಿಗೆ ಬಿಟ್ಟಿದ್ದು, ನೀವು ಯಾಕೆ ಮಧ್ಯ ಬರುತ್ತೀರಾ? ನೀವು ಬೇಕಾದರೆ ಸ್ಯಾಂಡಲ್ ವುಡ್ ನಲ್ಲಿ ಬೇಕಾದಷ್ಟು ಜನ ಇದ್ದಾರೆ ಅವರನ್ನು ಕರ್ಕೊಂಡು ಹೋಗಿ ” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನು ಓದಿ : Tejasvi Surya: ಎಸ್ಡಿಪಿಐ-ಪಿಎಫ್ಐ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ: ಸಂಸದ ತೇಜಸ್ವಿ ಸೂರ್ಯ ಹೇಳಿಕೆ!

Leave A Reply

Your email address will not be published.