Outdoor toilet : ಬಯಲು ಶೌಚದ ವೇಳೆ ಗುಪ್ತಾಂಗದ ಒಳ ನುಸುಳಿದ ಹಾವು, ವೈದ್ಯರು ಹೇಳಿದ್ದೇನು ?!

Outdoor toilet : ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಆಸ್ಪತ್ರೆಗೆ ಹೋಗಿದ್ದು ಅಲ್ಲಿ ಏನಾಯಿತು ಹೇಳಿದ ವಿಚಾರ ಕೇಳಿ ವೈದ್ಯರು ಬೆಚ್ಚಿ ಬಿದ್ದಿದ್ದಾರೆ. ಬಯಲು ಶೌಚದ (Outdoor toilet) ವೇಳೆ ಹಾವೊಂದು ಗುಪ್ತಾಂಗದಿಂದ ದೇಹವನ್ನು ಪ್ರವೇಶಿಸಿದೆ ಎಂದು ಹೇಳಿದ ಆತನ ಮಾತು ಕೇಳಿ ವೈದ್ಯರೇ ದಂಗಾಗಿರುವ ಪ್ರಸಂಗ ಬೆಳಕಿಗೆ ಬಂದಿದೆ.

 

ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನಿವಾಸಿ ಮಹೇಂದ್ರ ಎಂಬಾತ ಮಧ್ಯರಾತ್ರಿ ಹರ್ದೋಯ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಧಾವಿಸಿ ಬಂದಿದ್ದಾನೆ. ವೈದ್ಯರು ಏನಾಗಿದೆ ನಿಮಗೆ ಎಂದು ಕೇಳಿದಾಗ, ‘ ಹಾವೊಂದು ದೇಹ ಪ್ರವೇಶಿಸಿದೆ ‘ ಎಂದಿದ್ದಾನೆ. ಇದರಿಂದ ಆಸ್ಪತ್ರೆ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ.

ಆದರೆ ಮಹೇಂದ್ರನ ಇಡೀ ದೇಹವನ್ನು ಪರೀಕ್ಷಿಸಿದಾಗ ಹಾವಿನ ಕಡಿತವಾಗಲಿ ಅಥವಾ ಯಾವುದೇ ವಸ್ತುವಾಗಲಿ ಆತನ ದೇಹದ ಒಳಗೆ ಕಂಡುಬಂದಿಲ್ಲ.’ ಹಾವು ಒಳ ಸೇರಿಲ್ಲ ‘ ಎಂದು ಒಪ್ಪಲು ತಯಾರಿಲ್ಲ ಮಹೇಂದ್ರನನ್ನು ಪರೀಕ್ಷಿಸಿದ ವೈದ್ಯರು ‘ ನೀನು ಅಂದುಕೊಂಡಂತೆ ನಿನ್ನ ದೇಹವನ್ನು ಯಾವುದೇ ಹಾವು ಪ್ರವೇಶಿಸಿಲ್ಲ. ನಿನಗೆ ಏನೂ ಆಗಿಲ್ಲ ‘ ಎಂದು ಹೇಳಿದ್ದಾರೆ. ಆದರೂ ವೈದ್ಯರ ಮಾತನ್ನು ನಂಬದ ಮಹೇಂದ್ರ ಮತ್ತವರ ಕುಟುಂಬ ಮತ್ತೊಮ್ಮೆ ಪರೀಕ್ಷೆಗಾಗಿ ಬೇರೊಂದು ಆಸ್ಪತ್ರೆಗೆ ವರ್ಗಾವಣೆ ಮಾಡಿ ಎಂದು ಪಟ್ಟು ಹಿಡಿದಿತ್ತು.

ಕೊನೆಗೂ ಮಹೇಂದ್ರನನ್ನು ಪರೀಕ್ಷಿಸಿದ ವೈದ್ಯರು, ಈ ಅವಾಂತರಕ್ಕೆ ಕಾರಣವನ್ನು ಪತ್ತೆ ಮಾಡಿದ್ದಾರೆ. ಏರಿಸಿದ ಮದ್ಯವೇ ಇದಕ್ಕೆಲ್ಲ ಕಾರಣವಂತೆ. ಮಹೇಂದ್ರ ಬಯಲು ಶೌಚದಲ್ಲಿ ಹಾವನ್ನು ನೋಡಿ ತನಗೆ ತಾನು ಏನೇನೋ ಕಲ್ಪನೆ ಮಾಡಿಕೊಂಡು ಈ ರೀತಿ ಆಡಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಒಂದು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಮರುದಿನ ಬೆಳಿಗ್ಗೆ ಆತನನ್ನು ಡಿಸ್ಟಾರ್ಜ್ ಮಾಡಿ ಕಳುಹಿಸಿದ್ದಾರೆ.

ಈ ವೈದ್ಯರು ಹೇಳಿದ್ದೇನು?
ವೈದ್ಯ ಡಾ. ಶೇರ್ ಸಿಂಗ್ ಪ್ರಕಾರ ಅವರ ಪ್ರಕಾರ ಮಹೇಂದ್ರನು ಮದ್ಯದ ಅಮಲಿನಲ್ಲಿ ಇದ್ದ ಮತ್ತು ಹೊಟ್ಟೆ ನೋವು ಇದೆ ಎಂದು ದೂರು ನೀಡುತ್ತಿದ್ದ. ಹಾವು ಗುಪ್ತಾಂಗ ಒಳ ಹೊಕ್ಕದ್ದು ಕೇವಲ ಭ್ರಮೆ. ಇದು ವಿಪರೀತ ಮಾದಕವಸ್ತು ಸೇವನೆಯಿಂದ ಉಂಟಾಗುತ್ತದೆ. ಎಲ್ಲಾದರೂ ಹಾವು ಗುಪ್ತಾಂಗದ ಮೂಲಕ ದೇಹ ಸೇರುವುದುಂಟಾ? ಈವರೆಗೆ ಈ ರೀತಿಯ ಪ್ರಕರಣಗಳ ಉದಾಹರಣೆ ಎಲ್ಲೂ,ಯಾವ ದೇಶದಲ್ಲೂ ನಡೆದಿಲ್ಲ. ಈ ಘಟನೆ ಮದ್ಯದ ಅಮಲಿನಲ್ಲಿ ಆದ ಯಡವಟ್ಟು ಎಂದು ವೈದ್ಯರು ಹೇಳಿದ್ದಾರೆ.

 

ಇದನ್ನು ಓದಿ : Gold-Silver Price today : ಚಿನ್ನದ ದರದಲ್ಲಿ ಇಂದು ಏರಿಕೆ! 

Leave A Reply

Your email address will not be published.